ಸಾಗರ : ನಗರಸಭೆ ವ್ಯಾಪ್ತಿಯ ಕೆನರಾ ಬ್ಯಾಂಕ್ ಬಳಿ ಬೀದಿ ಬದಿಯಲ್ಲಿ ಹೊಟ್ಟೆಪಾಡಿಗೆ ಹಣ್ಣು ವ್ಯಾಪಾರ ಮಾಡುವವರನ್ನು ನಗರಸಭೆ ಅಧಿಕಾರಿಗಳು ಬೀದಿಗೆ ತಳ್ಳಿದ್ದಾರೆ.ರಾತ್ರೋರಾತ್ರಿ ಕಳ್ಳರ ಹಾಗೆ ಬಂದು ಅಂಗಡಿಗಳನ್ನು ತೆರವುಗೊಳಿಸಿ ಬಡವರ ಮೇಲೆ ತಮ್ಮ ಶೂರತನ ಮೆರೆದಿದ್ದಾರೆ.
ಸಾಲ ಮಾಡಿ ತಂದು ನಾಲ್ಕಾಣೆ ಲಾಭಕ್ಕೆ ಮಾರಾಟ ಮಾಡಿ ತನ್ನ ಹಾಗೂ ಕುಟುಂಬದ ಹೊಟ್ಟೆಪಾಡಿಗಾಗಿ ತಂದಿದ್ದ ಹಣ್ಣುಗಳನ್ನು ರಸ್ತೆಯ ತುಂಬ ಚೆಲ್ಲಾಡಿ ರಾಕ್ಷಸರಂತೆ ವರ್ತಿಸಿದ್ದಾರೆ.
ಸಾಗರ ನಗರ ವ್ಯಾಪ್ತಿಯಲ್ಲಿ ಬಹುತೇಕ ಬಡವರು,ಅವಿದ್ಯಾವಂತರು ದೊಡ್ಡ ದೊಡ್ಡ ಮಳಿಗೆಯನ್ನು ಬಾಡಿಗೆ ಪಡೆದು ವ್ಯಾಪರ ಮಾಡಲು ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಬೀದಿಬದಿಯಲ್ಲಿ ತರಕಾರಿ ಹಣ್ಣು ಹೂವು ಮಾರಾಟ ಮಾಡುತ್ತಾರೆ
ವಿಷಯ ತಿಳಿಯುತ್ತಿದ್ದಂತೆ ಸಾಗರದ ಪ್ರಜ್ಘಾವಂತ ನಾಗರೀಕರು ಸ್ಥಳದಲ್ಲಿ ನೆರೆದು ಪ್ರತಿಭಟನೆ ನಡೆಸುತಿದ್ದು ನಗರಸಭೆಯ ವಿರುದ್ದ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸುತಿದ್ದಾರೆ.
ಸ್ಥಳಕ್ಕಾಗಮಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಮಾತನಾಡಿ ನಗರಸಭೆಯ ಗೂಂಡಾವರ್ತನೆಯ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ನಗರಸಭೆ ವಿರೋದ ಪಕ್ಷದ ನಾಯಕ ಗಣಪತಿ ಮಂಡಗಳಲೆ, ಮುಖಂಡರಾದ ಲಲಿತಮ್ಮ, ಬಿ ಆರ್ ಜಯಂತ್ ,ತೀ ನಾ ಶ್ರೀನಿವಾಸ್ ,ಮಧುಮಾಲಾತಿ , ,ಅಜೀಮ್ ,ತಶ್ರೀಫ಼್ ,ಇಬ್ರಾಹಿಂ, ಶಾಹೀನಾ ಭಾನು, ಸದ್ದಾಂ ದೊಡ್ಮನೆ ಬೀದಿ ಬದಿ ವ್ಯಾಪಾರಿಗಳ ಅಧ್ಯಕ್ಷ ಜೀಲಾನಿ ಹಾಗೂ ಇನ್ನಿತರರಿದ್ದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇