ರಿಪ್ಪನ್ ಪೇಟೆಯ ರಿಂಗ್ ಸುಧಾಕರ್ ಹೃದಯಾಘಾತದಿಂದ ನಿಧನ.

ರಿಪ್ಪನ್ ಪೇಟೆ : ಪಟ್ಟಣ ಸೇರಿದಂತೆ ಹೊಸನಗರ, ಸಾಗರ, ತೀರ್ಥಹಳ್ಳಿ ತಾಲೂಕುಗಳಲ್ಲಿ  ಕಳೆದ ಕೆಲವು ದಶಕಗಳಿಂದ ರಿಂಗ್ ಬಾವಿ ನಿರ್ಮಾಣದಿಂದ ಖ್ಯಾತರಾಗಿದ್ದ ರಿಂಗ್ ಸುಧಾಕರ್ ರವರು ಇಂದು ಮಧ್ಯಾಹ್ನ ಕೇರಳದ ಕೊಲ್ಲಂ ಜಿಲ್ಲೆಯ ಅವರ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೇರಳ ಮೂಲದ ರಿಂಗ್ ಸುಧಾಕರ್ ಅವರು ಮೂರು ದಶಕಗಳಿಂದ ರಿಪ್ಪನ್  ಪೇಟೆಯಲ್ಲಿ ನೆಲೆ ನಿಂತು ರಿಂಗ್ ಬಾವಿ ನಿರ್ಮಾಣ ಮಾಡುವುದರ ಮೂಲಕ ರಿಂಗ್ ಸುಧಾಕರ ಎಂದು ಜನಪ್ರಿಯರಾಗಿದ್ದರು. ವಿವಿಧ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದ ಅವರು ವಿವಿಧ ಸಂಘ ಸಂಸ್ಥೆಗಳಿಗೆ…

Read More

ಹೃದಯಾಘಾತದಿಂದ ಗ್ರಾಮ ಪಂಚಾಯತ್ ಅಧ್ಯಕ್ಷ ವಿನಯ್ ಗೌಡ್ರು ನಿಧನ

ಸೈದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಬಿಜೆಪಿ ಪ್ರಮುಖರಾಗಿದ್ದ ವಿನಯ್ ಗೌಡ್ರು (35) ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ವಿನಯ್ ಗೌಡ್ರು 12/05/21 ರಂದು ತಾಳಗುಪ್ಪ ಹೋಬಳಿಯ ಸೈದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆಯನ್ನು ಇಂದು ರಾತ್ರಿ 10 ಕ್ಕೆ ಅವರ ಸ್ವಗ್ರಾಮವಾದ ತಡಗಳಲೆ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Read More

ರಿಪ್ಪನ್ ಪೇಟೆಯ ರಾಧಾಬಾಯಿ ಪ್ರಭು ನಿಧನ :

ರಿಪ್ಪನ್ ಪೇಟೆ :ಪಟ್ಟಣದ ಶಿವಮೊಗ್ಗ ರಸ್ತೆಯ ನಿವಾಸಿ ಶ್ರೀಮತಿ ರಾಧಾಬಾಯಿ ಡಿ ಪ್ರಭು (80)  ಶುಕ್ರವಾರ ಸಂಜೆ ನಿಧನರಾದರು. ಇವರಿಗೆ ಇರ್ವರು ಪುತ್ರರು ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.  ಈ ದಿನ ರಾತ್ರಿ 9:30 ಕ್ಕೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇವರ ನಿಧನಕ್ಕೆ ಜಿ ಎಸ್ ಬಿ ಸಮಾಜದ ಅಧ್ಯಕ್ಷ ಎನ್ ಮಂಜುನಾಥ್ ಕಾಮತ್, ಗಣೇಶ್ ಕಾಮತ್, ಜೆ ರಾಧಕೃಷ್ಣ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

Read More

ರೈತ ಪರ ಹೋರಾಟಗಾರ ಕೆ ಸಿ ವೀರಭದ್ರಪ್ಪ ಗೌಡ ಕಗ್ಗಲಿ ನಿಧನ :

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಕಗ್ಗಲಿ ಗ್ರಾಮದ ಹಿರಿಯರು,ರೈತ ಹೋರಾಟಗಾರರಾದ ಕೆ ಸಿ ವೀರಭದ್ರಪ್ಪ ಗೌಡ (88) ಮುಂಜಾನೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.  ಮೃತರು 8 ಜನ ಮಕ್ಕಳು,12 ಜನ ಮೊಮ್ಮಕ್ಕಳು ,7 ಜನ ಮರಿ ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರು ರೈತ ಪರ ಸಂಘಟನೆಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.ರೈತ ಪರ ಹೋರಾಟದಲ್ಲಿ ಇವರು ಬಳ್ಳಾರಿಯಲ್ಲಿ 21 ದಿನ ಜೈಲು ವಾಸ ಅನುಭವಿಸಿದ್ದರು. ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 2 ಗಂಟೆಗೆ ಕಗ್ಗಲಿ…

Read More

ಹಿರಿಯ ಸಾಹಿತಿ,ಕನ್ನಡಪರ ಹೋರಾಟಗಾರ ಚಂಪಾ ನಿಧನ :

ಕವಿ, ನಾಟಕಕಾರ, ಕನ್ನಡಪರ ಹೋರಾಟಗಾರ ಪ್ರೊ.ಚಂದ್ರಶೇಖರ್ ಪಾಟೀಲ್ (ಚಂಪಾ) ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು.  ಅವರಿಗೆ 82 ವರ್ಷ ವಯಸ್ಸಾಗಿತ್ತು.ಅನಾರೋಗ್ಯದಿಂದ ಬಳಲುತ್ತಿದ್ದ ಚಂಪಾ ಅವರು ಇಂದು ಬೆಳಗ್ಗೆ ನಗರದ ಕೋಣನಕುಂಟೆಯ ಆಸ್ಟ್ರಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರು , ಒಬ್ಬ ಪುತ್ರ, ಒಬ್ಬರು ಪುತ್ರಿ ಸಹಿತ ಅಪಾರ ಬಂಧುಮಿತ್ರರು, ಅಭಿಮಾನಿಗಳನ್ನು ಅಗಲಿದ್ದಾರೆ. ಪಾರ್ಥಿವ ಶರೀರವನ್ನು ನಗರದ ಯಲಚೇನಹಳ್ಳಿಯಲ್ಲಿರುವ ಅವರ ನಿವಾಸಕ್ಕೆ ತರಲಾಗುವುದು. ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸಾಹಿತ್ಯ ಲೋಕದಲ್ಲಿ ಚಂಪಾ ಎಂಬ ಹೆಸರಿನಿಂದ ಪ್ರಖ್ಯಾತರಾಗಿದ್ದ…

Read More

ಹಿಂಡ್ಲೆಮನೆ ಕೆ.ಎಂ.ಗೋಪಾಲಾಚಾರ್ಯ ನಿಧನ

ರಿಪ್ಪನ್‌ಪೇಟೆ: ಕೋಡೂರು ಗ್ರಾಪಂ ವ್ಯಾಪ್ತಿಯ ಕರಿಗೆರಸು ಗ್ರಾಮದ ಹಿಂಡ್ಲೆಮನೆ ವಾಸಿ ಕೆ.ಎಂ. ಗೋಪಾಲಾಚಾರ್ಯ (76) ಶನಿವಾರ ನಿಧನರಾದರು. ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಶನಿವಾರ ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆದರು. ಮೃತರು ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯು ಇಂದು ಸಂಜೆ ಹಿಂಡ್ಲೆಮನೆಯ ಮೃತರ ಜಮೀನಿನಲ್ಲಿ ನೆರವೇರಿತು.

Read More

ರಿಪ್ಪನ್ ಪೇಟೆ ಹೊಸನಗರ ರಸ್ತೆ ನಿವಾಸಿ ಶಫ಼ಿ ಅಹಮದ್ ಬ್ಯಾರಿ ನಿಧನ :

ರಿಪ್ಪನ್ ಪೇಟೆ : ಪಟ್ಟಣದ ಹೊಸನಗರ ರಸ್ತೆಯ ನಿವಾಸಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದ ದಿವಂಗತ ಅಹಮ್ಮದ್ ಬ್ಯಾರಿಯವರ ತೃತೀಯ ಪುತ್ರ ಶಫಿ ಅಹಮದ್ ಬ್ಯಾರಿ (48) ಇಂದು ಮಧ್ಯಾಹ್ನ ಚೆನ್ನೈ ನಗರದಲ್ಲಿ ನಿಧನ ಹೊಂದಿದ್ದಾರೆ. ಅಲ್ಪಕಾಲದ ಖಾಯಿಲೆಯಿಂದ ಬಳಲುತಿದ್ದ ಶಫ಼ಿ ಅಹಮದ್ ಬ್ಯಾರಿ ರವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ನಂತರ ಇತ್ತಿಚೆಗೆ ಹೆಚ್ಚಿನ ಚಿಕಿತ್ಸೆಗೆ ಚೆನೈ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ಕೊನೆಯುಸಿರೆಳೆದರು….

Read More