ಬೀದಿನಾಯಿಗಳ ದಾಳಿಗೆ ಬಲಿಯಾದ 4 ವರ್ಷದ ಬಾಲಕ – ಮನೆಯಂಗಳದಲ್ಲಿ ಆಟವಾಡುತಿದ್ದಾಗ ಬಾಲಕನ ತಲೆ ಸೀಳಿ ಮೆದುಳು ತಿಂದ ನಾಯಿಗಳು|attack
ಬೀದಿ ನಾಯಿಗಳ ದಾಳಿಯಿಂದ ನಾಲ್ಕು ವರ್ಷದ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ದಡಮಘಟ್ಟ ಗ್ರಾಮದಲ್ಲಿ ನಡೆದಿದೆ. ಸೈಯದ್ ಮದನಿ(4) ನಾಯಿಗಳ ದಾಳಿಗೆ ಬಲಿಯಾದ ಬಾಲಕ. ಬಾಲಕ ಸೈಯದ್ ಮದನಿಯು ಸಂಜೆ ನಾಲ್ಕು ಗಂಟೆಗೆ ಮನೆಯಿಂದ ಹೊರಗೆ ಆಟವಾಡಲು ಬಂದಾಗ ಏಕಾಏಕಿ ಹತ್ತಾರು ನಾಯಿಗಳು ಒಂದೇ ಸಮನೆ ದಾಳಿ ನಡೆಸಿವೆ. ದಾಳಿಗೆ ಬೆದರಿದ ಮದನಿ ನೆಲಕ್ಕೆ ಬಿದ್ದಿದ್ದಾನೆ. ಈ ವೇಳೆ ಎಲ್ಲ ನಾಯಿಗಳು ಆತನನ್ನು ಕಚ್ಚಿ ಹಾಕಿದೆ. ಅಲ್ಲದೇ, ರಸ್ತೆ ತುಂಬೆಲ್ಲಾ…