w
Headlines
Home » ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಹೋಳಿ | ಗಾಂಧಿನಗರದ ಯುವಕರಿಂದ ಕಾಮಣ್ಣನ ದಹನ

ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಹೋಳಿ | ಗಾಂಧಿನಗರದ ಯುವಕರಿಂದ ಕಾಮಣ್ಣನ ದಹನ

GridArt 20260304

Holi festival celebrated with great enthusiasm in the town as youths marked the occasion by burning Kamanna’s effigy at Vinayaka Circle and playing with colors across various localities.

ರಿಪ್ಪನ್‌ಪೇಟೆ : ಪಟ್ಟಣದಲ್ಲಿ ರಂಗಿನ ಹಬ್ಬ ಹೋಳಿಯನ್ನು ಬುಧವಾರ ಯುವಕರು ಬಣ್ಣಗಳನ್ನು ಪರಸ್ಪರ ಎರಚಿಕೊಳ್ಳುವ ಮೂಲಕ ಸಂಭ್ರಮದಿಂದ ಆಚರಿಸಿದರು.

ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಹೋಳಿ ಹಬ್ಬದ ಉತ್ಸಾಹ ಕಳೆಗಟ್ಟಿದ್ದು, ಯುವಕರು, ಯುವತಿಯರು ಹಾಗೂ ಮಕ್ಕಳು ಬಣ್ಣದ ಓಕುಳಿಯಲ್ಲಿ ತೊಡಗಿ ಹಬ್ಬದ ಸಡಗರವನ್ನು ಹಂಚಿಕೊಂಡರು.

ಮಂಗಳವಾರ ರಾತ್ರಿ ಗಾಂಧಿನಗರದ ಯುವಕರು ವಿನಾಯಕ ವೃತ್ತದಲ್ಲಿ ಕಾಮಣ್ಣನ ಪ್ರತಿಕೃತಿಯನ್ನು ದಹಿಸುವ ಮೂಲಕ ಹೋಳಿ ಹಬ್ಬಕ್ಕೆ ಅಧಿಕೃತ ಚಾಲನೆ ನೀಡಿದರು. ಪ್ರಮುಖ ಗಲ್ಲಿಗಳಲ್ಲಿ ಯುವಕರು ಕಟ್ಟಿಗೆ ಹಾಗೂ ಸಗಣಿ ಕುಳ್ಳನ್ನು ಸಂಗ್ರಹಿಸಿ ಕಾಮನ ಪ್ರತಿಕೃತಿಯನ್ನು ದಹಿಸಿ ಬೊಬ್ಬೆ ಹಾಕುತ್ತಾ ಹೋಳಿ ಸಂಭ್ರಮವನ್ನು ಹೆಚ್ಚಿಸಿದರು.

ಬುಧವಾರ ಬೆಳಗ್ಗಿನಿಂದಲೇ ವಿನಾಯಕ ವೃತ್ತ ಸೇರಿದಂತೆ ಹಲವು ಬಡಾವಣೆಗಳಲ್ಲಿ ಯುವಕರ ತಂಡಗಳು ಬಣ್ಣಗಳನ್ನು ಪರಸ್ಪರ ಎರಚಿಕೊಂಡು ಓಕುಳಿ ಆಡಿದವು. ಎಲ್ಲೆಡೆ ಬಣ್ಣದ ಹಬ್ಬದ ಕಳೆ ಕಾಣಿಸಿಕೊಂಡಿದ್ದು, ಹೋಳಿ ಸಂಭ್ರಮ ಪಟ್ಟಣವನ್ನೇ ರಂಗಿನಮಯಗೊಳಿಸಿತು.

ಕಾಮದಹನ ವೇಳೆಯಲ್ಲಿ ನಿರೂಪ್ ಕುಮಾರ್ , ರಾಮಚಂದ್ರ ಬಳೇಗಾರ್ , ನಾಗರಾಜ್ , ಪ್ರವೀಣ್ ಆಚಾರ್ , ಸಂದೇಶ್ ಆಚಾರ್ , ಬಾಲರಾಜ್ , ಆನಂದ್ ಹಾಗೂ ಇನ್ನಿತರರು ಇದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.