Headlines

ಕಾಡು ಪ್ರಾಣಿಗಳನ್ನು ಬೇಟೆಯಾಡುತಿದ್ದ ಆರೋಪಿಯ ಬಂಧನ – ಜಿಂಕೆ ಚರ್ಮ ಸಹಿತ ಬಂದೂಕು ವಶಕ್ಕೆ.!

ನ್ಯಾಮತಿ ತಾಲೂಕಿನ ಸಂರಕ್ಷಿತ ಅರಣ್ಯದಲ್ಲಿ ಅಕ್ರಮವಾಗಿ ಪ್ರವೇಶಿಸಿ ಕಾಡುಪ್ರಾಣಿಗಳನ್ನು ಬೇಟೆಯಾಡಿದ ಆರೋಪದ ಮೇಲೆ ಹೊನ್ನಾಳಿ ವಲಯ ಅರಣ್ಯಾಧಿಕಾರಿಗಳು ಒಬ್ಬನನ್ನು ಬಂಧಿಸಿದ್ದು, ತಪ್ಪಿಸಿಕೊಂಡ ಮೂವರ ಸೆರೆಗೆ ಕಾರ್ಯಾಚರಣೆ ಮುಂದುವರಿಸಿದೆ.

ಚಿನ್ನಿಕಟ್ಟೆ ಗ್ರಾಮದ ಮೋಹನ್ ಬಂಧಿತ ಆರೋಪಿ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ 12 ದಿನದ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದ್ದು, ತಪ್ಪಿಸಿಕೊಂಡಿರುವ ಆರೋಪಿಗಳಾದ ಚಿನ್ನಿಕಟ್ಟೆ ಗ್ರಾಮದ ಶಿವಕುಮಾರ, ದಿನೇಶ, ವಡವೇಲು ಬಂಧನಕ್ಕೆ ಬಂಧಿಸಲು ಕಾರ್ಯಾಚರಣೆ ಮುಂದುವರಿದಿದೆ ಎಂದು ಹೊನ್ನಾಳಿ ವಲಯ ಅರಣಾಧಿಕಾರಿ ಕಿಶೋರ್‌ನಾಯ್ಕ ತಿಳಿಸಿದ್ದಾರೆ.

ಹೊನ್ನಾಳಿ ಪ್ರಾದೇಶಿಕ ಅರಣ್ಯ ವಲಯದ ವ್ಯಾಪ್ತಿಗೆ ಬರುವ ಕುದುರೆಕೊಂಡ ಬಿದರಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ನಾಡ ಬಂದೂಕು ಹಿಡಿದು ಬೇಟೆಯಾಡಲು ಓಡಾಡುತ್ತಿರುವಾಗ, ಗಸ್ತಿನಲ್ಲಿದ್ದ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದರು.

ಬಂಧಿತನಿಂದ ಚುಕ್ಕೆ ಜಿಂಕೆ ಸುಲಿದ ಚರ್ಮ 1, ನಾಡ ಬಂದೂಕು 1, ಪಲ್ಸರ್ ಬೈಕ್ ವಶಕ್ಕೆ ಪಡೆಯಲಾಗಿದೆ.

ಡಿಸಿಎಫ್ ಜಿ.ಆರ್. ಶಶಿಧರ್, ಎಸಿಎಫ್ ಭಾಗ್ಯಲಕ್ಷ್ಮೀ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒಗಳಾದ ಬರ್ಕತ್ ಅಲಿ, ಎಂ.ಬಿ. ಶಿವಯೋಗಿ, ಜಿ.ಜಿ. ಹಸೀನ್ ಭಾಷ ಗಸ್ತು ಅರಣ್ಯ ಪಾಲಕರಾದ ನಾಗಲಿಂಗಪ್ಪ, ಅಂಜಲಿ, ಪ್ರಭಾಕರ, ಆಶಾ, ಸಿಬ್ಬಂದಿ ಎಂ.ಪಿ. ಬಸವರಾಜಪ್ಪ, ಪ್ರವೀಣ್, ಸುನೀಲ್, ಪ್ರದೀಪ್, ರಮೇಶ, ಮೌನೇಶ ಇದ್ದರು.

Leave a Reply

Your email address will not be published. Required fields are marked *