
ಪೆನ್ಶನ್ ಬರದಿದ್ದಕ್ಕೆ ಕಿವಿಚೈನ್ ಅಡವಿಟ್ಟು ಲೋನ್ ಕೇಳಿದ ಅಜ್ಜಿ, ಹಳೆ ಸಾಲಕ್ಕೆ ಮನ್ನಾ ಎಂದ ಬ್ಯಾಂಕ್ , ಫ್ರೀಡಂ ಫೈಟರ್ ಪತ್ನಿಗೆ ಹಿಂಗೆಲ್ಲಾ ಮಾಡ್ತಾರಾ?
ಪೆನ್ಶನ್ ಬರದಿದ್ದಕ್ಕೆ ಕಿವಿಚೈನ್ ಅಡವಿಟ್ಟು ಲೋನ್ ಕೇಳಿದ ಅಜ್ಜಿ, ಹಳೆ ಸಾಲಕ್ಕೆ ಮನ್ನಾ ಎಂದ ಬ್ಯಾಂಕ್ , ಫ್ರೀಡಂ ಫೈಟರ್…
ಪಿಡಿಓ ಹುದ್ದೆ ಮೇಲ್ದರ್ಜೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ – ಗ್ರಾಮ ಪಂಚಾಯತ್ ಗಳ ಸೇವೆಗಳು ಸಂಪೂರ್ಣ ಬಂದ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ನಡೆಸುತ್ತಿರುವ ಅನಿರ್ದಿಷ್ಟ ಕಾಲ ಮುಷ್ಕರಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಗ್ರಾಮ ಪಂಚಾಯತ್ ಗಳ ಸೇವೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿ, ಪಿಡಿಒ ಹುದ್ದೆಯನ್ನು ಮೇಲ್ದರ್ಜೆಗೆ ಸೇರ್ಪಡಿಸಿಕೊಳ್ಳಬೇಕೆಂದು, ಕಾರ್ಯದರ್ಶಿ ಗ್ರೇಡ್ ಒನ್ ಹುದ್ದೆಯಿಂದ ಪಿಡಿಒ ಆಗಿ ಮುಂಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ,…
ಪೆನ್ಶನ್ ಬರದಿದ್ದಕ್ಕೆ ಕಿವಿಚೈನ್ ಅಡವಿಟ್ಟು ಲೋನ್ ಕೇಳಿದ ಅಜ್ಜಿ, ಹಳೆ ಸಾಲಕ್ಕೆ ಮನ್ನಾ ಎಂದ ಬ್ಯಾಂಕ್ , ಫ್ರೀಡಂ ಫೈಟರ್ ಪತ್ನಿಗೆ ಹಿಂಗೆಲ್ಲಾ ಮಾಡ್ತಾರಾ? ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯ ಕಿವಿಚೈನ್ ಮಾಯಾ ಮಾಡಿತಾ ಬ್ಯಾಂಕ್ | ಕೋಣಂದೂರು ಕೆನರಾ ಬ್ಯಾಂಕ್ ನಲ್ಲಿ ನಡೆದಿದ್ದೇನು..!!? ಭಾರತ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಜೈಲು ಅನುಭವಿಸಿದ ಮಹಾನ್ ದೇಶ ಪ್ರೇಮಿಗಳಿಗೆ ಸರ್ಕಾರ ಪಿಂಚಣಿ ನೀಡುವ ಮೂಲಕ ಅವರ ಕುಟುಂಬದ ಮನೋಸ್ಥೈರ್ಯ ಹೆಚ್ಚಿಸಿ ಅವರನ್ನು ದೇಶದ ಆಸ್ತಿಯೆಂದು ಪರಿಗಣಿಸುತ್ತಿದೆ. ಅಂತಹ ಫ್ರೀಡಂ…
ಎಟಿಎಂ ಕಾರ್ಡ್ ಬದಲಿಸಿ ಹಣ ವಂಚಿಸುತಿದ್ದ ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ ಸಾಗರ: ಅಕ್ಟೋಬರ್ ೨೦೨೪ರಲ್ಲಿ ಕಾರ್ಗಲ್ ಟೌನ್ ಕೆನರಾ ಬ್ಯಾಂಕ್ ಎಟಿಎಂ ನಲ್ಲಿ ವೃದ್ದನನ್ನು ವಂಚಿಸಿ, ಅವರಿಂದ ಎಟಿಎಂ ಕಾರ್ಡ್ ನ ಪಿನ್ ಪಡೆದು ರೂ ೧,೪೯,೯೯೯ ಹಣವನ್ನು ಡ್ರಾ ಮಾಡಿಕೊಂಡ ಪ್ರಕರಣದ ಆರೋಪಿಗಳನ್ನು ಸಾಗರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ರಾಜ್ಯದ ರೋಹನ್ ತಲ್ ಜಿಲ್ಲೆಯ ಜೋಗಿಂದರ್ ಮತ್ತು ಮುಖೇಶ್ (೪೮) ಇವರನ್ನು ದಸ್ತಗಿರಿ ಮಾಡಿ, ಆರೋಪಿಗಳಿಂದ ಕಾರ್ಗಲ್ ಪೊಲೀಸ್ ಠಾಣೆ…
ಅಡಿಕೆ ಕಳ್ಳತನಗೈದಿದ್ದ ಆರೋಪಿಯ ಬಂಧನ – ಲಕ್ಷಾಂತರ ರೂ ಮೌಲ್ಯದ ಮಾಲು ವಶಕ್ಕೆ .! ಭದ್ರಾವತಿ : ತಾಲೂಕಿನ ಅರಹತೊಳಲು ಗ್ರಾಮದ ಮನೆಯ ಮುಂದೆ ಇಟ್ಟಿದ್ದ ಅಡಿಕೆ ಚೀಲಗಳನ್ನು ಕಳ್ಳತನ ಮಾಡಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಯನೂರು ಕೋಹಳ್ಳಿಯ ಯುವಕನನ್ನು ಬಂಧಿಸಿ ಕಳುವಾದ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ. ಅಡಿಕೆ ಕಳುವಾದ ಬಗ್ಗೆ ಹರ್ಷ ಎನ್ನುವವರು ಹೊಳೆಹೊನ್ನೂರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಆಯನೂರು ಕೋಹಳ್ಳಿಯ ಸಯ್ಯದ್ ನವೀದ್ (೨೯) ಸಿಕ್ಕಿಬಿದ್ದಿದ್ದಾನೆ. ಈತನನ್ನು ದಸ್ತಗಿರಿ…
RIPPONPETE | ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ – ತಪ್ಪಿದ ಭಾರಿ ಅನಾಹುತ ,ಕರ್ತವ್ಯ ಪ್ರಜ್ಞೆ ಮೆರೆದ ಮೆಸ್ಕಾಂ ಇಲಾಖೆ ರಿಪ್ಪನ್ಪೇಟೆ : ಇಲ್ಲಿನ ಸಮೀಪದ ಬೈರಾಪುರಾ ಗ್ರಾಮದ ತೀರ್ಥೇಶ್ ಎಂಬುವರಿಗೆ ಸೇರಿದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸಾವಿರಾರು ರೂ ನಷ್ಟವಾಗಿರುವ ಘಟನೆ ನಡೆದಿದೆ. ತೀರ್ಥೇಶ್ ಅಡಿಕಟ್ಟು ರವರಿಗೆ ಸೇರಿದ 700ಕ್ಕೂ ಹೆಚ್ಚು ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟವುಂಟಾಗಿದೆ. ಬೈರಾಪುರ ಗ್ರಾಮದಲ್ಲಿ ಒಕ್ಕಲು ಮಾಡಲು 6 ಸಾವಿರಕ್ಕೂ ಪಿಂಡಿಯಷ್ಟು ಹೆಚ್ಚು…
ಹೊಸನಗರ ತಾಲೂಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ವಿಜಯ್ ಮಳವಳ್ಳಿ ಆಯ್ಕೆ – ಶಾಸಕರಿಂದ ಅಭಿನಂದನೆ ಹೊಸನಗರ ತಾಲೂಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಿಪ್ಪನ್ಪೇಟೆ ಸಮೀಪದ ಮಳವಳ್ಳಿ ಗ್ರಾಮದ ವಿಜಯ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಆನ್ಲೈನ್ ನಲ್ಲಿ ನಡೆದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ವಿಜಯ್ ಮಳವಳ್ಳಿ ಭಾರಿ ಬಹುಮತದಿಂದ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರಿಗೆ ಕರ್ನಾಟಕ ರಾಜ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಇಂದು ತಮ್ಮ ಸ್ವಗೃಹದಲ್ಲಿ ಅಭಿನಂದಿಸಿ ಶುಭಾಶಯ ಕೋರಿದರು. ಈ ಸಂಧರ್ಭದಲ್ಲಿ ಪಕ್ಷದ ಮುಖಂಡರು…
ಗ್ರಾಪಂ ಅಧ್ಯಕ್ಷ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ – ಆಸ್ಪತ್ರೆಗೆ ದಾಖಲು ಶಿವಮೊಗ್ಗ : ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷನೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ. ಪಿಡಿಒ ವಿರುದ್ಧ ಆರೋಪಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ಎಂಬುವರು ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನ ಮೆಗ್ಗಾನ್ ಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ. ಜಮೀನಿನ ವಿಚಾರದಲ್ಲಿ ತಮ್ಮನ್ನ ಭೇಟಿ ಮಾಡಲು ಬಂದ ಗ್ರಾಮಸ್ಥರಿಗೆ ಪಿಡಿಒರನ್ನ ಬರ ಹೇಳಿದರೂ ಬಾರದ ಪಿಡಿಒರಿಂದ ಅವಮಾನಕ್ಕೊಳಗಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಅವರ ಆಪ್ತ ವಲಯ…
ಚಲಿಸುತಿದ್ದ ಬಸ್ ನಿಂದ ಕೆಳಗೆ ಬಿದ್ದು ವಿದ್ಯಾರ್ಥಿ ಸಾವು ಚಲಿಸುತಿದ್ದ ಬಸ್ ನಿಂದ ಕೆಳಗೆ ಬಿದ್ದು ಕಾಲೇಜು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದ ಎದುರಿನ ರಸ್ತೆಯಲ್ಲಿ ನಡೆದಿದೆ. ಯಶವಂತ್ (16) ಮೃತ ದುರ್ಧೈವಿಯಾಗಿದ್ದಾರೆ. ಮೈಲಾರೇಶ್ವರ ದೇವಸ್ಥಾನ ಎದುರಿಗೆ ಬರುತ್ತಿದ್ದ ಖಾಸಗಿ ನಗರ ಸಾರಿಗೆ ಬಸ್ ನಿಂದ ಬಿದ್ದು ಕಾಲೇಜಿನ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಗುರುಪುರದಿಂದ ಎಟಿಎನ್ ಸಿಸಿ ಕಾಲೇಜಿಗೆ ನಗರದ ಖಾಸಗಿ ಬಸ್ ನಲ್ಲಿ ಹೊರಟಿದ್ದ ವಿದ್ಯಾರ್ಥಿ ಯಶವಂತ್ ಶಿವಮೊಗ್ಗದ ಮೇಲಾರೇಶ್ವರ ದೇವಸ್ಥಾನದ…
ಭದ್ರಾವತಿ ಶಾಸಕರು ನಾಮಕಾವಾಸ್ತೆ, ಮಕ್ಕಳದ್ದೇ ದರ್ಬಾರು – ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿಗೌಡ ಆರೋಪ ಶಿವಮೊಗ್ಗ : ‘ಭದ್ರಾವತಿಯಲ್ಲಿ ಅರಣ್ಯ ಕಬಳಿಕೆ, ಮರಳು, ಇಸ್ಪೀಟ್ ಹಾಗೂ ಗಾಂಜಾ ಮಾಫಿಯಾಗಳಿವೆ. ಶಾಸಕರ ಬೆಂಬಲಿತರೇ ಈ ಮಾಫಿಯಾಗಳಲ್ಲಿದ್ದಾರೆ. ಅಧಿಕಾರಿಗಳು ಶಾಸಕರ ಚೇಲಾಗಳಾಗಿದ್ದಾರೆ’ ಎಂದು ಭದ್ರಾವತಿ ಜೆಡಿಎಸ್ ಪಕ್ಷದ ನಾಯಕಿ ಶಾರದಾ ಅಪ್ಪಾಜಿಗೌಡ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಶಾಸಕರು ನಾಮಕಾವಸ್ತೆಯಾಗಿದ್ದಾರೆ. ಅವರ ಇಬ್ಬರು ಮಕ್ಕಳೇ ಆಳ್ವಿಕೆ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಏನಾದರೂ ದೂರು ಕೊಟ್ಟರೆ, ಎಂಎಲ್ಎ ಮನೆಗೆ ಹೋಗಿ ಬನ್ನಿ…
ಹುತಾತ್ಮ ಯೋಧ ಮಂಜುನಾಥ್ ಕುಟುಂಬಕ್ಕೆ ಸಚಿವರ ಸಾಂತ್ವನ ಸಂಕೂರು ಶಾಲೆ ಅಭಿವೃದ್ಧಿ: ಪುತ್ಥಳಿ ನಿರ್ಮಾಣ: ಮಧು ಬಂಗಾರಪ್ಪ ಶಿವಮೊಗ್ಗ : ಅಗ್ರಾದಲ್ಲಿ ತರಬೇತಿ ವೇಳೆ ನಿಧನರಾಗಿದ್ದ ಭಾರತೀಯ ವಾಯುಸೇನೆಯ ಪ್ಯಾರಾಜೆಂಪ್ ಜ್ಯೂನಿಯರ್ ವಾರೆಂಟ್ ಅಧಿಕಾರಿ ಮಂಜುನಾಥ್ ಅವರ ಹೊಸನಗರ ತಾಲೂಕು ಸಂಕೂರಿನ ಮನೆಗೆ ಸಚಿವ ಮಧು ಬಂಗಾರಪ್ಪ ಅವರು ತೆರಳಿ ಯೋಧನ ಪತ್ನಿ, ಪೋಷಕರು ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಸಚಿವ ಎಸ್. ಮಧು ಬಂಗಾರಪ್ಪ ಅವರು ಮಾತನಾಡಿ, ಕುಟುಂಬದ ಪ್ರಮುಖ…
ಕೋಣಂದೂರು ಸುತ್ತಮುತ್ತ ಹಾಡಹಗಲೇ ದೇವಸ್ಥಾನ, ಮನೆಗಳಲ್ಲಿ ಕಳ್ಳತನ ತೀರ್ಥಹಳ್ಳಿ :ತಾಲೂಕಿನ ಕೋಣಂದೂರು ಸುತ್ತಮುತ್ತ ಕಳ್ಳತನ ಪ್ರಕರಣಗಳು ಇತ್ತೀಚಿಗೆ ಹೆಚ್ಚುತ್ತಿದ್ದು, ಮಲೆನಾಡಿಗರಲ್ಲಿ ಆತಂಕ ಮನೆ ಮಾಡಿದೆ.ಕೋಣಂದೂರು ಸಮೀಪದ ಗುಡ್ಡೆಕೊಪ್ಪದಲ್ಲಿ ಶುಕ್ರವಾರ ಮಧ್ಯಾಹ್ನ ಮನೆಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದು, ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಬೆಲೆಬಾಳುವ ವಸ್ತುಗಳು ಸಿಕ್ಕಿಲ್ಲದಿರುವುದರಿಂದ ವಸ್ತುಗಳನ್ನು ಪುಡಿ ಪುಡಿ ಮಾಡಿ ಹಿಂಭಾಗದ ಬಾಗಿಲಿನಿಂದ ಹೊರ ಹೋಗಿದ್ದಾರೆ. ಹಿರೇಸರದ ಮನೆಯೊಂದರಲ್ಲಿದ್ದ 75,000 ನಗದು ಹಾಗೂ ಬಂಗಾರ, ಬೆಳ್ಳಿಯನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಆಲೂರು ಹೊಸಕೊಪ್ಪದ ಉಮಾಮಹೇಶ್ವರ…