ರಿಪ್ಪನ್‌ಪೇಟೆ;-ಆಳ್ವಾಸ್ ನುಡಿಸಿರಿ ವಿರಾಸತ್ ಮತ್ತು ಕಲಾಕೌಸ್ತುಭ ಕನ್ನಡ ಸಂಘ ಇವರ ಸಹಯೋಗದಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜ್ ಕ್ರೀಡಾಂಗಣದಲ್ಲಿ ಅಯೋಜಿಸಲಾದ `ಆಳ್ವಾಸ್ ಸಾಂಸ್ಕೃತಿಕ ವೈಭವ’’ಮಲೆನಾಡಿನ ಕಲಾರಸಿಕರನ್ನು ಮನೋರಂಜಿಸಿತು.
ಈ ಕಾರ್ಯಕ್ರಮಕ್ಕೆ ಶಾಸಕ ಹರತಾಳು ಹಾಲಪ್ಪ ಚಾಲನೆ ನೀಡಿ ಮಾತನಾಡಿ ನಶಿಸುತ್ತಿರುವ ಭಾರತೀಯ ಜಾನಪದ ಸಂಸ್ಕೃತಿಯನ್ನು ಉಳಿಸಿ ಪ್ರೋತ್ಸಾಹಿಸುವ ಮೂಲಕ ಇಂದಿನ ಯುವಪೀಳಿಗೆಯಲ್ಲಿ ಜಾನಪದದ ಜಾಗೃತಿಯನ್ನು ಮೂಡಿಸುವ ಮಹಾರ್ತ್ಕಾಯದಲ್ಲಿ ಅಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಡಾ.ಎಂ ಮೋಹನ್ ಆಳ್ವರ ಕಾರ್ಯ ಪ್ರಶಂಸನೀಯವಾಗಿದೆ ಎಂದರು.
ಭಾರತೀಯ ಕಲೆ ಸಾಹಿತ್ಯ ಭರತನಾಟ್ಯ ಇನ್ನಿತರ ಕಲಾ ಪ್ರಕಾರಗಳನ್ನು ದೇಶ ವಿದೇಶದಲ್ಲಿ ಪ್ರದಶಿಸುವ ಮೂಲಕ ಕಲೆಯನ್ನು ಉತ್ಕುಷ್ಟಕ್ಕೆ ಕೊಂಡ್ಯೂಯವ ಮೂಲಕ ದೇಶದ ಪರಿಕರಗಳನ್ನು ಅಂತರ ರಾಷ್ಟಿçÃಯ ಮಟ್ಟದಲ್ಲಿ ಪರಿಚಯಿಸಿ ಪರಿಣಾಮಕಾರಿಯಾಗಿ ಭಾರತದ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಪ್ರೋತ್ಸಾಹಿಸಿದ ಕೀರ್ತಿ ಮಹೋನ್ ಅಳ್ವರದಾಗಿದೆ ಎಂದರು.
ಅಳ್ವಾಸ್ ನುಡಿಸಿರಿಯ ಅರಂಭದಲ್ಲಿ ನವದುರ್ಗಿ ಭರತನಾಟ್ಯ ನೃತ್ಯದೊಂದಿಗೆ ಆರಂಭಗೊಂಡು ಅಂದ್ರದ ಜಾನಪದ ಬಂಜಾರ ನೃತ್ಯ,ಮಣಿಪುರಿ ಸ್ಟಿಕ್ ಡ್ಯಾನ್ಸ್,ಶಾಸ್ತ್ರೀಯ ನೃತ್ಯ,ಮಲ್ಲಕಂಬ ಮತ್ತು ರೋಪ್ ಕಸರತ್ತು.ಗುಜರಾತಿನ ಗಾರ್ಭ ಮತ್ತು ದಾಂಡಿಯಾ .ಮಣಿಪುರಿದೋಲ್ ಚಲಮ್,ಕಥಕ್ಕಳಿ,ನವಂರಂಗ್, ಪಶ್ಚಿಮಬಂಗಾಳದ ಪುರುಲಿಯಾ ಸಿಂಹನೃತ್ಯ ಸೇರಿದಂತೆ ವಂದೆಮಾತರಂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು ಅಳ್ವಾಸ್‌ನ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಮೂರು ಗಂಟೆಗಳ ಕಾಲ ಕಲಾಭಿಮಾನಿಗಳನ್ನು ಸಾಹಿತ್ಯಾಲೋಕಕ್ಕೆ ಕರೆದೊಯ್ದು ಮಂತ್ರಮುಗ್ದರನ್ನಾಗಿಸಿತು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಸ್ವಾಮಿರಾವ್,ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ನಮೂರ್ತಿ,ಗ್ರಾ.ಪಂ.ಅ.ಮಂಜುಳಕೇತಾರ್ಜಿರಾವ್,ಪದವಿ ಕಾಲೇಜ್ ಪ್ರಾಚಾರ್ಯ ಟಿ.ಚಂದ್ರಶೇಖರ್,ಪದವಿ ಪೂರ್ವಕಾಲೇಜ್ ಪ್ರಾಚಾರ್ಯ ಮಂಜುನಾಥ ಅಲೆಮನೆ,ಉಪಪ್ರಾಚಾರ್ಯ ಕೆಸಿನಮನೆ ನಾ.ರತ್ನಾಕರ್,ಕಲಾಕೌಸ್ತುಭ ಕನ್ನಡ ಸಂಘದ ಅದ್ಯಕ್ಷ ಆರ್.ವಿ.ನಿರೂಫ್‌ಕುಮಾರ್,ಅಳ್ವಾಸ್ ನುಡಿಸಿರಿ ವಿರಾಸತ್ ಘಟಕದ ಅಧ್ಯಕ್ಷ ಎನ್.ಸತೀಶ್,ರೋಟರಿ ಕ್ಲಬ್ ಅಧ್ಯಕ್ಷೆ ಪ್ರಮೀಳಾ ಎಂ.ಬಿ.ಲಕ್ಷö್ಮಣಗೌಡ, ಜಿ.ಎಸ್.ಬಿ.ಸಮಾಜ ಅಧ್ಯಕ್ಷ ಗಣೇಶ್‌ಕಾಮತ್,ಆರ್.ಟಿ.ಗೋಪಾಲ,ನಾಗರತ್ನ ದೇವರಾಜ್,ಪದ್ಮಸುರೇಶ್,ಲೀಲಾಶಂಕರ್,ಉಮಾಸುರೇಶ್,ರಾಜಶ್ರೀ ಕಾರಣಗಿರಿ,ಎಂ.ಬಿ.ಮಂಜುನಾಥ.ಸುರೇಶ್‌ಸಿಂಗ್,ಎನ್.ವರ್ತೇಶ್,
ಸುದೀಂದ್ರ ಪೂಜಾರಿ,ಪಿ.ಸುದೀರ್, ಮಂಜುನಾಥ ಕಾಮತ್,ಜೆ.ರಾಧಾಕೃಷ್ಣ,ಆಶ್ವಿನಿ,ಸೀತಾ,ಗೀತಾ.ಶೈಲಾ ಅರ್.ಪ್ರಭು,ಇನ್ನಿತರ ಹಲವರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ರಾಷ್ಟಮಟ್ಟದ ವಾಲಿಬಾಲ್ ಕ್ರೀಡಾಪಟು ವರುಣ್ ಅರ್.ಎಂ. ಹಾಗೂ ರಾಷ್ಟ್ರೀಯ ಯೋಗಪಟು ಕು.ಕಾವ್ಯ ಕೆ.ಎನ್,ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಧ್ಯಾ ಗಣೇಶ್ ಕಾಮತ್ ಪ್ರಾರ್ಥಿಸಿದರು,ಗಣೇಶ್ ಎನ್.ಕಾಮತ್ ಸ್ವಾಗತಿಸಿದರು, ಅಳ್ವಾಸ್ ನುಡಿಸಿರಿ ವಿರಾಸತ್ ಘಟಕದ ಅಧ್ಯಕ್ಷ ಎನ್.ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಳ್ವಾಸ್ ನುಡಿಸಿರಿಯ ವೀಡಿಯೋ ಇಲ್ಲಿ ವೀಕ್ಷಿಸಿ👇