Headlines

ರಿಪ್ಪನ್‌ಪೇಟೆ : 24 ಗಂಟೆಯೊಳಗೆ ಸರ್ಕಾರಿ ವೈದ್ಯರ ವರ್ಗಾವಣೆಗೊಳಿಸುವಂತೆ ಗ್ರಾಮಸ್ಥರ ಒಕ್ಕೊರಲ ಆಗ್ರಹ|Ripponpet

ರಿಪ್ಪನ್‌ಪೇಟೆ : ಇಲ್ಲಿನ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಿಯಲ್ಲಿ ವೈದರಿಲ್ಲದೇ ರೋಗಿಗಳು ಹಾಗೂ ಆಕಸ್ಮಿಕ ಅಪಘಾತಕ್ಕೀಡಾದವರು ಪರಿತಪಿಸುವಂತಾಗಿದ್ದು ಕೂಡಲೇ ನಾಲ್ವರು ವೈದ್ಯಾಧಿಕಾರಿಗಳನ್ನು ವರ್ಗಾವಣೆಗೊಳಿಸುವಂತೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದರು.

ರಿಪ್ಪನ್‌ಪೇಟೆಯ ಗ್ರಾಮ ಪಂಚಾಯ್ತಿ ಕುವೆಂಪು ಸಭಾ ಭವನದಲ್ಲಿ 2022-23 ನೇ ಸಾಲಿನ ಗ್ರಾಮ ಸಭೆಯಲ್ಲಿ ಹೆಸರಿಗೆ ನಾಲ್ವರು ವೈದ್ಯಾಧಿಕಾರಿಗಳಿದ್ದರೂ ಕೂಡಾ ರಾತ್ರಿ ವೇಳೆ ಅರೋಗ್ಯ ಕಾರ್ಯಕರ್ತೆಯೇ ವೈದ್ಯರಾಗಿ ಹೆರಿಗೆ ಮಾಡಿಸುವುದು ಮತ್ತು ತುರ್ತು ಚಿಕಿತ್ಸೆ ನೀಡುವಂತಾಗಿದೆ ಹಾಗಾದರೆ ನಮ್ಮೂರಿಗೆ ಇಂತಹ ಬೇಜವಾಬ್ದಾರಿ ವೈದ್ಯಾಧಿಕಾರಿಗಳು ಏಕೆ ಎಂದು ಗ್ರಾಮಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಅರೋಗ್ಯ ರಕ್ಷಾ ಸಮಿತಿ ಉತ್ತರಿಸಲಾಗದೇ ಮೌನ ವಹಿಸಿದ್ದು ಈ ಕೂಡಲೇ ಇಲ್ಲಿನ ವೈದ್ಯರನ್ನು ವರ್ಗಾಯಿಸುವಂತೆ ಗ್ರಾಮಸ್ಥರು ಒಕ್ಕೂರಲ ನಿರ್ಣಯ ಕೈಗೊಂಡರು.

ಗ್ರಾಮ  ಪಂಚಾಯ್ತಿ ಅಧ್ಯಕ್ಷೆ ಮಂಜುಳ ಕೇತಾರ್ಜಿರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ ಅಸ್ಪತ್ರೆಯ ರಕ್ಷಾ ಸಮಿತಿಯಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದು ಆಗ ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳುತ್ತಾರೆ ನಂತರದಲ್ಲಿ ಮತ್ತೆ ಹೀಗೆ ನಡೆದುಕೊಳ್ಳುತ್ತಾರೆ ಎಂದು ತಮ್ಮ ಅಸಹಾಯಕತೆಯನ್ನು ಗ್ರಾಮ ಸಭೆಯಲ್ಲಿ ವ್ಯಕ್ತಪಡಿಸಿದರು.

ಜನಪರಹೋರಾಟ ವೇದಿಕೆ ಅಧ್ಯಕ್ಷ ಆರ್.ಎನ್.ಮಂಜುನಾಥ ಮತ್ತು ಆರ್.ರಾಘವೇಂದ್ರ, ಕೆರೆಹಳ್ಳಿ ನಾರಾಯಣ ಇವರು ಪಶು ಅಸ್ಪತ್ರೆಯಲ್ಲಿ ಸರಿಯಾಗಿ ಔಷಧಿ ಸರಬರಾಜು ಅಗುತ್ತಿಲ್ಲ ಹೊರಗಡೆ ಖಾಸಗಿ ಔಷಧಿ ಅಂಗಡಿಗೆ ಚೀಟಿ ಬರೆಯುತ್ತಾರೆ.ಮತ್ತು ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಸಂತಾನ ಹರಣ ಚಿಕಿತ್ಸೆ ನೀಡಿ ನಿಯಂತ್ರಿಸಲು ಕ್ರಮ ಕೈಗೊಳ್ಳುವುದು ಹಾಗೂ ಜಾನುವಾರುಗಳ ಗಣತಿ ಸಮರ್ಪಕವಾಗಿ ಅಗಿಲ್ಲ ಈ ಹಿಂದೆ ಜಾನುವಾರು ಕಾಲುಬಾಯಿ ರೋಗಕ್ಕೆ ಅಸ್ಪತ್ರೆಯಿಂದ ಪಿನಾಯಿಲ್ ಕೊಡುವ ವ್ಯವಸ್ಥೆ ಇತ್ತು ಅದು ಕೂಡಾ ದೊರೆಯುತ್ತಿಲ್ಲ ಎಂದಾಗ ನೋಡಲ್ ಅಧಿಕಾರಿ ಪಶು ಇಲಾಖೆಯ ಸಹಾಯಕ ಅಧಿಕಾರಿ ಹೇಮಂತ್ ಈಗಾಗಲೇ ಮಲೆನಾಡಿನ ವ್ಯಾಪ್ತಿಯಲ್ಲಿ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಉಲ್ಭಣಗೊಂಡಿದ್ದು ನಿಯಂತ್ರಣಕ್ಕಾಗಿ ಲಸಿಕೆ ಹಾಕಲಾಗುತ್ತಿದ್ದು ತಾಲ್ಲೂಕಿನ ವ್ಯಾಪ್ತಿಯಲ್ಲಿ 87 ವೈದ್ಯ ಸಿಬ್ಬಂದಿಗಳು ಇರಬೇಕು ಅದರೆ ಕೇವಲ 12 ಜನ ವೈದ್ಯ ಸಿಬ್ಬಂದಿಗಳು ಹಗಲಿರುಳು ಕಾರ್ಯ ನಿರ್ವಹಿಸುತ್ತಿದ್ದಾರೆಂದು ಮಾಹಿತಿ ನೀಡಿದಾಗ ನಿಮ್ಮ ಇಲಾಖೆಯಿಂದ ಬೇರೆ ಇಲಾಖೆಗೆ ನಿಯೋಜಿಸಲ್ಪಟ ಸಿಬ್ಬಂದಿಗಳನ್ನು ವಾಪಾಸ್ಸು ಕರೆಯಿಸಿಕೊಳ್ಳುವಂತೆ ಗ್ರಾಮ ಸಭೆಯ ಮೂಲಕ ನಿರ್ಣಯ ಕೈಗೊಳ್ಳಲಾಯಿತು.

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಮಹಾಲಕ್ಷ್ಮಿ ನಾಯಿಗಳ ಹಾವಳಿಯ ಬಗ್ಗೆ ಸಭೆಯ ಗಮನಸೆಳೆದು ತಕ್ಷಣ ನಿಯಂತ್ರಿಸುವಂತೆ ಅಗ್ರಹಿಸಿದರು.
ಇದೇ ಸಂದರ್ಭದಲ್ಲಿ ಕೆರೆಹಳ್ಳಿ ಸರ್ವೇ 9 ರಲ್ಲಿ ಅರಣ್ಯ ಜಾಗದಲ್ಲಿ 10 ಎಕರೆ ಜಮೀನು ಸರ್ಕಾರಿ ಪ್ರಥಮದರ್ಜೆ ಕಾಲೇಜ್ ಅಭಿವೃದ್ದಿಗೆ ಕಾಯ್ದಿರಿಸುವಂತೆ ಮತ್ತು ನಿವೇಶನ ರಹಿತರಿಗಾಗಿ ಜಾಗ ಮಂಜೂರಾತಿ ಮಾಡುವಂತೆ ಸಭೆಯಲ್ಲಿ ಚರ್ಚಿಸಲಾಯಿತು.

ಈ ಸಭೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ.ಡಿ.ಈ.ಮಧುಸೂದನ್, ಎನ್.ಚಂದ್ರೇಶ್,ಗಣಪತಿ,ಸುದೀಂದ್ರಪೂಜಾರಿ,ಜಿ.ಡಿ.ಮಲ್ಲಿಕಾರ್ಜುನ,ಪ್ರಕಾಶ್ ಪಾಲೇಕರ್,ಸುಂದರೇಶ್,ಆಶೀಫ್ ಭಾಷಾ,ಪಿ.ರಮೆಶ್, ಆರ್.ಎಲ್.ನಿರೂಪ್‌ಕುಮಾರ್, ಸಾರಾಭಿ,ದಾನಮ್ಮ,ಆಶ್ವಿನಿ ರವಿಶಂಕರ್,ಅನುಪಮ ರಾಕೇಶ್,ದೀಪಾ ಸುದೀರ್,ಧನಲಕ್ಷಿ,ವನಮಾಲ,ವೇದಾವತಿ,ವಿನೋಧ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಆಭಿವೃದ್ದಿ ಇಲಾಖೆ ಸಖಿ ಯೋಜನೆಯ ಆಧಿಕಾರಿ ವಿನಿಮ್ಯಾಥ್ಯೂಸ್,ಮೇಲ್ವಿಚಾರಕಿ ವಿಜಯಲಕ್ಷಿ,ಪಿಡಿಓ ಜಿ.ಚಂದ್ರಶೇಖರ್,ಪಶು,ಕಂದಾಯ,ಮೆಸ್ಕಾಂ,ಕೃಷಿ,ತೋಟಗಾರಿಕೆ,ಶಿಕ್ಷಣ,
ಅಂಗನವಾಡಿ ಆಶಾ ಅರೋಗ್ಯ ಅರಣ್ಯ ಪೊಲೀಸ್ ಇಂಜಿನಿಯರಿAಗ್ ಇನ್ನಿತರ ಇಲಾಖೆಗಳ ಅಧಿಕಾರಿ ವರ್ಗ ಹಾಜರಿದ್ದರು.

ನಾಡಗೀತೆಯೊಂದಿಗೆ ಗ್ರಾಮ ಸಭೆ ಅರಂಭಗೊಂಡಿತು.ಪಿಡಿಓ ಜಿ.ಚಂದ್ರಶೇಖರ್ ಸ್ವಾಗತಿಸಿದರು.

Leave a Reply

Your email address will not be published. Required fields are marked *