Headlines

ಹೃದಯಾಘಾತದಿಂದ ಪದವಿ ವಿದ್ಯಾರ್ಥಿ ಶ್ರೀನಿಧಿ ಸಾವು!

ಹೃದಯಾಘಾತದಿಂದ ಪದವಿ ವಿದ್ಯಾರ್ಥಿ ಸಾವು! ಹೃದಯಾಘಾತ ಹಾಗೂ ನ್ಯೂಮೋನಿಯಾದಿಂದ ಶ್ರೀನಿಧಿ ಮೃತಪಟ್ಟಿದ್ಧಾನೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಲವಲವಿಕೆಯಿಂದಿದ್ದ ಯುವಕ ಶ್ರೀನಿಧಿಯ ಅಕಾಲಿಕ ನಿಧನ ಗ್ರಾಮದಲ್ಲಿ ಶೋಕದ ವಾತಾವರಣ ಉಂಟು ಮಾಡಿದೆ. ಶಿವಮೊಗ್ಗ:  ಹೃದಯಾಘಾತದಿಂದ ಪದವಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಶಿವಮೊಗ್ಗ ನಗರದ ಹೊರವಲಯ ಬಸವನಗಂಗೂರು ಗ್ರಾಮದಲ್ಲಿ ನಡೆದಿದೆ. ಶ್ರೀನಿಧಿ (20) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ನಗರದ ಡಿವಿಎಸ್ ಕಾಲೇಜ್ ನಲ್ಲಿ ಅಂತಿಮ ಪದವಿ ಅಭ್ಯಾಸ ಮಾಡುತ್ತಿದ್ದ. ಜೂನ್ 29 ರ ಭಾನುವಾರ ಮುಂಜಾನೆ…

Read More

ಕ್ಯಾಂಟರ್ ಮತ್ತು ಕಾರಿನ ನಡುವೆ ಡಿಕ್ಕಿ- ಓರ್ವ ಮಹಿಳೆ ಸಾವು..!

ಕ್ಯಾಂಟರ್ ಮತ್ತು ಕಾರಿನ ನಡುವೆ ಡಿಕ್ಕಿ- ಓರ್ವ ಮಹಿಳೆ ಸಾವು..! ಶಿವಮೊಗ್ಗಕ್ಕೆ ಹೊರಟಿದ್ದ ಕಾರಿನಲ್ಲಿ 6 ಜನರಿದ್ದರು. ಬೇಗುವಳ್ಳಿ ಕೆರೆಯ ಸಮೀಪ ತಿರುವಿನಲ್ಲಿ ಎದುರಿನಿಂದ ಬಂದ ಕ್ಯಾಂಟರಿಗೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕಾರಿನ ಮುಂಭಾಗ ಜಖಂಗೊಂಡಿದೆ. ಕ್ಯಾಂಟರಿನಲ್ಲಿದ್ದವರಿಗೆ ಅಪಾಯವಾಗಿಲ್ಲ. ತೀರ್ಥಹಳ್ಳಿ : ತೀರ್ಥಹಳ್ಳಿ ಶಿವಮೊಗ್ಗ ನಡುವಿನ ಬೇಗುವಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಕ್ಯಾಂಟರ್ ಮತ್ತು ಮಾರುತಿ ಎರ್ಟಿಗಾ ಕಾರು ಮುಖಮುಖಿ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಸ್ಥಳದಲ್ಲೇ ಮೃತರಾಗಿದ್ದಾರೆ. ಕಾಸರಗೋಡು ಸಮೀಪದ…

Read More

ನಿಯಂತ್ರಣ ತಪ್ಪಿ ನದಿಗೆ ಉರುಳಿದ ಕಾರು- ಓರ್ವ ಮಹಿಳೆ ಸಾವು..!

ನಿಯಂತ್ರಣ ತಪ್ಪಿ ನದಿಗೆ ಉರುಳಿದ ಕಾರು- ಓರ್ವ ಮಹಿಳೆ ಸಾವು..! ತೆಕ್ಕಟ್ಟೆಯ ಶಂಕರ ದೇವಾಡಿಗ ಅವರು ತಮ್ಮ ಮಾರುತಿ ಸ್ವಿಫ್ಟ್ಕಾರಿನಲ್ಲಿ ಕುಟುಂಬದ ಆರು ಮಂದಿ ಸದಸ್ಯರೊಂದಿಗೆ ಶಿವಮೊಗ್ಗದಲ್ಲಿರುವ ಮಗಳ ಮನೆಗೆ ತೆರಳುತ್ತಿದ್ದರು. ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಂಡಗದ್ದೆ ಬಳಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ರಸ್ತೆಪಕ್ಕದಲ್ಲಿದ್ದ ನದಿಗೆ ಉರುಳಿದೆ. ತೀರ್ಥಹಳ್ಳಿ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ನದಿಗೆ ಉರುಳಿದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಮಂಡಗದ್ದೆ ಬಳಿ ನಡೆದಿದೆ….

Read More

ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಕುಂಸಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳ ಬಂಧನ

ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಕುಂಸಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳ ಬಂಧನ ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಕುಂಸಿ ಗ್ರಾಮದ ಎಕೆ ಕಾಲೋನಿಯಲ್ಲಿ ಶನಿವಾರ ರಾತ್ರಿ ಮಚ್ಚು ಬೀಸಿ ಕೊಲೆ ಮಾಡಿದ್ದ ಆರೋಪಿಗಳನ್ನ‌ ಕುಂಸಿ ಪೊಲೀಸರು ಬಂಧಿಸಿದ್ದಾರೆ. ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ ಪ್ರಕರಣದಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಸಿ ಎಕೆ ಕಾಲೋನಿಯಲ್ಲಿ ಶನಿವಾರ ಜೂ.29 ರಂದು ವಾಸು ಯಾನೆ ವಸಂತನ ಕೊಲೆಯಾಗಿತ್ತು.ಈ ಪ್ರಕರಣದ ಆರೋಪಿಗಳಾ ಹರೀಶ…

Read More

ಹೆದ್ದಾರಿಗೆ ಉರುಳಿ ಬಿದ್ದ ಬೃಹತ್ ಆಲದ ಮರ – ವಾಹನ ಸಂಚಾರ ವ್ಯತ್ಯಯ

ಹೆದ್ದಾರಿಗೆ ಉರುಳಿ ಬಿದ್ದ ಬೃಹತ್ ಆಲದ ಮರ – ವಾಹನ ಸಂಚಾರ ವ್ಯತ್ಯಯ ಮರ ಉರುಳುವಾಗ ಅದೃಷ್ಟವಶಾತ್‌ ಆ ಭಾಗದಲ್ಲಿ ಯಾವುದೇ ವಾಹನ ಸಂಚರಿಸುತ್ತಿರಲಿಲ್ಲ. ಇದರಿಂದ ದೊಡ್ಡ ಅನಾಹುತ ತಪ್ಪಿದೆ. ಶಿವಮೊಗ್ಗ : ಜೋರು ಗಾಳಿಗೆ ಸಹಿತ ಮಳೆಯಿಂದಾಗಿ ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ಬೃಹತ್‌ ಮರ ಧರೆಗುರುಳಿದೆ. ಶಿವಮೊಗ್ಗ ತಾಲೂಕು ಗಾಜನೂರು ಚೆಕ್‌ ಪೋಸ್ಟ್‌ ಸಮೀಪ ಮರ ಬುಡಮೇಲಾಗಿದೆ. ಚೆಕ್‌ ಪೋಸ್ಟ್‌ನ ಬಳಿಯಿದ್ದ ಬೃಹತ್‌ ಆಲದ ಮರ ಮಧ್ಯಾಹ್ನ ಬೀಸಿದ ಜೋರಿ ಗಾಳಿಗೆ ಧರೆಗುರುಳಿಸಿದೆ. ಇದರಿಂದ…

Read More

ಮುದ್ದಾದ ಮಗಳನ್ನೇ ನೀರಿನಲ್ಲಿ ಮುಳುಗಿಸಿ ಕೊಂದ ಪಾಪಿ ತಾಯಿ!

ಮುದ್ದಾದ ಮಗಳನ್ನೇ ನೀರಿನಲ್ಲಿ ಮುಳುಗಿಸಿ ಕೊಂದ ಪಾಪಿ ತಾಯಿ! ಗಂಡ ರಘುನಿಂದ ವಿಚ್ಛೇದನಕ್ಕೆ ಮುಂದಾಗಿದ್ದಳು ಎನ್ನಲಾಗಿದೆ. ಕಳೆದ ವರ್ಷ ಗ್ರಾಮದ ಹಿರಿಯರು ಸೇರಿ ಪಂಚಾಯಿತಿ, ರಾಜಿ ಸಂಧಾನದ ಮೂಲಕ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು. ಆದರೆ ಶಿವಮೊಗ್ಗದಲ್ಲಿ ಇರಲು ಸಾಧ್ಯವಾಗದೆ ಶನಿವಾರ ಮಗುವಿನೊಂದಿಗೆ ತವರಿಗೆ ಬಂದಿದ್ದಳು ಎನ್ನಲಾಗಿದೆ. ನಸಿಕ ಸ್ಥಿಮಿತ ಕಳೆದುಕೊಂಡಿದ್ದ ತಾಯಿಯೊಬ್ಬಳು ಹೆತ್ತ ಮಗಳನ್ನೇ ನೀರಿನ ತೊರೆಯಲ್ಲಿ ಮುಳುಗಿಸಿ ಹತ್ಯೆಗೈದಿರುವ ಹೃದಯ ವಿದ್ರಾವಕ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಜಿನ್ನೇನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಭಾನುವಾರ…

Read More

ವೈದ್ಯಕೀಯ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಸಾವು

ವೈದ್ಯಕೀಯ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಸಾವು ವೈದ್ಯಕೀಯ ಶಿಕ್ಷಣವನ್ನ ಮುಗಿಸಿ ಇಂಟರ್ ಶಿಪ್ ನ್ನ ಮುಗಿಸುವ ಹಂತದಲ್ಲಿದ್ದ ವೇಳೆ ವಿದ್ಯಾರ್ಥಿನಿ ವಿಷ್ಣುಪ್ರಿಯ ಎಂಬ ಸುಮಾರು 22 ವರ್ಷದ ಯುವತಿ ನೇಣಿಗೆ ಶರಣಾಗಿದ್ದಾರೆ. ಶಿವಮೊಗ್ಗ ನಗರದ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸುಬ್ಬಯ್ಯ ಮೆಡಿಕಲ್ ಕಾಲೇಜಿನ ವೈದ್ಯಕೀಯ ಇಂಟರ್ ಶಿಪ್ ವಿದ್ಯಾರ್ಥಿನಿ ವಿಷ್ಣು ಪ್ರಿಯ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾಗಿದ್ದಾರೆ.  ವೈದ್ಯಕೀಯ ಶಿಕ್ಷಣವನ್ನ ಮುಗಿಸಿ ಇಂಟರ್…

Read More

ಕೈಗೆ ಕೋಳ ತೊಡಿಸಿರುವಂತೆ ಪ್ರಧಾನಿ ಮೋದಿಯ ಎಡಿಟೆಡ್ ಫೋಟೋ ಜಾಲತಾಣದಲ್ಲಿ ಹರಿಬಿಟ್ಟ ಕಿರಾತಕ – ದೂರು ದಾಖಲು

ಕೈಗೆ ಕೋಳ ತೊಡಿಸಿರುವಂತೆ ಪ್ರಧಾನಿ ಮೋದಿಯ ಎಡಿಟೆಡ್ ಫೋಟೋ ಜಾಲತಾಣದಲ್ಲಿ ಹರಿಬಿಟ್ಟ ಕಿರಾತಕ – ದೂರು ದಾಖಲು ಕೈಗೆ ಕೋಳ ತೊಡಿಸಿರುವಂತೆ ಪ್ರಧಾನಿ ಮೋದಿಯ ಎಡಿಟೆಡ್ ಫೋಟೋ ಜಾಲತಾಣದಲ್ಲಿ ಹರಿಬಿಟ್ಟ ಕಿರಾತಕ – ದೂರು ದಾಖಲು ಕೈಗೆ ಕೋಳ ತೊಡಿಸಿರುವಂತೆ ಪ್ರಧಾನಿ ಮೋದಿಯ ಎಡಿಟೆಡ್ ಫೋಟೋ ಜಾಲತಾಣದಲ್ಲಿ ಹರಿಬಿಟ್ಟ ಕಿರಾತಕ – ದೂರು ದಾಖಲು ಪಾಕಿಸ್ತಾನ ರಾವಲ್ಪಿಂಡಿಯಲ್ಲಿರುವ ಸೆಂಟ್ರಲ್ ಜೈಲ್ ಆಗಿರುವ ಅಡಿಯಾಲ ಜೈಲಿನ ಮುಂದೆ ಭಾರತದ ಪ್ರಧಾನಿ ನರೇಂದ್ರ ಮೋದಿಯ ಕೈಗೆ ಕೋಳ ತೊಡಿಸಿರುವ ಫೊಟೊವನ್ನ‌…

Read More

ಅಕ್ರಮ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗೆ ಕಠಿಣ ಕಾರಾಗೃಹ ಶಿಕ್ಷೆ

ಅಕ್ರಮ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗೆ ಕಠಿಣ ಕಾರಾಗೃಹ ಶಿಕ್ಷೆ ಶಿವಮೊಗ್ಗ ಏಪ್ರಿಲ್ 05: : ಭದ್ರಾವತಿ ತಾಲೂಕು ಕಲ್ಲಹಳ್ಳಿ ಗ್ರಾಮದ ಮುರುಗ ಎಲ್. ಬಿನ್ ಲಕ್ಷ್ಮಣ ಎಂಬ ವ್ಯಕ್ತಿ 2021ರಲ್ಲಿ ಓಮಿನಿ ವ್ಯಾನ್ ಮೂಲಕ ಆಂದ್ರದ ರಾಜಮಂಡ್ರಿಯಿಂದ 50 ಕೆ.ಜಿ.430 ಗ್ರಾಂ ತೂಕದ ಒಣ ಗಾಂಜಾವನ್ನು ಕಾನೂನು ಬಾಹಿರವಾಗಿ ಸಾಕಾಣಿಕೆ ಮಾಡುವಾಗ ಸೊರಬ ವಲಯ ಅಬಕಾರಿ ನಿರೀಕ್ಷಕರ ತಂಡವು ಸೆರೆಹಿಡಿದು, ಪ್ರಕರಣ ದಾಖಲಿಸಿಕೊಂಡು ಕಲಂ: 8(ಸಿ), 20(ii)(ಸಿ), 20(ಬಿ), 25 ಎನ್.ಡಿ.ಪಿ.ಎಸ್. ಕಾಯ್ದೆ 1985 ರಡಿಯಲ್ಲಿ…

Read More

ವಿನೋಬನಗರ ಇನ್ಸ್ ಪೆಕ್ಟರ್ ಚಂದ್ರಕಲಾ ಅಮಾನತು

ವಿನೋಬನಗರ ಇನ್ಸ್ ಪೆಕ್ಟರ್ ಚಂದ್ರಕಲಾ ಅಮಾನತು ಶಿವಮೊಗ್ಗ: ವಿನೋಬ ನಗರ ಪೊಲೀಸ್ ಠಾಣೆಯ ಪಿಐ ಚಂದ್ರಕಲಾ  ಹೊಸಮನಿ ಅವರನ್ನು ಅಮಾನತ್ತುಗೊಳಿಸಿ ದಾವಣಗೆರೆ ಐಜಿಪಿ ರವಿಕಾಂತೇ ಗೌಡ ಆದೇಶಿಸಿದ್ದಾರೆ.ಕರ್ತವ್ಯದಲ್ಲಿ‌ ದುರ್ವರ್ತನೆ ಹಾಗೂ ಅಶಿಸ್ತು ಹಿನ್ನೆಲೆಯಲ್ಲಿ ‌ಸಸ್ಪೆಂಡ್ ಆಗಿರುವುದಾಗಿ ತಿಳಿದು ಬಂದಿದೆ. ನಾಲ್ಕು ದಿನದ ಹಿಂದೆ ನಗರದ ಎಲ್ಲಾ ಪಿಐ ಹಾಗೂ ಪಿಎಸೈಗಳ ಸಭೆಯನ್ನು ಎಸ್ಪಿ ಕರೆದಿದ್ದರು. ಚಂದ್ರಕಲಾ ಹೊರತು ಪಡಿಸಿ ಸಭೆಗೆ ಉಳಿದೆಲ್ಲಾ ಪಿಐ ಹಾಗೂ ಪಿಎಸ್ಐ ಗಳು ಹಾಜರಾಗಿದ್ದರು‌. ಚಂದ್ರಕಲಾರ ಗೈರನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಅವರು…

Read More