POSTMAN NEWS

ನೈಜ ಸುದ್ದಿ ನೇರ ಬಿತ್ತರ..

ರಿಪ್ಪನ್‌ಪೇಟೆಯ ಸುಧೀಂದ್ರ ಆರ್ ಪ್ರಭು(ಕಲ್ಲು ಬಾಬಣ್ಣ) ನಿಧನ – ಸಂತಾಪ|Ripponpet

ರಿಪ್ಪನ್ ಪೇಟೆ ; ಪಟ್ಟಣದ ಹೊಸನಗರ ರಸ್ತೆಯ ನಿವಾಸಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ಹಾಗೂ  ಸಪ್ತಗಿರಿ ಟ್ರೇಡರ್ಸ್  ಮಾಲೀಕ  ಸುಧೀಂದ್ರ ಆರ್ ಪ್ರಭು ಯಾನೆ ಕಲ್ಲು ಬಾಬಣ್ಣ ( 62) ವರ್ಷ  ಅವರು ಬುಧವಾರ ಬೆಳಗ್ಗೆ ಸ್ವಗೃಹದಲ್ಲಿ ಹೃದಯಾಘಾತದಿಂದ  ನಿಧನರಾದರು.

4 ದಶಕಗಳಿಂದ ಪಟ್ಟಣದಲ್ಲಿ ಮನೆ ಕಟ್ಟಡ ನಿರ್ಮಾಣದ ಸಾಮಗ್ರಿಗಳ ಮಾರಾಟದ ಮೂಲಕ  ಚಿರಪರಿಚಿತರಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು  ಜನ ಮನ್ನಣೆ ಗಳಿಸಿದ್ದರು. 

ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು,ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಗಾಂಧಿ ನಗರದ ಹಿಂದೂ ರುದ್ರಭೂಮಿ
ಯಲ್ಲಿ  ಸಂಜೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ .

ಸಂತಾಪ ;

ರಿಪ್ಪನಪೇಟೆ  ಸಪ್ತಗಿರಿ ಟ್ರೇಡರ್ಸ್ ಮಾಲೀಕರಾದ ಸುಧೀಂದ್ರ ಆರ್.ಪ್ರಭು  (ಕಲ್ಲು ಬಾಬಣ್ಣ) ರವರ ನಿಧನಕ್ಕೆ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಹಾಲಪ್ಪ ಹರತಾಳು,ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ಮುಖಂಡರಾದ ಕಲಗೋಡು ರತ್ನಾಕರ್ ,ಅರ್ ಎ ಚಾಬುಸಾಬ್ ,ಎಂ ಬಿ‌ ಮಂಜುನಾಥ್ ,ಆನಂದ್ ಮೆಣಸೆ ,ಆರ್ ಎನ್ ಮಂಜುನಾಥ್ ,ಸುಧೀಂದ್ರ ಪೂಜಾರಿ, ಆಸೀಫ಼್ ಭಾಷಾಸಾಬ್ ಸೇರಿದಂತೆ ಜಿ.ಎಸ್. ಬಿ. ಸಮಾಜ ಮತ್ತು ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಮುಖಂಡರು  ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.