Headlines

ಅರಸಾಳು ಹುಸೇನ್ ಸಾಬ್ ನಿಧನ

ಅರಸಾಳು ಹುಸೇನ್ ಸಾಬ್ ನಿಧನ ರಿಪ್ಪನ್ ಪೇಟೆ : ಇಲ್ಲಿನ ಅರಸಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಬಿಜೆಪಿ ಪಕ್ಷದ ಹಿರಿಯ ಮುಖಂಡರಾಗಿದ್ದ ಹುಸೇನ್ ಸಾಬ್(69) ನಿಧನರಾಗಿದ್ದಾರೆ. ಇತ್ತೀಚಿನ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಹುಸೇನ್ ಸಾಬ್ ಇಂದು ಬೆಳಿಗ್ಗೆ ಅರಸಾಳಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಮೂವರು ಹೆಣ್ಣು ಮಕ್ಕಳು , ಓರ್ವ ಮಗ ಹಾಗೂ ಅಪಾರ ಬಂಧ ಬಳಗವನ್ನು ಅಗಲಿದ್ದಾರೆ.

Read More

ಬೆಳಕೋಡು ಹಾಲಸ್ವಾಮಿ ಗೌಡ ನಿಧನ |ಮೃತರ ಅಂತಿಮ ದರ್ಶನ ಪಡೆದ ಶಾಸಕ ಬೇಳೂರು ಗೋಪಾಲಕೃಷ್ಣ

ರಿಪ್ಪನ್‌ಪೇಟೆ ; ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭುವೃದ್ದಿ ಸಮಿತಿ ಉಪಾಧ್ಯಕ್ಷರು , ಕೆಂಜಿಗಾಪುರದ ವೀರಭದ್ರಸ್ವಾಮಿ ದೇವಸ್ಥಾನದ ಧರ್ಮದರ್ಶಿ ಸಮಿತಿಯ ಅಧ್ಯಕ್ಷ, ಅಕ್ಷಯಸಾಗರ ಸೌಹಾರ್ದ ಸಹಕಾರ ಬ್ಯಾಂಕ್‌ನ ಮಾಜಿ ಆಧ್ಯಕ್ಷರು ಹಾಗೂ ಶ್ರೀಬಸವೇಶ್ವರ ವೀರಶೈವ ಸಮಾಜದ ನಿರ್ದೇಶಕರಾದ ಕಾರಗೋಡು ಗ್ರಾಮದ ಬೆಳಕೋಡು ನಿವಾಸಿ ಹಾಲಸ್ವಾಮಿಗೌಡ (77) ಅನಾರೋಗ್ಯದ ಹಿನ್ನಲೆಯಲ್ಲಿ ಇಂದು ಗುರುವಾರ ಸಂಜೆ 5:00 ಗಂಟೆಗೆ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರಿಯರು, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅಂತಿಮ…

Read More

ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ

ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಅಕ್ಷರ ಮಾಂತ್ರಿಕ, ಸರಸ್ವತಿ ಸಮ್ಮಾನ್ ಪುರಸ್ಕೃತ, ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ (SL Bhyrappa) ನಿಧನರಾಗಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು, ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. 1931ರ ಆಗಸ್ಟ್ 20ರಂದು ಜನಿಸಿದ ಸಂತೆಶಿವರ ಲಿಂಗಣ್ಣಯ್ಯ ಭೈರಪ್ಪ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರಾಗಿ ಗುರುತಿಸಿಕೊಂಡಿದ್ದರು. ಅವರ ಕಾದಂಬರಿಗಳು ವಿಷಯ, ರಚನೆ ಮತ್ತು ಪಾತ್ರಗಳ ನಿರೂಪಣೆಯಲ್ಲಿ ವಿಶಿಷ್ಟವಾಗಿವೆ.ಭೈರಪ್ಪ ಅವರ ಕೃತಿಗಳು ನವೋದಯ, ನವ್ಯ, ಬಂದಾಯ…

Read More

ಮಾಜಿ ಸಚಿವ ಹರತಾಳು ಹಾಲಪ್ಪ ರವರಿಗೆ ಮಾತೃ ವಿಯೋಗ

ಮಾಜಿ ಸಚಿವ ಹರತಾಳು ಹಾಲಪ್ಪ ರವರಿಗೆ ಮಾತೃ ವಿಯೋಗ ಮಾಜಿ ಸಚಿವ ಹರತಾಳು ಹಾಲಪ್ಪ  ತಾಯಿ ಮಂಜಮ್ಮ (94) ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ವಯೋಸಹಜವಾಗಿ ಇಹಲೋಕ ತ್ಯಜಿಸಿದ್ದಾರೆ. ಮಂಜಮ್ಮನವರಿಗೆ 12 ಮಕ್ಕಳಿದ್ಫ಼ು , 9 ಗಂಡು ಮಕ್ಕಳು ಮತ್ತು 3 ಹೆಣ್ಣು ಮಕ್ಕಳನ್ನು ಹೊಂದಿದ್ದರು. ಮೃತರ ಅಂತ್ಯಕ್ರಿಯೆ ನಾಳೆ ಸ್ವಗ್ರಾಮ ಹೊಳೆಕೊಪ್ಪದಲ್ಲಿ ನೆರವೇರಲಿದೆ ಎಂದು ಆಪ್ತ ವಲಯದಿಂದ ತಿಳಿದುಬಂದಿದೆ. ಮಂಜಮ್ಮನವರ ಬದುಕು ಸರಳತೆ, ಮೌಲ್ಯಗಳು ಮತ್ತು ಕುಟುಂಬದ ಒಗ್ಗಟ್ಟಿನಿಂದ ಕೂಡಿದ್ದು, ಮಕ್ಕಳಿಗೆ ಸದಾ ಪ್ರೇರಣೆಯಾಗಿತ್ತು. ಹರತಾಳು…

Read More

ಅಕ್ಕಿ ಉದ್ಯಮಿ ನಾಗರಾಜ್ ಭಗತ್ ನಿಧನ

ಅಕ್ಕಿ ಉದ್ಯಮಿ ನಾಗರಾಜ್ ಭಗತ್ ನಿಧನ ರಿಪ್ಪನ್ ಪೇಟೆ : ಪಟ್ಟಣದಲ್ಲಿ ಕಳೆದ 5 ದಶಕದಿಂದ ಅಕ್ಕಿ ಹಾಗೂ ಭತ್ತ ವ್ಯಾಪಾರ ನಡೆಸುತ್ತಿದ್ದ ತೀರ್ಥಹಳ್ಳಿ ರಸ್ತೆಯ ನಿವಾಸಿ ಎಸ್. ನಾಗರಾಜ್ ಭಗತ್ (82) ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರಿ ಹಾಗೂ ಮೂವರು ಪುತ್ರರಿದ್ದಾರೆ. ಮೃತರ ಅಂತ್ಯಕ್ರಿಯೆ ಗಾಂಧಿನಗರದ ಹಿಂದೂ ರುದ್ರಭೂಮಿಯಲ್ಲಿ ಇಂದು ಮಧ್ಯಾಹ್ನ ನೆರವೇರಿತು.

Read More

ಶಿಕ್ಷಣ ಇಲಾಖೆ ನಿವೃತ್ತ ನೌಕರ ಕುಬೇರಪ್ಪ ನಿಧನ

ಶಿಕ್ಷಣ ಇಲಾಖೆ ನಿವೃತ್ತ ನೌಕರ ಕುಬೇರಪ್ಪ ನಿಧನ ರಿಪ್ಪನ್‌ಪೇಟೆ : ಪಟ್ಟಣದ ವಿನಾಯಕನಗರ ನಿವಾಸಿ, ಶಿಕ್ಷಣ ಇಲಾಖೆಯ ನಿವೃತ್ತ ನೌಕರ ಕುಬೇರಪ್ಪ(69) ಹೃದಯಾಘಾತದಿಂದ ಬುಧವಾರ ರಾತ್ರಿ ನಿಧನರಾದರು. ಮೃತ ಕುಬೇರಪ್ಪ ಅವರು ಶಿಕ್ಷಣ ಇಲಾಖೆಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಪಟ್ಟಣದ ಸರ್ಕಾರಿ ಪ್ರೌಡ ಶಾಲೆಯಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪುತ್ರರಾದ ಕಾಂಗ್ರೆಸ್ ಮುಖಂಡ ಮಳವಳ್ಳಿ ಮಂಜುನಾಥ್ ,ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು  ಅಗಲಿದ್ದಾರೆ.

Read More

ಮಂಡಾನಿ ಶೇಷನಾಯ್ಕ ನಿಧನ

ಮಂಡಾನಿ ಶೇಷನಾಯ್ಕ ನಿಧನ ಹೊಸನಗರ ತಾಲೂಕಿನ ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಂಡಾನಿ ಗ್ರಾಮದ ವಾಸಿ ಮಂಡಾನಿ ಶೇಷನಾಯ್ಕ (90) ಮಂಗಳವಾರ ಬೆಳಗಿನ ಜಾವ ತಮ್ಮ ಸ್ವ- ಗೃಹದಲ್ಲಿ ನಿಧನರಾದರು. ಅಲ್ಪಕಾಲ ಅನಾರೋಗ್ಯ ಪೀಡಿತರಾಗಿದ್ದ ಶೌಷನಾಯ್ಕ್  ಇಂದು ಬೆಳಗಿನಜಾವ ಮೃತಪಟ್ಟಿದ್ದಾರೆ. ಮೃತರು ಪುತ್ರ ಕೆಜಿಐಡಿ ಇಲಾಖೆಯಲ್ಲಿನ ನಿವೃತ್ತ ಉಪ ನಿರ್ದೇಶಕ ಎಂ.ಕುಮಾರ್, ಮೊಮ್ಮಗ ವಕೀಲ ಮಂಡಾನಿ ಗುರು ಸೇರಿದಂತೆ ಅಪಾರ ಬಂಧುಗಳನ್ನು ಆಗಲಿದ್ದಾರೆ. ಸಂತಾಪ : ತಮ್ಮ ಒಡನಾಡಿಗಳಾಗಿದ್ದ ಮಂಡಾನಿ ಶೇಷನಾಯ್ಕ್ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು…

Read More

ಹಿರಿಯ ಪತ್ರಕರ್ತ ಅರಸಾಳು ರಂಗನಾಥ್ ನಿಧನ – ಗಣ್ಯರ ಸಂತಾಪ | Ripponpete

ಹಿರಿಯ ಪತ್ರಕರ್ತ ಅರಸಾಳು ರಂಗನಾಥ್ ನಿಧನ – ಗಣ್ಯರ ಸಂತಾಪ ಹಿರಿಯ ಪತ್ರಕರ್ತ, ಸಹಕಾರಿ ಧುರೀಣ ಹಿರಿಯ ಪತ್ರಲರ್ತ, ಬ್ರಾಹ್ಮಣ ಸಮಾಜದ ಜಿಲ್ಲಾಧ್ಯಕ್ಷ ಅರಸಾಳು ಎಸ್.ಜಿ.ರಂಗನಾಥ (93) ಇಂದು ಸಂಜೆ ಶಿವಮೊಗ್ಗದ ಖಾಸಗಿ ಅಸ್ಪತ್ರೆಯಲ್ಲಿ ನಿಧನ ಹೊಂದಿದರು. ಮಾದ್ಯಮ ಕ್ಷೇತ್ರದಲ್ಲಿ ವಿಶಿಷ್ಠವಾದ ಛಾಫು ಮೂಡಿಸಿದ್ದ ಅರಸಾಳು ರಂಗನಾಥ್ ರವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಜಿಲ್ಲಾ ಸಂಚಾಲಕ ಹಾಗೂ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಹಂಗಾಮಿ ಅಧ್ಯಕ್ಷರಾಗಿ ಮತ್ತು ಜಿಲ್ಲಾ ಬ್ರಾಹ್ಮಣ ಮಹಾಸಭಾ ನಿರ್ದೇಶಕರಾಗಿ, ಅರಸಾಳು ವ್ಯವಸಾಯ ಸೇವಾ…

Read More

Ripponpete | ಪಟ್ಟಣದ ಹೆಸರಾಂತ ವೈದ್ಯ ಡಾ. ಮಂಜುನಾಥ್ ರಾವ್ (ಕಿರಣ್ ಡಾಕ್ಟರ್) ನಿಧನ

Ripponpete | ಪಟ್ಟಣದ ಹೆಸರಾಂತ ವೈದ್ಯ ಡಾ. ಮಂಜುನಾಥ್ ರಾವ್ (ಕಿರಣ್ ಡಾಕ್ಟರ್) ನಿಧನ ರಿಪ್ಪನ್‌ಪೇಟೆ ; ವಿಶ್ರಾಂತ ವೈದ್ಯರೂ ಹಾಗೂ ಜಿ ಎಸ್ ಬಿ ಸಮಾಜದ ಹಿರಿಯರಾದ ಡಾ. ಮಂಜುನಾಥ್ ರಾವ್ ( ಕಿರಣ್ ಡಾಕ್ಟರ್) ಇಂದು ಬೆಳಗ್ಗೆ 3:30 ಕ್ಕೆ ತೀರ್ಥಹಳ್ಳಿಯಲ್ಲಿರುವ ನಿವಾಸದಲ್ಲಿ ದೈವಾಧೀನರಾಗಿದ್ದಾರೆ. ರಿಪ್ಪನ್‌ಪೇಟೆಯಲ್ಲಿ ಕಿರಣ್ ಕ್ಲಿನಿಕ್ ಎಂಬ ಹೆಸರಿನ ಚಿಕಿತ್ಸಾ ಕೇಂದ್ರದಲ್ಲಿ ಮೂವತ್ತು ವರ್ಷಕ್ಕೂ ಅಧಿಕ ಕಾಲ ಜನರ ಸೇವೆ ಸಲ್ಲಿಸಿದ್ದರು.ಬಡವರಿಗೆ ಉಚಿತವಾಗಿ ಸೇವೆ ನೀಡುತಿದ್ದರು. ವೈದ್ಯಕೀಯ ವೃತ್ತಿಯಲ್ಲಿ ಗಣನೀಯ ಸೇವೆ…

Read More

ತೀರ್ಥಹಳ್ಳಿ ಮಿತ್ರ ವಾರಪತ್ರಿಕೆ ಸಂಪಾದಕ ಮಂಜುನಾಥ್ ನಿಧನ | Thirthahalli

ತೀರ್ಥಹಳ್ಳಿ ಮಿತ್ರ ವಾರಪತ್ರಿಕೆ ಸಂಪಾದಕ ಮಂಜುನಾಥ್ ನಿಧನ! ತೀರ್ಥಹಳ್ಳಿ : ಶ್ವಾಸಕೋದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ತೀರ್ಥಹಳ್ಳಿ ಮಿತ್ರ ವಾರಪತ್ರಿಕೆ ಸಂಪಾದಕ ಮಂಜುನಾಥ್. ಪಿ ಇಂದು ಸಂಜೆ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು.  ಆರೋಗ್ಯ ಗಂಭೀರವಾಗಿ ಹದಗೆಟ್ಟಿದ್ದ ಕಾರಣ ಇಂದು ಬೆಳಿಗ್ಗೆಯಿಂದ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ .ಸಂಜೆ ಸಮಯಕ್ಕೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಮಂಜುನಾಥ್ ರವರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Read More