w
Headlines
Home » 28 ವರ್ಷದ ಗೃಹಿಣಿ ಅನುಮಾನಾಸ್ಪದ ಸಾವು; ಪತಿಯ ಕುಟುಂಬದ ವಿರುದ್ಧ ಕಿರುಕುಳದ ಆರೋಪ!

28 ವರ್ಷದ ಗೃಹಿಣಿ ಅನುಮಾನಾಸ್ಪದ ಸಾವು; ಪತಿಯ ಕುಟುಂಬದ ವಿರುದ್ಧ ಕಿರುಕುಳದ ಆರೋಪ!

Picsart 26 11 03 21 02 01 {"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"remove":2},"is_sticker":false,"edited_since_last_sticker_save":true,"containsFTESticker":false}

28 ವರ್ಷದ ಗೃಹಿಣಿ ಅನುಮಾನಾಸ್ಪದ ಸಾವು; ಪತಿಯ ಕುಟುಂಬದ ವಿರುದ್ಧ ಕಿರುಕುಳದ ಆರೋಪ! | A 28-year-old married woman named Bhoomika was found hanging at her home in Holehatti village, Shivamogga taluk. Her family alleges harassment by her husband’s family. Police investigation is underway.

ಶಿವಮೊಗ್ಗ : ತಾಲೂಕಿನ ಹೊಳೆಹಟ್ಟಿ ಗ್ರಾಮದಲ್ಲಿ 28 ವರ್ಷದ ಗೃಹಿಣಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

ಭೂಮಿಕಾ (28) ಮೃತ ಮಹಿಳೆಯಾಗಿದ್ದಾರೆ.

ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಭೂಮಿಕಾ ಅವರ ಮೃತದೇಹ ಪತ್ತೆಯಾಗಿದೆ. ಸುಮಾರು ಏಳು ವರ್ಷಗಳ ಹಿಂದೆ ವಿವಾಹವಾಗಿದ್ದ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಇನ್ನು ಭೂಮಿಕಾ ಅವರ ಸಾವಿನ ಬೆನ್ನಲ್ಲೇ ಪತಿಯ ಕುಟುಂಬದವರ ವಿರುದ್ಧ ಮೃತಳ ಸಂಬಂಧಿಕರು ಕಿರುಕುಳದ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರ ತನಿಖೆಯ ಬಳಿಕವಷ್ಟೇ ಘಟನೆಯ ಸಂಪೂರ್ಣ ಸತ್ಯಾಂಶ ಹೊರಬರಬೇಕಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.