
ಜಿಲ್ಲಾ ಸುದ್ದಿ:

ಸಿಗಂದೂರು ದೇವಸ್ಥಾನದ ಬಗ್ಗೆ ಸುಳ್ಳು ವಿಡಿಯೋ: ಮಧು ಬಂಗಾರಪ್ಪ ಭಾಷಣ ತಿರುಚಿದವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ
ಸಿಗಂದೂರು ದೇವಸ್ಥಾನದ ಬಗ್ಗೆ ಸುಳ್ಳು ವಿಡಿಯೋ: ಮಧು ಬಂಗಾರಪ್ಪ ಭಾಷಣ ತಿರುಚಿದವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ ಶಿವಮೊಗ್ಗ : ಉಸ್ತುವಾರಿ ಸಚಿವರ ಹೇಳಿಕೆಯನ್ನು ತಿರುಚಿ, ಜನರಲ್ಲಿ ಧಾರ್ಮಿಕ ಭಾವನೆ ಕೆರಳಿಸಿ, ಸಮಾಜದಲ್ಲಿ ಅಶಾಂತಿ ಮೂಡಿಸಿರುವ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್ ನ ಜಿಡಿ ಮಂಜುನಾಥ್ ನೇತೃತ್ವದಲ್ಲಿ ಎಸ್ಪಿ ಮಿಥುನ್ ಕುಮಾರ್ ಗೆ ಮನವಿ ಸಲ್ಲಿಸಲಾಯಿತು. ಜು.21 ರಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ…

ಹೊಸನಗರ ಭೂನ್ಯಾಯ ಮಂಡಳಿ ಸದಸ್ಯರಾಗಿ ಗರ್ತಿಕೆರೆಯ ಬಷೀರ್ ಅಹಮದ್ ನೇಮಕ
ಹೊಸನಗರ ಭೂನ್ಯಾಯ ಮಂಡಳಿ ಸದಸ್ಯರಾಗಿ ಗರ್ತಿಕೆರೆಯ ಬಷೀರ್ ಅಹಮದ್ ನೇಮಕ ರಿಪ್ಪನ್ ಪೇಟೆ – ಹೊಸನಗರ ತಾಲ್ಲೂಕು ಭೂನ್ಯಾಯ ಮಂಡಳಿ ಸದಸ್ಯ ಸ್ಥಾನಕ್ಕೆ ಗರ್ತಿಕೆರೆ ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಷೀರ್ ಅಹಮದ್ ಹೆಚ್ ಎಂ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಈ ಸಂಬಂಧ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಪ್ರಸ್ತುತ ಗರ್ತಿಕೆರೆ ಗ್ರಾಪಂ ಸದಸ್ಯರಾಗಿರುವ ಬಷೀರ್ ಅಹಮದ್ ಹೆಚ್ ಎಂ ಅವರು ಸ್ಥಳೀಯ ರಾಜಕಾರಣದಲ್ಲಿ ಸಕ್ರೀಯರಾಗಿದ್ದು, ಗ್ರಾಮೀಣ…

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ರಸ್ತೆ ಬಲಿ – ದಿವ್ಯ ಮೌನಕ್ಕೆ ಶರಣಾದ ಶಾಸಕರು
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ರಸ್ತೆ ಬಲಿ – ದಿವ್ಯ ಮೌನಕ್ಕೆ ಶರಣಾದ ಶಾಸಕ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆ ಗ್ರಾಂ ಪಂ ವ್ಯಾಪ್ತಿಯ ಬಸವನಗದ್ದೆ ಸಮೀಪದ ಶಿರನಲ್ಲಿ ಬಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಹೊಂಡ ತೆಗೆದು ಕಳಪೆ ಕಾಮಗಾರಿ ನಡೆಸಿದ ಹಿನ್ನಲೆಯಲ್ಲಿ ಉತ್ತಮ ರಸ್ತೆ ಹದಗೆಟ್ಟು ಸಾರ್ವಜನಿಕರು ಓಡಾಡಲು ಹೆದರುವ ಪರಿಸ್ಥಿತಿ ಉಂಟಾಗಿದೆ. ತೀರ್ಥಹಳ್ಳಿ – ಹಣಗೆರೆ – ಶಿವಮೊಗ್ಗಕ್ಕೆ ಹಾದು ಹೋಗುವ ಮುಖ್ಯ ರಸ್ತೆ ಅರ್ಧಕರ್ದ ಬಿರುಕು ಬಿಟ್ಟಿದ್ದು ವಾಹನ…

ಕೆಂಚನಾಲ ಮಾರಿಕಾಂಬ ಜಾತ್ರೆ ಹರಿದು ಬಂದ ಭಕ್ತ ಸಾಗರ
ಕೆಂಚನಾಲ ಮಾರಿಕಾಂಬ ಜಾತ್ರೆ ಹರಿದು ಬಂದ ಭಕ್ತ ಸಾಗರ ರಿಪ್ಪನ್ ಪೇಟೆ:ಈ ಬಾರಿಯ ಮಳೆಗಾಲದ ಕೆಂಚನಾಲ ಮಾರಿಕಾಂಬ ಜಾತ್ರೆ ಭಕ್ತಸಾಗರದೊಂದಿಗೆ ಅತ್ಯಂತ ಭಕ್ತಿ ಭಾವಪೂರ್ಣವಾಗಿ ನಡೆಯಿತು. ಮಂಗಳವಾರ ನಡೆದ ಈ ಜಾತ್ರೆಗೆ ಜಿಲ್ಲೆ, ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಹ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ವರ್ಷಕ್ಕೆ ಎರಡು ಬಾರಿ ನಡೆಯುವ ಈ ಜಾತ್ರೆ — ಮಳೆಗಾಲದಲ್ಲಿ ಮಂಗಳವಾರ ಮತ್ತು ಬೇಸಿಗೆಯಲ್ಲಿ ಬುಧವಾರ — ಕೆಂಚನಾಲ ಗ್ರಾಮದಲ್ಲಿ ನಡೆಯುವ ಈ ಜಾತ್ರೆ ಜನಜೀವನದ ಒಂದು ಮೂಲಭೂತ…

ಧರ್ಮಸ್ಥಳ ಪ್ರಕರಣ: ನಿಷ್ಪಕ್ಷಪಾತ ತನಿಖೆ ನಡೆಯಲಿ
ಧರ್ಮಸ್ಥಳ ಪ್ರಕರಣ: ನಿಷ್ಪಕ್ಷಪಾತ ತನಿಖೆ ನಡೆಯಲಿ ಶಿವಮೊಗ್ಗ : ಅನಾಮಧೇಯ ವ್ಯಕ್ತಿಯೋರ್ವ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ಆದೇಶಿಸಿದೆ. ಎಸ್ಐಟಿ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ವಕೀಲ ಕೆ.ಪಿ. ಶ್ರೀಪಾಲ್ ಆಗ್ರಹಿಸಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,೮ ವರ್ಷದಲ್ಲಿ ಬೆಳ್ತಂಗಡಿ ಮತ್ತು ಉಜಿರೆಯಲ್ಲಿ ೯೮ ಪ್ರಕರಣ ಅಸಹಜ ಸಾವೆಂದು ವರದಿಯಾಗಿದೆ. ಹೂತಿಟ್ಟಿರುವ ನೂರಾರು ಶವಗಳಲ್ಲಿ ೧೨ ರಿಂದ ೧೫ ವರ್ಷದ ಹೆಣ್ಣು ಮಕ್ಕಳು, ಪುರುಷರು, ಮಹಿಳೆಯರು…

ಪ್ರಾಚೀನ ನರಸಿಂಹ ದೇವರ ವಿಗ್ರಹ ಕಿಡಿಗೇಡಿಗಳಿಂದ ಭಗ್ನ – ಭಕ್ತರ ಆಕ್ರೋಶ
ಪ್ರಾಚೀನ ನರಸಿಂಹ ದೇವರ ವಿಗ್ರಹ ಕಿಡಿಗೇಡಿಗಳಿಂದ ಭಗ್ನ – ಭಕ್ತರ ಆಕ್ರೋಶ ಸೊರಬ: ಅಪೂರ್ವ ಪ್ರಾಚೀನ ನರಸಿಂಹ ವಿಗ್ರಹವನ್ನು ಭಗ್ನಗೊಳಿಸಿದ ಘಟನೆ ತಾಲ್ಲೂಕಿನ ಕುಬಟೂರಿನಲ್ಲಿ ಸೋಮವಾರ ಸಂಜೆ ನಡೆದಿದೆ. ನರಸಿಂಹ ಕ್ಷೇತ್ರವೆನ್ನಲಾದ ಸೊರಬ ತಾಲ್ಲೂಕಿನಲ್ಲಿ ಅನೇಕ ನರಸಿಂಹ ದೇಗುಲಗಳಿವೆ. ಸುಮಾರು ಎರಡನೇ ಶತಮಾನದಿಂದ ನಾಲ್ಕನೆ ಶತಮಾನದ ಅವಧಿಯ ವಿಗ್ರಹಗಳು ಗಮನಸೆಳೆದಿದ್ದು ಕುಬಟೂರು ವಿಗ್ರಹ ಜಿಲ್ಲೆಯ ಕೆಲವೇ ಕೆಲವು ಪ್ರಾಚೀನ ವಿಗ್ರಹಗಳಲ್ಲಿ ಒಂದು. ಇತಿಹಾಸ ಆರಂಭಿಕ ಹಂತದ ವಿಗ್ರಹಗಳಾಗಿರುವ ಇವು ಕುಳಿತು ಮಣಿಯನ್ನು ಹಿಡಿದಿರುವ ಭಂಗಿಯಲ್ಲಿದ್ದು ಅನೇಕರ ಆರಾಧ್ಯ…

ಸಾಗರ ತಾಲ್ಲೂಕಿಗೆ ಶಿಕ್ಷಣ ಕ್ಷೇತ್ರದಲ್ಲಿ ಗುಡ್ ನ್ಯೂಸ್: 16 ಸರ್ಕಾರಿ ಶಾಲೆಗಳಿಗೆ ಇಂಗ್ಲಿಷ್ ಮೀಡಿಯಂ ತರಗತಿಗೆ ಅನುಮತಿ!
ಸಾಗರ ತಾಲ್ಲೂಕಿಗೆ ಶಿಕ್ಷಣ ಕ್ಷೇತ್ರದಲ್ಲಿ ಗುಡ್ ನ್ಯೂಸ್: 16 ಸರ್ಕಾರಿ ಶಾಲೆಗಳಿಗೆ ಇಂಗ್ಲಿಷ್ ಮೀಡಿಯಂ ತರಗತಿಗೆ ಅನುಮತಿ! ಶಿವಮೊಗ್ಗ ಜಿಲ್ಲೆ, ಸಾಗರ: ಸಾಗರ ತಾಲ್ಲೂಕಿನ ಶಿಕ್ಷಣ ಪ್ರೇಮಿಗಳಿಗೆ ಸಂತಸದ ಸುದ್ದಿಯಾಗಿದೆ. ಶಾಸಕ ಗೋಪಾಲಕೃಷ್ಣ ಬೇಳೂರು ಅವರ ನಿರಂತರ ಪ್ರಯತ್ನ ಫಲ ನೀಡಿದ್ದು, ತಾಲ್ಲೂಕಿನ 16 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರದಿಂದ ಅನುಮತಿ ದೊರೆತಿದೆ. 2025-26ನೇ ಶೈಕ್ಷಣಿಕ ವರ್ಷದಿಂದ ಈ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜೊತೆಗೆ ದ್ವಿಭಾಷಾ ಮಾಧ್ಯಮದಡಿ ಇಂಗ್ಲಿಷ್ ತರಗತಿಗಳನ್ನೂ ಆರಂಭಿಸಲು…

ಸಮಟಗಾರು ಶಾಲೆಗೆ ಶ್ರೀಗಂಧ ಫೌಂಡೇಶನ್ನಿಂದ ಶಿಕ್ಷಣ ಸಾಮಗ್ರಿ ವಿತರಣೆ
ಸಮಟಗಾರು ಶಾಲೆಗೆ ಶ್ರೀಗಂಧ ಫೌಂಡೇಶನ್ನಿಂದ ಶಿಕ್ಷಣ ಸಾಮಗ್ರಿ ವಿತರಣೆ ಹುಂಚ : ಶ್ರೀಗಂಧ ಫೌಂಡೇಶನ್ (ರಿ.), ಬೆಂಗಳೂರು ವತಿಯಿಂದ ಸಮಟಗಾರು ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟುಪುಸ್ತಕ, ಬ್ಯಾಗ್, ಲೇಖನ ಸಾಮಗ್ರಿ ಮತ್ತು ರೇನ್ಕೋಟ್ ವಿತರಿಸಲಾಯಿತು. ಶಾಲೆಯೊಂದಿಗೆ ಹತ್ತು ವರ್ಷದ ನಂಟನ್ನು ನೆನಪಿಸಿಕೊಂಡು ‘ದಶಕ ಸಂಚಿಕೆ’ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಫೌಂಡೇಶನ್ ಸದಸ್ಯರು, ದಾನಿಗಳು, ಎಸ್ಡಿಎಂಸಿ ಅಧ್ಯಕ್ಷರು, ಶಿಕ್ಷಕರು, ಪೋಷಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯವ್ಯಾಪ್ತಿ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ಹರ್ಷದಿಂದ ಎಲ್ಲರೂ ಪ್ರಶಂಸಿಸಿದರು. ಸಂಸ್ಥೆಯ…

ಶರಾವತಿ ಸಂತ್ರಸ್ತರ ತೋಟ ತೆರವು : ರೈತರ ಆಕ್ರೋಶ
ಶರಾವತಿ ಸಂತ್ರಸ್ತರ ತೋಟ ತೆರವು : ರೈತರ ಆಕ್ರೋಶ ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ಥ ರೈತರೊಬ್ಬರು ದಶಕಗಳಿಂದ ಸಾಗುವಳಿ ಮಾಡುತ್ತಿದ್ದ ಭೂಮಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಿರುವ ಘಟನೆ ತಾಲೂಕಿನ ಚಿತ್ರಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಶರಾವತಿ ಮುಳುಗಡೆ ಸಂತ್ರಸ್ಥ ರೈತರಾದ ನಿಡುಗೋಡು ರಾಮಪ್ಪ ಹಾಗೂ ಹಾಡಿಕೇವಿ ಈಶ್ವರ ಎಂಬುವವರು ಸಾಗುವಳಿ ಮಾಡುತ್ತಿದ್ದ ಜಮೀನುಗಳನ್ನು ತೆರವು ಮಾಡಿದ್ದಾರೆ. ರೈತರಾದ ನಿಡುಗೋಡು ರಾಮಪ್ಪ ಎಂಬುವವರ ತಮ್ಮ ಸಾಗುವಳಿ ಭೂಮಿಯಲ್ಲಿ 350 ಅಡಿಕೆ ಗಿಡ,100 ಕಾಫಿ ಗಿಡ,25 ತಾಳೆ ಗಿಡ,50…

ರಿಪ್ಪನ್ ಪೇಟೆ – ರೋಟರಿ ಕ್ಲಬ್ನಲ್ಲಿ ಪದವಿ ಸ್ವೀಕಾರ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ
ರಿಪ್ಪನ್ ಪೇಟೆ – ರೋಟರಿ ಕ್ಲಬ್ನಲ್ಲಿ ಪದವಿ ಸ್ವೀಕಾರ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ರಿಪ್ಪನ್ ಪೇಟೆ: ರಿಪ್ಪನ್ ಪೇಟೆ ರೋಟರಿ ಕ್ಲಬ್ ವತಿಯಿಂದ 2025–26ನೇ ಸಾಲಿನ ಪದವಿ ಸ್ವೀಕಾರ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮವನ್ನು ಭವ್ಯವಾಗಿ ನಡೆಸಲಾಯಿತು. ಈ ಸಮಾರಂಭದಲ್ಲಿ ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3182ರ ಗವರ್ನರ್ ರೋಟೇರಿಯನ್ ಬಿ.ಎಮ್. ಭಟ್ ಅವರು ಪದವಿ ಪ್ರಧಾನ ಅಧಿಕಾರಿಯಾಗಿ ಭಾಗವಹಿಸಿದರು. ಅವರು ಮಾತನಾಡಿ, “ರೋಟರಿ ಒಂದು ಸೇವಾ ಪರಂಪರೆ ಹೊಂದಿರುವ ಜಾಗತಿಕ ವೇದಿಕೆ. ಯುವ…