ಹೆಲ್ಮೆಟ್ ಧರಿಸಿ ಸೈಕಲ್ ತುಳಿದು ಬೈಕ್ ಪ್ರಯಾಣಿಕರಿಗೆ ವಿಭಿನ್ನ ರೀತಿಯಲ್ಲಿ ಜಾಗೃತಿ ಮಾಡಿಸಿದ 72 ರ ಹರೆಯದ ಸಾಮಾಜಿಕ ಹೋರಾಟಗಾರ|Ripponpet

ರಿಪ್ಪನ್‌ಪೇಟೆ : 72 ವರ್ಷದ ಹಿರಿಯ ನಾಗರಿಕರೊಬ್ಬರು ತಮ್ಮ ಇಳಿ ವಯಸ್ಸಿನಲ್ಲಿಯೂ ಜನರಿಗೆ ಹೆಲ್ಮೆಟ್‌ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅದೂ ಸೈಕಲ್‌ ಮೂಲಕ ಎಂಬುದು ಮತ್ತೊಂದು ವಿಶೇಷ ಮೂರು ತಲೆಯ ಹೆಲ್ಮೆಟ್‌ ಹಾಕಿ, ತಮ್ಮ ಹಳೇ ಸೈಕಲ್‌ ಏರಿ ರಸ್ತೆಯುದ್ದಕ್ಕೂ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪಟ್ಟಣದಲ್ಲಿ ಜನಪರ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತರಾಗಿರುವ ಟಿ.ಆರ್.ಕೃಷ್ಣಪ್ಪ, ಸೈಕಲ್ ಸವಾರಿಯ ಮೂಲಕ ವಿಭಿನ್ನ ರೀತಿಯಲ್ಲಿ ಮೂರು ಹೆಲ್ಮೆಟ್ ಹಾಕಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಸುಮಾರು 72 ವರ್ಷ ಪ್ರಾಯದ ವಯೋವೃದ್ದರಾಗಿದ್ದರೂ ಕೂಡಾ 17 ವರ್ಷದ ನವ ಯುವಕರಂತೆ ಸೈಕಲ್ ಮೇಲೆ ತಿರುಗುವ ಆರೋಗ್ಯವಂತ ಸದೃಡ ದೇಹ ಹೊಂದಿರುವ ಟಿ.ಆರ್.ಕೃಷ್ಣಪ್ಪನವರು, ಇಂದಿನ ಯುವಜನಾಂಗವನ್ನು ನಾಚಿಸುವಂತೆ ಮಾಡಿದ್ದಾರೆ. ಇವರ ಲವಲವಿಕೆ ಜೀವನ ಶೈಲಿ ಎಂತವರನ್ನು ಬೆರಗುಗೊಳಿಸುತ್ತಿದೆ.

ಪ್ರತಿದಿನ ಬೆಳಗ್ಗೆ ಮನೆಮನೆಗೆ ಪೇಪರ್‌ ತಲುಪಿಸುವ ಕಾರ್ಯ ಮಾಡುವ ಇವರು, ಈ ವೇಳೆ ಸೈಕಲ್‌ ಮೂಲಕ ಬರುವಾಗ ಹೆಲ್ಮೆಟ್‌ ಧರಿಸಿರುತ್ತಾರೆ. ಅದು ಒಂದು ಹೆಲ್ಮೆಟ್‌ ಅಲ್ಲ, ಬದಲಿಗೆ ಮೂರು ಹೆಲ್ಮೆಟ್‌ಅನ್ನು ಧರಿಸಿ ಸಂಚರಿಸುತ್ತಿದ್ದಾರೆ. ಇದು ಎಲ್ಲರಿಗೂ ವಿಚಿತ್ರ ಎನಿಸಿದರೂ ಜತೆಗೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *