Headlines

ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ನೇತ್ರತ್ವದ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ : ಜೆಡಿಎಸ್ ಮುಖಂಡರ ಅಭಿಮತ|Jds

ಹೊಸನಗರ : ಮಾಜಿ‌ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ರಾಜ್ಯ ಜೆಡಿಎಸ್ ಪಕ್ಷದ ಚುಕ್ಕಾಣಿ ಹಿಡಿದಿರುವ ಸಿಎಂ ಇಬ್ರಾಹಿಂ ರವರ ನೇತೃತ್ವದಲ್ಲಿ ಈ ಬಾರಿ ರಾಜ್ಯದ ಆಡಳಿತ ಚುಕ್ಕಾಣಿ ಜೆಡಿಎಸ್ ಪಕ್ಷಕ್ಕೆ ದೊರಕಲಿದೆ ಎಂದು ಜಿಲ್ಲಾ ಜೆಡಿಎಸ್ ಮುಖಂಡ ರಾಮಕೃಷ್ಣ ಹೇಳಿದರು. ಅವರು ಇಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ತಾಲೂಕು ಜೆಡಿಎಸ್  ಪ್ರಮುಖರ ಸಭೆಯಲ್ಲಿ ಮಾತನಾಡಿ ಜಿಲ್ಲೆಯವರೇ ಆದಂತಹ ರಾಜ್ಯದ ಜೆಡಿಎಸ್ ಅಧ್ಯಕ್ಷ ಸಿಎಂ ಇಬ್ರಾಹಿಂ ರವರು ಜನವರಿ 7ರಂದು ಜಿಲ್ಲೆಗೆ ಆಗಮಿಸಲಿದ್ದು ಪಕ್ಷದ ಪುನರ್…

Read Full News

ಶರಾವತಿ ಸಂತ್ರಸ್ತರ ಸಮಸ್ಯೆ ಬಗ್ಗೆ ಮಾತನಾಡುವ ನೈತಿಕತೆ ಬೇಳೂರು ಗೋಪಾಲಕೃಷ್ಣ ರಿಗೆ ಇಲ್ಲಾ – ಬಿಜೆಪಿ|Ripponpet

ರಿಪ್ಪನ್‌ಪೇಟೆ : ಎರಡು ಬಾರಿ ಶಾಸಕರಾಗಿದ್ದಾಗ ಶರಾವತಿ ಮುಳಗಡೆ ಸಂತ್ರಸ್ಥರ ಬಗ್ಗೆ ತುಟಿ ಬಿಚ್ಚದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ರವರಿಗೆ ಈಗ ಮುಳುಗಡೆ ಸಂತ್ರಸ್ಥರು ಧರ್ಮಸ್ಥಳಕ್ಕೆ ಹೋಗಿರುವುದನ್ನು ಟೀಕಿಸುವುದಕ್ಕೆ ಯಾವುದೇ ನೈತಿಕತೆ ಇಲ್ಲಾ ಎಂದು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ. ಮಂಜುನಾಥ ಆರೋಪಿಸಿದರು. ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಶರಾವತಿ ಸಂತ್ರಸ್ಥ ಮುಖಂಡರ ಜೊತೆ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಸಂತ್ರಸ್ಥರ ಹಕ್ಕಿಗಾಗಿ ಈಗಾಗಲೇ ಲೋಕಸಭೆಯಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರರವರು ಕೇಂದ್ರ ಸರಕಾರದ ಗಮನಸೆಳೆದಿದ್ದಾರೆ. ಶಾಸಕರಾದ ಹರತಾಳು ಹಾಲಪ್ಪ…

Read Full News

ರಿಪ್ಪನ್‌ಪೇಟೆ ಸಮೀಪದ ಗಾಳಿಬೈಲು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ – ಚಿರತೆ ಹಿಡಿಯಲು ಅರಣ್ಯ ಅಧಿಕಾರಿಗಳಿಂದ ಬೋನ್ ಫಿಕ್ಸ್|leopard

ರಿಪ್ಪನ್ ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಳಿಬೈಲು ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಚಿರತೆ ಪ್ರತಿಕ್ಷವಾಗಿದ್ದು ಗ್ರಾಮಸ್ಥರು ಭಯಭೀತರಾಗಿದ್ದರು. ಚಿರತೆ ಪ್ರತ್ಯಕ್ಷ ಸುದ್ದಿ ತಿಳಿದ ಅರಸಾಳು ವಲಯ ಅರಣ್ಯ ಅಧಿಕಾರಿಗಳು ಇಂದು ಸ್ಥಳ ಪರಿಶೀಲನೆ ನಡೆಸಿ ಚಿರತೆ ಹಿಡಿಯಲು ಗಾಳಿಬೈಲಿನಲ್ಲಿ ಬೋನ್ ಫಿಕ್ಸ್ ಮಾಡಿದ್ದಾರೆ.  ರಿಪ್ಪನ್ ಪೇಟೆ ಸುತ್ತಮುತ್ತ ಗ್ರಾಮಗಳಲ್ಲಿ ಚಿರತೆಗಳು ಪ್ರತ್ಯಕ್ಷವಾಗುತ್ತಿವೆ :  ಕಳೆದ ನಾಲ್ಕು ದಿನಗಳ ಹಿಂದೆ ರಿಪ್ಪನ್ ಪೇಟೆ- ತೀರ್ಥಹಳ್ಳಿ ರಾಜಹೆದ್ದಾರಿ ಸಮೀಪದ ಮಳವಳ್ಳಿ…

Read Full News

ಹೃದಯಘಾತದಿಂದ 28ರ ಹರೆಯದ ಗೃಹಿಣಿ ಅಪಮೃತ್ಯು|heart attack

ಪುನೀತ್ ರಾಜ್‍ಕುಮಾರ್ ಹೃದಯಾಘಾತದಿಂದ ಮರಣ ಹೊಂದಿದ ನಂತರದಲ್ಲಿ ರಾಜ್ಯದಲ್ಲಿ ಅತಿ ಕಿರಿ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನೆಲ್ಲುಂಡೆಯ ಗ್ರಾಮದ ಗೃಹಿಣಿ ಸುಪ್ರೀತಾ(28) ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ನೆಲ್ಲುಂಡೆಯ ರವೀಂದ್ರ ಮತ್ತು ಸುಧಾ ದಂಪತಿಗಳ ಪುತ್ರಿ 28ರ ಹರೆಯದ ಸುಪ್ರೀತಾ ಅಲ್ಪ ಕಾಲದ ಅನಾರೋಗ್ಯದಲ್ಲಿದ್ದು ಗುರುವಾರ ಬೆಳಗಿನ ಜಾವ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ. ಸುಪ್ರೀತಾರವರು ಕಳೆದ ನಾಲ್ಕು ವರ್ಷದ ಹಿಂದೆ ಕೊಡೂರಿನ ಆದರ್ಶ ಎಂಬವರೊಂದಿಗೆ ವಿವಾಹವಾಗಿದ್ದರು. ಪಟ್ಟಣದ ಶಾರದಾ…

Read Full News

ಹೆದ್ದಾರಿಪುರ ಗ್ರಾಪಂ ಅಧ್ಯಕ್ಷರಾಗಿ ಸುಮಿತ್ರಮ್ಮ ಅವಿರೋಧ ಆಯ್ಕೆ|heddaripura

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹೆದ್ದಾರಿಪುರ ಗ್ರಾ.ಪಂ. ಅಧ್ಯಕ್ಷರಾಗಿ ಸುಮಿತ್ರಮ್ಮ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವಿಶ್ವಾಸ ನಿರ್ಣಯದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಸುಮಿತ್ರಮ್ಮ ರವರನ್ನು ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗೆ ಹೊಸನಗರ ತಾಲೂಕ್ ಅಕ್ಷರ ದಾಸೋಹ ಅಧಿಕಾರಿ ನಾಗರಾಜ್ ಪಾಲ್ಗೊಂಡಿದ್ದರು. ಹೆದ್ದಾರಿಪುರ ಗ್ರಾಪಂ ನೂತನ ಅಧ್ಯಕ್ಷೆ ಸುಮಿತ್ರಮ್ಮ ರವರಿಗೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ,ಕೆರೆಹಳ್ಳಿ- ಹುಂಚಾ ಹೋಬಳಿ ಶಕ್ತಿ ಕೇಂದ್ರದ ಅಧ್ಯಕ್ಷ ಎಂ ಬಿ ಮಂಜುನಾಥ್ ,ಮುಖಂಡರಾದ ಗಿರೀಶ್ ,ಸತೀಶ್…

Read Full News

ರಿಪ್ಪನ್‌ಪೇಟೆಯಲ್ಲಿ ಹಾನಗಲ್ ಕುಮಾರೇಶ್ವರ ರಥಯಾತ್ರೆಗೆ ಅದ್ದೂರಿ ಸ್ವಾಗತ|Viraagi

ರಿಪ್ಪನ್‌ಪೇಟೆ : ಹಾನಗಲ್ ಶ್ರೀ ಗುರುಕುಮಾರೇಶ್ವರ ಶಿವಯೋಗಿಗಳ ಕುರಿತು ಜನವರಿ ೧೨ ರಂದು ಬಿಡುಗಡೆಯಾಗಲಿರುವ ವಿರಾಟಪುರ ವಿರಾಗಿ ಚಲನಚಿತ್ರಕ್ಕೆ ಸಂಬಂಧಿಸಿದಂತೆ ಶ್ರೀ ಕುಮಾರೇಶ್ವರ ರಥ ಯಾತ್ರೆ ನಾಡಿನ ವ್ಯಾಪ್ತಿ ಸಂಚರಿಸುತ್ತಿದ್ದು ಇಂದು ಅನಂದಪುರ ಮಾರ್ಗವಾಗಿ ರಥವು ರಿಪ್ಪನ್‌ಪೇಟೆಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಸಾಗರ ರಸ್ತೆಯ ಒಕ್ಕಲಿಗರ ಸಮುದಾಯ ಭವನದ ಬಳಿ ಅದ್ದೂರಿಯಾಗಿ ಸ್ವಾಗತಿಸಿ ಬೈಕ್ ರ‍್ಯಾಲಿ ಮೂಲಕ ವಿನಾಯಕ ವೃತ್ತದ ಮೂಲಕ ಭೂಪಾಳಂ ಚಂದ್ರಶೇಖರಯ್ಯ ಸಬಾಭವನಕ್ಕೆ ಕರೆ ತರಲಾಯಿತು. ಭೂಪಾಳಂ ಚಂದ್ರಶೇಖರಯ್ಯ ಸಬಾಭವನದಲ್ಲಿ ಹತ್ತು ನಿಮಿಷದ ಹಾನಗಲ್ ಕುಮಾರೇಶ್ವರ…

Read Full News

ಅಂತರ್ ವಿಶ್ವವಿದ್ಯಾಲಯದ ವಾಲಿಬಾಲ್ ಪಂದ್ಯಾವಳಿಗೆ ಅರಸಾಳಿನ ನಮಿತಾ ಹೆಗಡೆ ಆಯ್ಕೆ|volleyball

ರಿಪ್ಪನ್ ಪೇಟೆ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ದಕ್ಷಿಣ ವಿಭಾಗದ ಅಂತರ್ ರಾಜ್ಯ ವಾಲಿಬಾಲ್ ಪಂದ್ಯಾವಳಿಯಲ್ಲಿ  ಕರ್ನಾಟಕವನ್ನು ಪ್ರತಿನಿಧಿಸುವ  ತಂಡದಲ್ಲಿ  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅರಸಾಳು ಗ್ರಾಮದ ನಮಿತಾ ಹೆಗಡೆ ಆಯ್ಕೆಯಾಗಿದ್ದಾರೆ. ಡಿಸೆಂಬರ್ 27 ರಿಂದ 31 ರವರೆಗೆ ಕೇರಳದ ಕೊಟ್ಟಾಯಂ ನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಅಂತರ್ ವಿಶ್ವವಿದ್ಯಾಲಯ ವಾಲಿಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಅರಸಾಳು ಗ್ರಾಮದ ನಿವಾಸಿಗಳಾದ ಸತೀಶ್ ಹೆಗ್ಡೆ ಮತ್ತು ಐಶ್ವರ್ಯ ದಂಪತಿಗಳ ಪುತ್ರಿಯಾದ ನಮಿತಾ ಹೆಗ್ಡೆ ಪ್ರಸ್ತುತ ಮಂಗಳೂರಿನ ಕೆನರಾ…

Read Full News

IPL Auction ನೆನಪಿಸುವಂತೆ ನಡೆದ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಆಟಗಾರರ ಹರಾಜು ಪ್ರಕ್ರಿಯೆ….!!!!!!!

ಹೆದ್ದಾರಿಪುರ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕ್ರಿಕೆಟ್‌ ಪ್ರೀಮಿಯರ್ ಆಯೋಜನೆ ಗರಿಗೆದರತೊಡಗಿವೆ.  ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರದಲ್ಲಿ ಎರಡನೇ ಆವೃತ್ತಿಯ ಹೆದ್ದಾರಿಪುರ ಪ್ರೀಮಿಯರ್ ಲೀಗ್(HPL) ಕ್ರಿಕೆಟ್ ಟೂರ್ನಿ ಆಯೋಜನೆಗೆ ಈಗ ಭರ್ಜರಿ ಚಾಲನೆ ಸಿಕ್ಕಿದ್ದು, ಭಾನುವಾರ ವೃತ್ತಿಪರ ಶೈಲಿಯಲ್ಲಿ ಐಪಿಎಲ್ ಹರಾಜು ನೆನಪಿಸುವಂತೆ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಆಟಗಾರರ ಹರಾಜು ನಡೆದಿದೆ. ಎರಡನೇ ಆವೃತ್ತಿಯ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 12 ತಂಡಗಳು ಪಾಲ್ಗೊಳ್ಳುತ್ತಿದ್ದು,…

Read Full News

ಕಲಿಕಾ ಹಬ್ಬವು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿ|GJC

ರಿಪ್ಪನ್ ಪೇಟೆ : ಮಕ್ಕಳ ಕಲಿಕೆ ಮೇಲೆ ಕೊರೊನಾ ಮಹಾಮಾರಿಯಿಂದ ದುಷ್ಪಪರಿಣಾಮ ಉಂಟಾಗಿತ್ತು. ಕಲಿಕೆಯನ್ನು ಫಲಪ್ರದಗೊಳಿಸಲು ಶಿಕ್ಷಣ ಇಲಾಖೆಯ ಅನೇಕ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ನೂತನ ಶೈಲಿಯಲ್ಲಿ ರೂಪಿಸುತ್ತಾ ಬಂದಿದೆ. ಸದ್ಯ ಕಲಿಕಾ  ಹಬ್ಬ ಯೋಜನೆ ರೂಪಿಸುವ ಮೂಲಕ ಮಕ್ಕಳ ಕಲಿಕೆ ಸಹಾಯಕವಾಗುವ ನಿಟ್ಟಿನಲ್ಲಿ ಕಾರ್ಯ ಯೋಜನೆ ಹಮ್ಮಿಕೊಂಡಿದೆ ಎಂದು ಶಿವಮೊಗ್ಗ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಪರಮೇಶ್ವರಪ್ಪ ಹೇಳಿದರು. ಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ಪ್ರೌಢ ಶಾಲೆಯಲ್ಲಿ…

Read Full News

ನಾಳೆ(21-12-2022) ರಿಪ್ಪನ್‌ಪೇಟೆಗೆ ಹಾನಗಲ್ ಕುಮಾರೇಶ್ವರ ಮಹಾಸ್ವಾಮಿಯವರ ರಥ ಆಗಮನ|viratapura viraagi

ರಿಪ್ಪನ್‌ಪೇಟೆ : ಡಿಸೆಂಬರ್ 21ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಹಾನಗಲ್ಲು ಕುಮಾರೇಶ್ವರ ಮಹಾಸ್ವಾಮಿಗಳ ಜೀವನ ಕಥೆ ಆಧಾರಿತ ಚಲನ ಚಿತ್ರದ ಪ್ರಚಾರಾರ್ಥ ಕುಮಾರೇಶ್ವರ ರಥಯಾತ್ರೆ ಪಟ್ಟಣಕ್ಕೆ ಆಗಮಿಸಲಿದೆ ಎಂದು ಮೂಲೆಗದ್ದೆ ಮಠದ ಶ್ರೀಗಳಾದ ಅಭಿನವ ಚನ್ನಬಸವ ಮಹಾಸ್ವಾಮಿಗಳು ಹೇಳಿದರು. ಪಟ್ಟಣದಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಅವರು ವಿನಾಯಕ ವೃತ್ತದಲ್ಲಿ ಹಾನಗಲ್ಲು ಕುಮಾರೇಶ್ವರ ಮಹಾಸ್ವಾಮಿಗಳ ಜೀವನ ಕಥೆ ಆಧಾರಿತ ಚಲನಚಿತ್ರದ ಪ್ರಚಾರಾರ್ಥ ಸಾರ್ವಜನಿಕರಿಗೆ ಟೀಸರ್ ಪ್ರದರ್ಶನ ಇರುತ್ತದೆ.ಈ ರಥಯಾತ್ರೆಯ ಜೊತೆಗೆ ಹಲವಾರು ಗಣ್ಯ ವ್ಯಕ್ತಿಗಳು, ಸಮಾಜದ ಧುರೀಣರು ಭಾಗವಹಿಸಲಿದ್ದಾರೆ….

Read Full News

ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಬೊಮ್ಮಾಯಿ – ಆರ್ ಎಂ ಮಂಜುನಾಥ್ ಗೌಡ|DKS

ತೀರ್ಥಹಳ್ಳಿ : ಕರ್ನಾಟಕ ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಬೊಮ್ಮಾಯಿ ಯಾಗಿದ್ದು,ಕೇಂದ್ರ ಮತ್ತು ರಾಜ್ಯ ಸರ್ಕಾರ ಜನ ವಿರೋಧಿ ಚಟುವಟಿಕೆಗಳ ಜೊತೆಗೆ ತನ್ನ ತಪ್ಪುಗಳನ್ನು ಮತ್ತು ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೆಪಿಸಿಸಿ ನಾಯಕರಾದ ಡಿ ಕೆ ಶಿವಕುಮಾರ್ ಅವರ ಶಿಕ್ಷಣ ಸಂಸ್ಥೆಯ ಮೇಲೆ ದಾಳಿ ನೆಡೆಸಿದ್ದಾರೆ ಎಂದು ಸಹಕಾರ ವಿಭಾಗದ ಸಂಚಾಲಕರಾದ ಆರ್ ಎಂ ಮಂಜುನಾಥ್ ಗೌಡ ಹೇಳಿದರು. ಕರ್ನಾಟಕ ರಾಜ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ರವರ ಶಿಕ್ಷಣ ಸಂಸ್ಥೆಯ ಮೇಲೆ ರಾಜಕೀಯ ದುರುದ್ದೇಶದಿಂದ…

Read Full News

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು : ಎಂ ವೀರಭದ್ರಪ್ಪ

ರಿಪ್ಪನ್‌ಪೇಟೆ : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಪ್ರತಿಭೆಗಳಿದ್ದರೂ ಸಹ ಅವಕಾಶದ ಕೊರತೆಯಿಂದ ವಂಚಿತರಾಗುವುದನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆದುಕೊಂಡು ಉನ್ನತ ಮಟ್ಟದ ಅಧಿಕಾರಿಯಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು ಎಂದು ಹೊಸನಗರ ತಾಲೂಕ್ ನಿಕಟಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ವೀರಭದ್ರಪ್ಪ ಹೇಳಿದರು. ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ತಳಲೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ 59 ನೇ ವರ್ಷದ…

Read Full News

ರಿಪ್ಪನ್‌ಪೇಟೆ : ಗ್ರಾಪಂ ಸದಸ್ಯರ ಕಡೆಗಣನೆ ವಿರೋಧಿಸಿ ಕಾಂಗ್ರೆಸ್ ಸದಸ್ಯರ ಪ್ರತಿಭಟನೆ – ಕಾಮಗಾರಿ ಉದ್ಘಾಟನೆಯ ಪ್ಲೆಕ್ಸ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯನ ಫೋಟೋನೂ ಇಲ್ಲ, ಹೆಸರು ಇಲ್ಲ..!!!!!|Ripponpet

ರಿಪ್ಪನ್‌ಪೇಟೆ : ಇಲ್ಲಿನ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗವಟೂರು ವಾರ್ಡ್ ನಲ್ಲಿ ಶನಿವಾರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ನೆರವೇರಿಸಿದ  ಸಂಪರ್ಕ ರಸ್ತೆ ಡಾಂಬರೀಕರಣ ಕಾಮಗಾರಿ ಗುದ್ದಲಿಪೂಜೆಯ ಸಂದರ್ಭದಲ್ಲಿ ವಾರ್ಡ್ ನ ಸದಸ್ಯ ಗಣಪತಿ ಪೋಟೋವನ್ನು ಪ್ಲೆಕ್ಸ್ ನಲ್ಲಿ ಹಾಕದೇ ನಿರ್ಲಕ್ಷಿಸಿದ್ದಾರೆಂದು ಅರೋಪಿಸಿ ಇಂದು ಗ್ರಾಮ ಪಂಚಾಯ್ತಿ ಕಛೇರಿ ಎದುರು ಗಾಂಧಿ ಭಾವಚಿತ್ರವನ್ನಿಟ್ಟುಕೊಂಡು ಕಾಂಗ್ರೆಸ್ ಬೆಂಬಲಿತ ಸದಸ್ಯರು ಪ್ರತಿಭಟನೆ ನಡೆಸಿದರು. ಗವಟೂರು ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಾಗಿ ಇಬ್ಬರು, ಓರ್ವ ಕಾಂಗ್ರೆಸ್ ಬೆಂಬಲಿತ ಸದಸ್ಯ ಚುನಾವಣೆಯಲ್ಲಿ…

Read Full News

ಸೌಂದರ್ಯ ಮತ್ತು ಸಂಪತ್ತು ಶಾಶ್ವತವಲ್ಲ – ಧರ್ಮವೊಂದೆ ಶಾಶ್ವತ : ಮಳಲಿ ಶ್ರೀಗಳು|Ramakrishna school

ರಿಪ್ಪನ್‌ಪೇಟೆ : ವಿದ್ಯಾರ್ಥಿಗಳಿಗೆ ಸಂಸ್ಕಾರ ಸಂಸ್ಕೃತಿಯನ್ನು ಕಲಿಸುವುದರೊಂದಿಗೆ ಗುರು ಹಿರಿಯರನ್ನು ಪ್ರೀತಿ ವಿಶ್ವಾಸ ಗೌರವಾದರದಿಂದ ಕಾಣುವ ಗುಣವನ್ನು ಕಲಿಸಬೇಕು. ವಿದ್ಯ ಕದಿಯಲಾರದ ವಸ್ತುವಾಗಿದ್ದು ಕಲಿತ ವಿದ್ಯೆಯನ್ನು ಇನ್ನೊಬ್ಬರಿಗೆ  ದಾನ ಮಾಡಬೇಕು ರೂಪ ಮತ್ತು  ಹಣ ಶಾಶ್ವತವಲ್ಲ ಧರ್ಮವೊಂದೆ ಶಾಶ್ವತ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು. ಪಟ್ಟಣದ ಶ್ರೀ ಶಾರದಾ ರಾಮಕೃಷ್ಣ ವಿದ್ಯಾಲಯದ  ಶಾಲಾ ವಾರ್ಷೀಕೋತ್ಸವ ಮತ್ತು ಶ್ರೀಮಾತೆ ಶಾರದಾದೇವಿಯ ಜಯಂತಿ ಮಹೋತ್ಸವ ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅಶೀರ್ವಚನ ನೀಡಿ ಹೂವು ತನ್ನ…

Read Full News

ರಿಪ್ಪನ್‌ಪೇಟೆಯಲ್ಲಿ ಚಿರತೆ ದಾಳಿ ಪ್ರಕರಣ : ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಹರತಾಳು ಹಾಲಪ್ಪ|leopard

ರಿಪ್ಪನ್‌ಪೇಟೆ : ಶನಿವಾರ ತಡರಾತ್ರಿ ಪಟ್ಟಣದ ತೀರ್ಥಹಳ್ಳಿ ರಸ್ತೆಯ ಮಳವಳ್ಳಿ ಸಂಪರ್ಕ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷವಾಗಿ ಹಸುವೊಂದನ್ನು ಬಲಿ ಪಡೆದಿತ್ತು. ಮಳವಳ್ಳಿ ಗ್ರಾಮದ ಬಡ ರೈತ ವಿಶ್ವನಾಥ ಎಂಬುವವರ ಜೀವನಕ್ಕೆ ಆಸರೆಯಾಗಿದ್ದ ಹಸುವನ್ನು ಚಿರತೆ ಬಲಿ ಪಡೆದುಕೊಂಡ ಘಟನೆ ನಡೆದಿತ್ತು. ಮಳವಳ್ಳಿ ಗ್ರಾಮದಿಂದ ಶಾಲಾ ಕಾಲೇಜ್‌ಗೆ ಮತ್ತು ದಿನನಿತ್ಯದ ವ್ಯವಹಾರಕ್ಕಾಗಿ ಜನರು ಕಾಲ್ನಡಿಗೆಯಲ್ಲಿ ಬಂದು ಹೋಗುತ್ತಿದ್ದು ಈ ಘಟನೆಯಿಂದಾಗಿ ಗ್ರಾಮಸ್ಥರನ್ನು ಭಯಬೀತರನ್ನಾಗಿಸಿದೆ.ಓಡಾಡಲು ಭಯಪಡುವ ವಾತವರಣ ಸೃಷ್ಟಿಯಾಗಿದೆ. ಈ ಹಿನ್ನಲೆಯಲ್ಲಿ ಘಟನೆಯ ಕುರಿತು ತಕ್ಷಣ ಮಾಹಿತಿ ಪಡೆದುಕೊಂಡ ಸಾಗರ…

Read Full News

ರಿಪ್ಪನ್‌ಪೇಟೆಯಲ್ಲಿ ಚಿರತೆ ಪ್ರತ್ಯಕ್ಷ – ದಾಳಿಗೆ ಬಲಿಯಾದ ಹಸು : ಆತಂಕದಲ್ಲಿ ಗ್ರಾಮಸ್ಥರು|leopard

ರಿಪ್ಪನ್‌ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದಲ್ಲಿ ಶನಿವಾರ ತಡರಾತ್ರಿ ಚಿರತೆ ಪ್ರತ್ಯಕ್ಷವಾಗಿ ಜಾನುವಾರು ಬಲಿ  ಪಡೆದುಕೊಂಡ  ಘಟನೆ ನಡೆದಿದೆ. ರಿಪ್ಪನ್‌ಪೇಟೆ – ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಸಮೀಪದ ಮಳವಳ್ಳಿ ಗ್ರಾಮದ ಸಂಪರ್ಕ ರಸ್ತೆಯ ಬದಿಯಲ್ಲಿ ತಡರಾತ್ರಿ ಚಿರತೆಯೊಂದು ಹಸುವಿನ ಮೇಲೆ ದಾಳಿ ನಡೆಸಿ, ಸಾಯಿಸಿ ಹಸುವಿನ ಹೊಟ್ಟೆಯೊಳಗಿದ್ದ ಕರುವನ್ನು ಎಳೆದು ಸುಮಾರು ನೂರು ಅಡಿಯಷ್ಟು ದೂರದಲ್ಲಿ ಎಳೆದು ಹಾಕಿ ಹೋಗಿರುವಂತಹ ಹೃದಯಾ ವಿದ್ರಾವಕ ಘಟನೆ ನಡೆದಿದೆ. ಮಳವಳ್ಳಿ ಗ್ರಾಮದ ಬಡ ರೈತ ವಿಶ್ವನಾಥ್…

Read Full News

ಭಾರತ ದೇಶದ ಅಭಿವೃದ್ಧಿಯಲ್ಲಿ ಬ್ರಾಹ್ಮಣ ಸಮಾಜದ ಕೊಡುಗೆ ಅಪಾರ : ಹರತಾಳು ಹಾಲಪ್ಪ|Ripponpet

ರಿಪ್ಪನ್‌ಪೇಟೆ : ಭವ್ಯ ಭಾರತ ದೇಶದ ಅಭಿವೃದ್ಧಿಯಲ್ಲಿ ಬ್ರಾಹ್ಮಣ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಸಾಗರ-ಹೊಸನಗರ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ಪಟ್ಟಣದ ಸಾಗರ ರಸ್ತೆಯಲ್ಲಿನ ಬ್ರಾಹ್ಮಣ ಸಮಾಜದ ಶ್ರೀರಾಮಮಂದಿರದ ಸಮುದಾಯ ಭವನದ ಮೇಲಂತಸ್ತು ಕಟ್ಟಡದ ಕಾಮಗಾರಿಯನ್ನು ವೀಕ್ಷಿಸಿ ನಂತರ ಬ್ರಾಹ್ಮಣ ಸಮಾಜದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ದೇಶದ ಅಭಿವೃದ್ಧಿಯಲ್ಲಿ ಬ್ರಾಹ್ಮಣ ಸಮಾಜದ ಕೊಡುಗೆ ಅಪಾರವಾಗಿದೆ.ಧಾರ್ಮಿಕ ,ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಈ ಸಮಾಜ ದೇಶದ ಪ್ರಗತಿಯಲ್ಲಿ…

Read Full News

ಅಂಗನವಾಡಿ ಕಾರ್ಯಕರ್ತೆರಿಗೆ ಮತ್ತು ಸಹಾಯಕಿಯರಿಗೆ ಮನೆ ಮತ್ತು ಬಿಪಿಎಲ್ ಕಾರ್ಡ್ ಕಡ್ಡಾಯ ನೀಡುವಂತೆ ಸರ್ಕಾರಕ್ಕೆ ಒತ್ತಡ ಹೇರಲಾಗುವುದು : ಹರತಾಳು ಹಾಲಪ್ಪ|Ripponpet

ರಿಪ್ಪನ್‌ಪೇಟೆ : ಜಗತ್ತನ್ನು ವ್ಯಾಪಿಸಿದ್ದ ಕೊರೋನಾ ಮಹಾಮಾರಿ ರೋಗದ ಸಂದರ್ಭದಲ್ಲಿ ಅಂಗನವಾಡಿ ಆಶಾ ಮತ್ತು ಅರೋಗ್ಯ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಶ್ರಮಿಸಿರುವುದು ಪ್ರಸಂಶನೀಯವಾಗಿದೆ ಅದರೆ ಅವರಿಗೆ ಕನಿಷ್ಟ ವೇತನವಿಲ್ಲದೆ ಪರದಾಡುವ ಸ್ಥಿತಿ ಇದ್ದರೂ ಕರ್ತವ್ಯವನ್ನು ಪ್ರಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ ಇವರಿಗೆ ಇದೇ 19 ರಿಂದ ಅರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ನ್ಯಾಯಯುತ ಬೇಡಿಕೆಗೆ ಸ್ಪಂದಿಸಿ ಸರ್ಕಾರದ ಗಮನಸೆಳೆಯುವುದರೊಂದಿಗೆ ಪರಿಹಾರ ಕಲ್ಪಿಸುವ ಭರವಸೆಯನ್ನು ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ವ್ಯಕ್ತಪಡಿಸಿದರು. ರಿಪ್ಪನ್‌ಪೇಟೆಯ ಜ್ಯೋತಿಮಾಂಗಲ್ಯ…

Read Full News

ತೀರ್ಥಹಳ್ಳಿಯಲ್ಲಿ ಸಿನಿಹಬ್ಬ ಕಿರುಚಿತ್ರೋತ್ಸವ ಯಶಸ್ವಿ – ರಿಪ್ಪನ್‌ಪೇಟೆ ಮೂಲದ ಯುವ ನಿರ್ದೇಶಕ ಜಿಲ್ಸನ್ ನಿರ್ದೇಶನದ ಕಿರುಚಿತ್ರ ಪ್ರದರ್ಶನ|Short films

ತೀರ್ಥಹಳ್ಳಿ : ಡಿಸೆಂಬರ್ 15 ರಂದು ತೀರ್ಥಹಳ್ಳಿ “ಸಿನಿ ಹಬ್ಬ” ಕಿರು ಚಿತ್ರೋತ್ಸವ  ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ತೀರ್ಥಹಳ್ಳಿಯ ಕುರ್ಕುರೆ ಕ್ರಿಯೇಷನ್ಸ್ ತಂಡ ಆಯೋಜಿಸಿದ್ದು , ಶಿವಮೊಗ್ಗ ಸಿನಿಮಾಸ್ ಅಡ್ಡ ಹಾಗೂ ಸತ್ಯ ಪಿಚ್ಚರ್ಸ್ ಅವರು ಭಾಗಿಯಾಗಿದ್ದರು, ಕಾರ್ಯಕ್ರಮದಲ್ಲಿ ರಿಪ್ಪನ್‌ಪೇಟೆ ಮೂಲದ ಯುವ ನಿರ್ದೇಶಕ ಜಿಲ್ಸನ್ ಜೊಸೇಫ್ ನಿರ್ದೇಶನದ ಸಂಭಾಷಣೆ ಇಲ್ಲದ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಕಿರುಚಿತ್ರ “ಎಕ್ಸಿಬಿಷನಿಸಂ ” ಸೇರಿದಂತೆ 6 ಕಿರು ಚಿತ್ರಗಳ ಪ್ರದರ್ಶನವನ್ನು ಮಾಡಲಾಗಿತ್ತು.   ರಾಮಾ ರಾಮಾ ರೇ…

Read Full News

ಜೆಡಿಎಸ್ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಅರ್ ಎ ಚಾಬುಸಾಬ್ ನೇಮಕ|jds

ಜೆಡಿಎಸ್ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ನಿವಾಸಿ ಆರ್. ಎ. ಚಾಬುಸಾಬ್ ಅವರನ್ನು ನೇಮಿಸಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗಿ ಪಕ್ಷ ಸಂಘಟನೆಗೆ ಅಣಿಯಾಗುವಂತೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಆದೇಶ ನೀಡಿದ್ದಾರೆ. ಸುಮಾರು 30 ವರ್ಷಗಳಿಗೂ ಹೆಚ್ಚು ಕಾಲ ಜೆಡಿಎಸ್ ಪಕ್ಷದ ಕಟ್ಟಾಳಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರುವ ಚಾಬುಸಾಬ್ ಅವರು ಎರಡನೇ ಬಾರಿಗೆ ರಾಜ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸುತ್ತಿದ್ದಾರೆ. ಮೊದಲಿಗೆ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಅಸ್ತಿತ್ವವೇ ಇಲ್ಲದೇ ಇರುವಾಗ ಪಕ್ಷ…

Read Full News

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಉತ್ತಮ ವೇದಿಕೆ : ಹರತಾಳು ಹಾಲಪ್ಪ|Gfgc

ರಿಪ್ಪನ್‌ಪೇಟೆ : ಇಂದಿನ ವಿದ್ಯಾರ್ಥಿಗಳು ಕೀಳರೀಮೆಯನ್ನು ಬಿಟ್ಟು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಶಾಸಕ ಹರತಾಳು ಹಾಲಪ್ಪ ಹೇಳಿದರು. ರಿಪ್ಪನ್‌ಪೇಟೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜ್‌ನಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಹಳ್ಳಿಯ ವಿದ್ಯಾರ್ಥಿಗಳು ಪಟ್ಟಣದ ಮತ್ತು ಶ್ರೀಮಂತರ ಹಾಗೂ ಕಾನ್ವಂಟ್ ಮಕ್ಕಳ ಮುಂದೆ ಕೀಳರೀಮೆಯಿಂದ ನಡೆದುಕೊಳ್ಳದೇ ಕಠಿಣ ಶ್ರಮ ವಹಿಸಿ ಅಭ್ಯಾಸ ಮಾಡಿದಾಗ ಮಾತ್ರ ಉತ್ತಮ ವ್ಯಕ್ತಿತ್ವದ ವಿದ್ಯಾರ್ಥಿಯಾಗಲು ಸಾಧ್ಯವಾಗುವುದೆಂದ ಅವರು…

Read Full News

H D ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲೆಂದು ವರಸಿದ್ದಿ ವಿನಾಯಕನಲ್ಲಿ ಸಂಕಲ್ಪ ಪೂಜೆ :|jds

ರಿಪ್ಪನ್‌ಪೇಟೆ : ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ಮೊತ್ತೊಮ್ಮ ರಾಜ್ಯದ ಮುಖ್ಯಮಂತ್ರಿಯಾಗುವಂತೆ ಅವರ ಹುಟ್ಟುಹಬ್ಬದ ಅಂಗವಾಗಿ ರಿಪ್ಪನ್‌ಪೇಟೆಯ ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಅಭಿಮಾನಿಗಳು ಕಾರ್ಯಕರ್ತರು ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಸಂಕಲ್ಪ ಪೂಜೆ ನೆರವೇರಿಸಿದರು. ಸಂಕಲ್ಪ ಪೂಜೆಯ ನಂತರ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಆರ್.ಎ.ಚಾಬುಸಾಬ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಯೋಜನೆ ಸೇರಿದಂತೆ ಹತ್ತು ಹಲವು ಜನಹಿತ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವುದರೊಂದಿಗೆ ಜನಾನುರಾಗಿಯಾಗಿದ್ದು…

Read Full News

ಅಂತರ್ ವಿಶ್ವವಿದ್ಯಾಲಯ ವಾಲಿಬಾಲ್ ಪಂದ್ಯಾವಳಿಗೆ ರಿಪ್ಪನ್‌ಪೇಟೆಯ ವಿದ್ಯಾರ್ಥಿಗಳು ಆಯ್ಕೆ|volleyball

ರಿಪ್ಪನ್‌ಪೇಟೆ : ತಮಿಳುನಾಡಿನಲ್ಲಿ ನಡೆಯುವ ಅಂತರ್ ವಿಶ್ವವಿದ್ಯಾಲಯದ ವಾಲಿಬಾಲ್ ಪಂದ್ಯಾವಳಿಗೆ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಡಿಸೆಂಬರ್ 23 ರಿಂದ 27 ರವರೆಗೆ ತಮಿಳುನಾಡಿನ ಚೆನ್ನೈನಲ್ಲಿ ನಡೆಯುವ ದಕ್ಷಿಣ ವಲಯದ ಅಂತರ್ ವಿಶ್ವವಿದ್ಯಾಲಯದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಕುವೆಂಪು ವಿಶ್ವವಿದ್ಯಾಲಯದ ತಂಡಕ್ಕೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿಗಳಾದ ಪ್ರಜ್ವಲ್ ಎನ್ ಎಂ ಮತ್ತು ಮಹಮ್ಮದ್ ಅರ್ಬಾಜ಼್ ಆಯ್ಕೆಯಾಗಿದ್ದಾರೆ. ವಿದ್ಯಾನಗರದ ನಿವಾಸಿಗಳಾದ ಮಹೇಶ್ವರಾಚಾರಿ ಮತ್ತು ಮೀನಾಕ್ಷಿ ದಂಪತಿಗಳ ಪುತ್ರನಾದ…

Read Full News

ಕುಗ್ರಾಮಗಳಲ್ಲಿ ಪತ್ರಕರ್ತರ ವಾಸ್ತವ್ಯ : ಗ್ರಾಮದ ಅಭಿವೃದ್ಧಿ ಕುರಿತು ಸರ್ಕಾರಕ್ಕೆ ಸಮಗ್ರ ವರದಿ|village stay

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ ಬಂದಾಗಿನಿಂದಲೂ ನೂತನ ಕಾರ್ಯಕ್ರಮಗಳಿಗೆ ನಾಂದಿ ಹಾಡಿದ್ದು, ಇದರ ಮುಂದುವರಿದ ಭಾಗವಾಗಿ ಜಿಲ್ಲೆಯಲ್ಲಿರುವ ಕುಗ್ರಾಮಗಳನ್ನು ಗುರುತಿಸಿ ಅಲ್ಲಿ ಗ್ರಾಮ ವಾಸ್ತವ್ಯವನ್ನು ಮಾಡುವ ಮೂಲಕ ಅಲ್ಲಿಯ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸುವ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಗೋಪಾಲ್ ಎಸ್.ಯಡಗೆರೆ ಹೇಳಿದರು. ಇಲ್ಲಿನ ಪ್ರೆಸ್‌ ಟ್ರಸ್ಟ್‌ ನಲ್ಲಿ ಗುರುವಾರ (ಡಿ.೧೫) ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಮ್ಮ ನಡೆ ಸಮಾಜದ ಕಡೆ ಘೋಷಣೆಯಡಿ ಸಂಗವು ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಜಿಲ್ಲೆಯ ಅತ್ಯಂತ…

Read Full News

ಬಾಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ದಿಡೀರ್ ರಾಜೀನಾಮೆ|Resign

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಾಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ದೊಡ್ಡಯ್ಯ ಅಧ್ಯಕ್ಷೆ ಸ್ಥಾನಕ್ಕೆ ದಿಡೀರ್ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಪಕ್ಷದ ಬೆಂಬಲಿತ ಸದಸ್ಯರಿಂದ ಅಧ್ಯಕ್ಷರಾಗಿ ಆಯ್ಕೆಯಾದ ಲೀಲಾವತಿ ದೊಡ್ಡಯ್ಯ ಕಳೆದ 20 ತಿಂಗಳ ಕಾಲ ಬಾಳೂರು ಗ್ರಾಪಂ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು. ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಗೆ ಬಂದ ಮಾಹಿತಿ ಪ್ರಕಾರ ಗ್ರಾಪಂ ಅಧ್ಯಕ್ಷೆ ಲೀಲಾವತಿ ದೊಡ್ಡಯ್ಯ ತಮ್ಮ ವೈಯಕ್ತಿಕ ಕಾರಣಗಳ ಹಿನ್ನಲೆಯಲ್ಲಿ ಸ್ವ ಇಚ್ಚೆಯಿಂದ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಇಂದು ಲೀಲಾವತಿ ದೊಡ್ಡಯ್ಯ ಸಾಗರದ…

Read Full News

ರಾಷ್ಟ್ರ ಮಟ್ಟದಲ್ಲಿ‌ ಮಲೆನಾಡಿನ ಮರ್ಯಾದೆ ಕಳೆದ ಸಾಗರ ತಾಲೂಕಿನ ಸರ್ಕಾರಿ ಶಾಲೆಯ ಸೀರೆ ಶೌಚಾಲಯ|viral video

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬರುವೆ ಗ್ರಾಮದ ಸಮೀಪ ಇರುವ ಏಳಿಗೆ ಗ್ರಾಮದಲ್ಲಿನ ಶಾಲೆಯೊಂದರ ಸೀರೆ ಶೌಚಾಲಯದ ವಿಡಿಯೋವೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ.  ಇಂತಹದ್ದೊಂದು ಅವ್ಯವಸ್ಥೆಯು ಇನ್ನೂ ಇದೇ ಎಂದು ರಾಷ್ಟ್ರೀಯವಾಹಿನಿಗಳು ಸೀರೆ ಶೌಚಾಲಯದ ಸರ್ಕಾರಿ ಶಾಲೆಯ ಸ್ಥಿತಿಯನ್ನು ಬಿಚ್ಚಿಡುತ್ತಿದೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗುತ್ತಿದ್ದು, ಮಾಜಿ ಸಿಎಂ ಬಿಎಸ್​ ವೈ ತವರು, ಘಟಾನುಘಟಿ ರಾಜಕಾರಣಗಳ ಶಕ್ತಿಕೇಂದ್ರ  ಹಾಗೂ ವಿಮಾನ ನಿಲ್ಧಾಣವನ್ನು ಹೊಂದಿ ಅಭಿವೃದ್ಧಿ ಕಾಣುತ್ತಿರುವ ಶಿವಮೊಗ್ಗದಲ್ಲಿ ಸರ್ಕಾರಿ ಶಾಲೆಗೆ ಶೌಚಾಲಯ ಕಟ್ಟಿಸಿಕೊಡುವಂತಹ…

Read Full News

ಸಾಗರ ಸಮೀಪದ ಉಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಗುಂಪು ಗುಂಪಾಗಿ ಕಾಣಿಸಿಕೊಂಡ ಕಾಡು ಕೋಣಗಳು – ಭಯ ಭೀತರಾದ ಸ್ಥಳೀಯರು|wild corner

ಜನನಿಬಿಡ ಸ್ಥಳಗಳಲ್ಲಿ ಗುಂಪು ಗುಂಪಾಗಿ ಕಾಡುಕೋಣ ಕಾಣಿಸಿಕೊಂಡ ಪರಿಣಾಮ ಸ್ಥಳೀಯರು ಭಯಭೀತರಾದ ಘಟನೆ ಶಿವಮೊಗ್ಗ ಜಿಲ್ಲೆಯ ಉಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ. ಕಲ್ಲುಕೊಪ್ಪದ ಗ್ರಾಮದ ಭಾಗದಲ್ಲಿ ಹಿಂಡು‌ಹಿಂಡು ಕಾಡುಕೋಣಗಳು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಅಧಿಕ ಭಯ ಹುಟ್ಟಿಸಿವೆ. ಏಕಾಏಕಿ 16 ಕಾಡುಕೋಣಗಳು ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರ ಆತಂಕವನ್ನು ದುಪ್ಪಟ್ಟುಗೊಳಿಸಿವೆ.  ಕಾಡುಕೋಣಗಳು ಚಿರತೆ ಹುಲಿಯಷ್ಟು ಅಪಾಯಕಾರಿಯಾಗದೆ ಇದ್ದರೂ ರೈತರು ಬೆಳೆದ ಬೆಳೆಗಳನ್ನು ನಾಶ ಮಾಡಿರುವ ಉದಾಹರಣೆಗಳಿದೆ. ಕಾಡುಕೋಣಗಳು ಗುಂಪು ಗುಂಪಾಗಿ ರಾಜರೋಷವಾಗಿ ಸುತ್ತಾಡುತ್ತಿರುವುದನ್ನು ಕಂಡು ಸ್ಥಳೀಯರು ಭಯಭೀತರಾಗಿ ಅರಣ್ಯ ಇಲಾಖೆಯ ಗಮನಕ್ಕೆ…

Read Full News

ಅಕಾಲಿಕ ಮಳೆಯಿಂದ ಕಂಗಾಲಾಗಿರುವ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು : ಚಂದನ್ ಗೌಡ|jaya Karnataka

ರಿಪ್ಪನ್‌ಪೇಟೆ : ತಮಿಳುನಾಡಿನಲ್ಲಿ ಉಂಟಾಗಿರುವ ಚಂಡಮಾರುತದಿಂದ ಮಲೆನಾಡಿನ ರೈತ ಬದುಕು ಮೂರಾಬಟ್ಟೆಯಾಗಿದ್ದು ಈ ಗಂಭೀರ ಸಮಸ್ಯೆಯನ್ನು ಮಲೆನಾಡಿನ ಸಚಿವರು ಹಾಗೂ ಶಾಸಕರುಗಳು ಸರ್ಕಾರದ ಮುಂದಿಟ್ಟು ಮನದಟ್ಟು ಮಾಡಿ ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಜಯಕರ್ನಾಟಕ ಸಂಘಟನೆ ತಾಲೂಕ್‌ ಅಧ್ಯಕ್ಷ ಚಂದನ್ ಗೌಡ ಹೇಳಿದ್ದಾರೆ. ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ಅವರು  ತಮಿಳುನಾಡಿನಲ್ಲಿ ಎದ್ದಿರುವ ಮಂಡೋಸ್ ಚಂಡಮಾರುತ  ಕರುನಾಡಿಗೂ ಅಪಾಯ ಉಂಟು ಮಾಡುತ್ತಿದೆ ಅಕಾಲಿಕ ಮಳೆಯ ಕಾರಣ ದಕ್ಷಿಣ ಒಳನಾಡು ಮತ್ತು ಬಹುಮುಖ್ಯವಾಗಿ ಮಲೆನಾಡು…

Read Full News

ಹೊಸನಗರ ತಾಲೂಕಿನ ಮೆಸ್ಕಾಂ ಇಲಾಖೆಗೆ ಇನ್ನೆಷ್ಟು ಬಲಿ ಬೇಕು…!???? ಅಪಾಯದ ಮುನ್ಸೂಚನೆ ನೀಡಿದರು ಸಹ ಸಾವಿನ ಜಾತ್ರೆ ಮಾಡಲು ಹೊರಟ ಕೆಲ ಜಡ್ಡುಗಟ್ಟ ಅಧಿಕಾರಿಗಳು|Mescom

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹರತಾಳು ಗ್ರಾಮದ ನಿವಾಸಿ ರೈತ ಶೇಷಗಿರಿ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದಾರೆ ಆದರೆ ಈ ದುರ್ಮರಣಕ್ಕೆ ನೇರವಾಗಿ ಮೆಸ್ಕಾಂ ಇಲಾಖೆಯ ಬಿಳಿಯಾನೆಯಂತಹ ಜಡ್ಡು ಹಿಡಿದ ಅಧಿಕಾರಿಗಳು ಹಾಗೂ ಕೆಲ ಸೋಮಾರಿ ಸಿಬ್ಬಂದಿಗಳೇ ನೇರ ಹೊಣೆ. ಇಂದು ಬೆಳಿಗ್ಗೆ ಶೇಷಗಿರಿ ಮೂರು ಬಾರಿ ಕರೆ ಮಾಡಿ ನೀಡಿದ್ದ ದೂರನ್ನು ಮನ್ನಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಲ್ಲಿ ಒಬ್ಬ ಅಮಾಯಕ ರೈತನ ಜೀವ ಉಳಿಸಬಹುದಿತ್ತಲ್ಲವೇ,ವಿದ್ಯುತ್ ತಂತಿ ನೆಲದ ಮೇಲೆ ಬಿದ್ದರೂ fuse ಯಾಕೆ ಕೆಲಸ ನಿರ್ವಹಿಸಿಲ್ಲ..???? ಅದು…

Read Full News

ಅಧಿಕಾರಕ್ಕಿಂತ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯೇ ನನ್ನ ಮೊದಲ ಆದ್ಯತೆ – ಆರ್ ಎನ್ ಮಂಜುನಾಥ್ ಗೌಡ|RMM

ತೀರ್ಥಹಳ್ಳಿ : ಸಹಕಾರಿ ಕ್ಷೇತ್ರದಲ್ಲಿ ಮಂಜುನಾಥ್ ಗೌಡರ ಇನ್ನಿಂಗ್ಸ್ ಮುಗಿತು ಮಂಜುನಾಥ್ ಗೌಡರನ್ನು ಮುಗಿಸಿ ಬಿಟ್ವಿ ಅಂತ ಬಹಳ ಜನ ಎಂದು ಕೊಳ್ಳುತ್ತಾರೆ ಕನಸು ಕಾಣುತ್ತಾರೆ. ನಾವು ಕನಸು ಕಂಡರೆ ನನಸು ಆಗುವಂತಹ ಕನಸು ಕಾಣಬೇಕು.  ಡಿಸಿಸಿ ಅಥವಾ ಯಾವುದೇ ಸೊಸೈಟಿಯಲ್ಲಿ ಭಾಗಿಯಾಗಬೇಕಾದರೆ ಶಿವಮೊಗ್ಗದ ಟಿಎಪಿಸಿಎಂಎಸ್ ಅಲ್ಲಿ ಗೆದ್ದರೆ ಮಾತ್ರ. ಆದ್ದರಿಂದ ಅಲ್ಲಿ ಸೋಲಿಸಬೇಕೆಂದು ನಮ್ಮ ವಿರೋಧ ಪಕ್ಷದವರ ಆಸೆಗೆ ಅಲ್ಲಿನ ಜನರು ಸುಳ್ಳು ಮಾಡಿ ನನನ್ನು ಗೆಲ್ಲಿಸಿದರು. ಅಲ್ಲಿನ ಗೆಲುವಿನ ಮೂಲಕ  ಅಲ್ಲಿಂದ ನನ್ನ ಎರಡನೇ…

Read Full News