Headlines

ರಿಪ್ಪನ್‌ಪೇಟೆ – ಕನ್ನಡಪರ ಹೋರಾಟಗಾರ ವಿನಾಯಕ್ ಶೆಟ್ಟಿ ಹೃದಯಾಘಾತದಿಂದ ನಿಧನ|RPET

ರಿಪ್ಪನ್‌ಪೇಟೆ : ಪಟ್ಟಣದ ಸಾಗರ ರಸ್ತೆಯಲ್ಲಿನ ಭಗತ್ ಸಿಂಗ್ ನಗರದ ನಿವಾಸಿ ಕನ್ನಡ ಪರ ಹೋರಾಟಗಾರ ಸಮಾಜ ಸೇವಕ ಹಾಗೂ ಪುನೀತ್ ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ವಿನಾಯಕ್ ಶೆಟ್ಟಿ (26) ಇಂದು ಬೆಳಗಿನಜಾವ ಹೃದಯಘಾತದಿಂದ ನಿಧನರಾಗಿದ್ದಾರೆ. ಇಂದು ಬೆಳಗಿನಜಾವ ವಿನಾಯಕ್ ಶೆಟ್ಟಿ ರವರಿಗೆ (ಭಾನುವಾರ) ಎದೆ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ಮೃತ ವಿನಾಯಕ್ ಶೆಟ್ಟಿ ತಂದೆ, ತಾಯಿ, ಓರ್ವ ಸಹೋದರಿ, ಓರ್ವ ಸಹೋದರ ಸೇರಿದಂತೆ…

Read More

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬೆಳಂದೂರು ನರಸಪ್ಪ ನಿಧನ|RIP

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳಂದೂರು ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡರಾದ ನರಸಪ್ಪ(75) ರವರು ಹೃದಯ ಸಮಸ್ಯೆ ಖಾಯಿಲೆಯಿಂದ ನಿಧನರಾಗಿದ್ದಾರೆ. ಇತ್ತೀಚಿಗೆ ನರಸಪ್ಪ ರವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಮಂಗಳವಾರ  ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ನರಸಪ್ಪ ರವರು ಕೆಂಚನಾಲ ಮಾರಿಕಾಂಬಾ ಜಾತ್ರಾ ಸಮಿತಿಯಲ್ಲಿ 20 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು. ಮೃತರು ಪತ್ನಿ, ಇಬ್ಬರು ಗಂಡು…

Read More

ರಿಪ್ಪನ್‌ಪೇಟೆ : ವಿನಾಯಕನಗರದ ಶಾರದಾ ಬಾಳಿಗ ನಿಧನ|RIP

ರಿಪ್ಪನ್‌ಪೇಟೆ : ಪಟ್ಟಣದ ವಿನಾಯಕನಗರ ನಿವಾಸಿ ಶಾರದಾ ಬಾಳಿಗ (80) ವಯೋಸಹಜ ನಿಧನರಾಗಿದ್ದಾರೆ. ಪಟ್ಟಣದ ವಿನಾಯಕ ನಗರ ನಿವಾಸಿಯಾಗಿದ್ದ ಇವರು ಹಲವು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು, ವಿನಾಯಕನಗರದಲ್ಲಿ ಕಿರಾಣಿ ಅಂಗಡಿ ನಡೆಸುತಿದ್ದ ಇವರು ಪಟ್ಟಣದಾದ್ಯಂತ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಬಾಳಿಗ ಪ್ರಿಂಟರ್ ನ ರಾಜಾರಾಮ್ ಬಾಳಿಗ ಮತ್ತು ಬಾಳಿಗ ಕಮ್ಯೂನಿಕೇಷನ್ ನ ಗೋಪಾಲಕೃಷ್ಣ ಬಾಳಿಗ ಸೇರಿದಂತೆ ನಾಲ್ಕು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಹಿಂದೂ ಸಂಪ್ರದಾಯದಂತೆ ಜರುಗಿದೆ.

Read More

ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ರಿಪ್ಪನ್ ಪೇಟೆಯ ಆರ್.ಎನ್.ಮಂಜಪ್ಪ ಹೃದಯಾಘಾತದಿಂದ ನಿಧನ|Ripponpet

ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ  ರಿಪ್ಪನ್ ಪೇಟೆಯ ಆರ್.ಎನ್.ಮಂಜಪ್ಪ ಹೃದಯಾಘಾತದಿಂದ ನಿಧನ  ರಿಪ್ಪನ್‌ಪೇಟೆ;- ಪಟ್ಟಣದ ಸಾಗರ ರಸ್ತೆಯ ನಿವಾಸಿಯಾಗಿರುವ  ಶಿವಮೊಗ್ಗ ಜಿಲ್ಲಾ ರೈತ ಮುಖಂಡ ಹಾಗೂ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಆರ್.ಎನ್.ಮಂಜಪ್ಪ (೮೯) ತಮ್ಮ ಸ್ವಗೃಹದಲ್ಲಿ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನಹೊಂದಿದ್ದಾರೆ. ಮೃತ ಮಂಜಪ್ಪನವರು  ಜಿಲ್ಲಾ ರೈತ ಸಂಘಟನೆಯಲ್ಲಿ  ಮತ್ತು ರೈತ ಹೋರಾಟ  ಹಾಗೂ ಚಳುವಳಿಯಲ್ಲಿ   ಪ್ರಮುಖ ರೂವಾರಿಯಾಗಿ ಇದ್ದರು. ರೈತರ ಪರವಾಗಿ ನೂರಾರು ಭಾರಿ ಹೋರಾಟ ನಡೆಸಿದ ಇವರು ರೈತರ ಹಿತಕ್ಕಾಗಿ ಅನೇಕ ಬಾರಿ…

Read More

ಹುಂಚ : ಹೃದಯಾಘಾತದಿಂದ ಜಮೀನ್ದಾರ ಟೀಕನಾಯ್ಕ ನಿಧನ|humcha

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾ.ಪಂ ವ್ಯಾಪ್ತಿಯ ಸುಣಕಲ್ಲು ಗ್ರಾಮದ ಜಮೀನ್ದಾರ ಎಸ್.ಬಿ. ಟೀಕನಾಯ್ಕ (73) ರಾತ್ರಿ 12:05 ರ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಸಂಜೆ ಅವರ ಜಮೀನಿನಲ್ಲಿ ನೆರವೇರಲಿದೆ ಎಂದು ತಿಳಿದುಬಂದಿದೆ.

Read More

ರಿಪ್ಪನ್‌ಪೇಟೆ – ಅಬೂಬಕರ್ ಸಾಬ್ ನಿಧನ|Rpet

ರಿಪ್ಪನ್‌ಪೇಟೆ : ಇಲ್ಲಿನ ಸಾಗರ ರಸ್ತೆಯ ನಿವಾಸಿ ಅಬೂಬಕರ್ ಸಾಬ್(78) ನಿಧನರಾಗಿದ್ದಾರೆ. ಸ್ವಲ್ಪ ಕಾಲದ ಅನಾರೋಗ್ಯದಿಂದ ಬಳಲುತಿದ್ದ ಅವರು ಗುರುವಾರ ಮಧ್ಯರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪುತ್ರರಾದ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ಜಿಲ್ಲಾ ಸದಸ್ಯ ಅಬ್ದುಲ್‌ ಖುದ್ದೂಸ್, ಪತ್ನಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಸಾಗರ ರಸ್ತೆಯ ಖಬರ್ ಸ್ಥಾನ್ ನಲ್ಲಿ ಜರುಗಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Read More

ಜನವಾರ್ತೆ ಪತ್ರಿಕೆಯ ಸಂಪಾದಕ ನಾಗರಾಜ್ ಇನ್ನಿಲ್ಲ

ಶಿವಮೊಗ್ಗ ಪತ್ರಿಕಾ ರಂಗದಲ್ಲಿ ಸಂಚಲನ ಮೂಡಿಸಿದ್ದ ಜನವಾರ್ತೆ ಕನ್ನಡ ದಿನಪತ್ರಿಕೆಯ ಸಂಪಾದಕರಾದ  ಜಿ.ಎಸ್. ನಾಗರಾಜ್ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಅವರು ಸ್ಪಂದಿಸದೇ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.. ಮುಂಗೋಪಿ, ಅಷ್ಟೇ ಮೃದು ಸ್ವಭಾವದ ನಾಗರಾಜ್ 1996 ರಲ್ಲಿ ಶಿವಮೊಗ್ಗ ಪತ್ರಿಕಾ ರಂಗದಲ್ಲಿ ಬದಲಾವಣೆ ತಂದು ಸಂಚಲನ ಮೂಡಿಸಿದ್ದ ಧೀಮಂತ ಪತ್ರಿಕಾ ಸಂಪಾದಕ ಹಾಗೂ ಸಂಸ್ಥಾಪಕರಾಗಿದ್ದರು. ಬಹುತೇಕ ಪತ್ರಕರ್ತರು ಇವರ…

Read More

ರಿಪ್ಪನ್‌ಪೇಟೆಯ ಜೆ ಎನ್ ಆರ್ ರೈಸ್ ಮಿಲ್ ಮಾಲೀಕ ಜೆ ಎನ್ ರುದ್ರಪ್ಪಗೌಡ ನಿಧನ|Rpet

ರಿಪ್ಪನ್‌ಪೇಟೆ : ಪಟ್ಟಣದ ಶಿವಮೊಗ್ಗ ರಸ್ತೆಯ ಜೆ ಎನ್ ಆರ್ ರೈಸ್ ಮಿಲ್ ಮಾಲೀಕರಾಗಿದ್ದ ಜೆ ಎನ್ ರುದ್ರಪ್ಪ ಗೌಡರು (93) ತಮ್ಮ ಸ್ವಗೃಹದಲ್ಲಿ ಇಂದು ಬೆಳಿಗ್ಗೆ ವಯೋಸಹಜ ನಿಧನರಾದರು. ಮೂಲತಃ ಜಂಬಳ್ಳಿ ಮನೆತನದವರಾದ ಜೆ ಎನ್ ರುದ್ರಪ್ಪ ಗೌಡರು ಕಳೆದ 70 ವರ್ಷಗಳ ಹಿಂದೆ ರಿಪ್ಪನ್‌ಪೇಟೆಯ ಶಿವಮೊಗ್ಗ ರಸ್ತೆಯಲ್ಲಿ ಜೆ ಎನ್ ಆರ್  ರೈಸ್ ಮಿಲ್ ಪ್ರಾರಂಭಿಸಿದ್ದರು. ಮೃತರಿಗೆ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಜಂಬಳ್ಳಿಯಲ್ಲಿ ಇಂದು ಸಂಜೆ 5…

Read More

ರಿಪ್ಪನ್‌ಪೇಟೆಯ ಸುಧೀಂದ್ರ ಆರ್ ಪ್ರಭು(ಕಲ್ಲು ಬಾಬಣ್ಣ) ನಿಧನ – ಸಂತಾಪ|Ripponpet

ರಿಪ್ಪನ್ ಪೇಟೆ ; ಪಟ್ಟಣದ ಹೊಸನಗರ ರಸ್ತೆಯ ನಿವಾಸಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ಹಾಗೂ  ಸಪ್ತಗಿರಿ ಟ್ರೇಡರ್ಸ್  ಮಾಲೀಕ  ಸುಧೀಂದ್ರ ಆರ್ ಪ್ರಭು ಯಾನೆ ಕಲ್ಲು ಬಾಬಣ್ಣ ( 62) ವರ್ಷ  ಅವರು ಬುಧವಾರ ಬೆಳಗ್ಗೆ ಸ್ವಗೃಹದಲ್ಲಿ ಹೃದಯಾಘಾತದಿಂದ  ನಿಧನರಾದರು. 4 ದಶಕಗಳಿಂದ ಪಟ್ಟಣದಲ್ಲಿ ಮನೆ ಕಟ್ಟಡ ನಿರ್ಮಾಣದ ಸಾಮಗ್ರಿಗಳ ಮಾರಾಟದ ಮೂಲಕ  ಚಿರಪರಿಚಿತರಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು  ಜನ ಮನ್ನಣೆ ಗಳಿಸಿದ್ದರು.  ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು,ಹಾಗೂ ಅಪಾರ ಬಂಧು ಬಳಗವನ್ನು…

Read More

ಹೆದ್ದಾರಿಪುರ ಗ್ರಾಪಂ ಸದಸ್ಯ ಚೂಡಾಮಣಿ‌ ಕಗ್ಗಲಿ ನಿಧನ|Heddaripura

ಹೊಸನಗರ ತಾಲ್ಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯತಿ ಸದಸ್ಯ ಚೂಡಾಮಣಿ ಕಗ್ಗಲಿ (50) ಅನಾರೋಗ್ಯದಿಂದ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಹೆದ್ದಾರಿಪುರ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಇವರು ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿದ್ದರು.ತೀವ್ರ ಅನಾರೋಗ್ಯದಿಂದ ಬಳಲುತಿದ್ದ ಇವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಮೃತರು ತಾಯಿ,ಪತ್ನಿ ಇರ್ವರು ಪುತ್ರರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ತಮ್ಮ ಸ್ವಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಂತಾಪ :  ಬಿಜೆಪಿ ಪಕ್ಷದ…

Read More