ಹೊಸನಗರ : ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗದಲ್ಲಿ ಮಧ್ಯಾಹ್ನ ಟಿಪ್ಪರ್ ಲಾರಿ ಹಾಗೂ ಟಿವಿಎಸ್ ಎಕ್ಸೆಲ್ ನಡುವೆ ಭೀಕರ ಅಪಘಾತ ನಡೆದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಮುಂಬಾರು ಸಮೀಪದ ಸಾವಂತೂರು ನಿವಾಸಿ ಅಣ್ಣಪ್ಪ (43) ಮೃತಪಟ್ಟ ದುರ್ಧೈವಿಯಾಗಿದ್ದಾರೆ.
ಕೊಡಚಾದ್ರಿ ಕಾಲೇಜಿನ ಮುಂಭಾಗದಲ್ಲಿ ಅಣ್ಣಪ್ಪ ತಮ್ಮ ಟಿವಿಎಸ್ ಎಕ್ಸೆಲ್ ಬೈಕ್ ನಲ್ಲಿ ಸಾಗುತಿದ್ದಾಗ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ.ಅಪಘಾತದ ರಭಸಕ್ಕೆ ವ್ಯಕ್ತಿ ಮೃತಪಟ್ಟಿದ್ದಾರೆ.
ಮೃತ ಅಣ್ಣಪ್ಪ ರವರು ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಗಳನ್ನು ದ್ವಿತೀಯ ಬಿಎ ತರಗತಿಗೆ ಅಡ್ಮೀಷನ್ ಮಾಡಿಸಲು ಬಂದು ಹಿಂದಿರುಗುತಿದ್ದಾಗ ಈ ದುರ್ಘಟನೆ ನಡೆದಿದೆ.
ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಪಘಾತದ ದೃಶ್ಯಾವಳಿ ಇಲ್ಲಿ ವೀಕ್ಷಿಸಿ👇