ಶರಾವತಿ ಸಮಸ್ಯೆ ಬಗೆಹರಿಸಲು ಶ್ರಮಿಸದೆ ಪಾದಯಾತ್ರೆ ಹೊರಟಿರುವುದು ಬೇಸರದ ಸಂಗತಿ – ಬಸವರಾಜ್ ಬೊಮ್ಮಾಯಿ|CM

60 ವರ್ಷದ ಶರಾವತಿ ಮುಳುಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ನಾನು ಸಿದ್ದನಿದ್ದೇನೆ. ಆದರೆ ನನಗೆ ಬೇಸರವಾಗುತ್ತಿರುವುದೇನು ಎಂದರೆ ಒಂದೇ ವಿಷಯವನ್ನು ಎಷ್ಟು ವರ್ಷದವರೆಗೆ ಲಾಭ ಪಡೆಯುತ್ತೀರಿ ಎಂದು ಕಾಂಗ್ರೆಸ್ ಪಕ್ಷದ ಹೆಸರು ಉಲ್ಲೇಖಿಸದೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪರೋಕ್ಷ ಟಾಂಗ್ ನೀಡಿದರು.

ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನೆ ಮಾಡಿ ಕಚೇರಿಯ ಪಕ್ಕದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಮನವಿ ಸ್ವೀಕರಿಸಿ ಮಾತನಾಡಿ ನನಗೆ ತಿಳಿದಂತೆ 24 ಸಾವಿರ ಎಕರೆ ಭೂಮಿಯಲ್ಲಿ ಈ ಸಮಸ್ಯೆ ಇದ್ದು ಅದನ್ನು ಬಗೆಹರಿಸಲಾಗುವುದು ಎಂದು ಆಶ್ವಾಸನೆ ನೀಡಿದರು. ಅದರ ಜೊತೆಯಲ್ಲಿ 9 ಸಾವಿರ ಎಕರೆ ಭೂಮಿಯ ಸಮಸ್ಯೆಯನ್ನ ಬಗೆಹರಿಸಲು ನಾನು ಬದ್ಧನಾಗಿದ್ದೇನೆ. ಡಿಸೆಂಬರ್ ಅಂತ್ಯದ ವೇಳೆಗೆ ಅಥವಾ ಮೂರನೇ ವಾರದಲ್ಲಿ ಜಿಲ್ಲಾಧಿಕಾರಿಗೆ ವರದಿ ನೀಡಲು ಸೂಚಿಸಿದ್ದೇನೆ. ಹೈಕೋರ್ಟ್ ಆದೇಶದ ಪ್ರಕಾರ 9 ಸಾವಿರ ಎಕರೆ ಭೂಮಿಯ ಡಿ ನೋಟಿಫಿಕೇಷನ್ ಗೆ ಕೇಂದ್ರದ ಅನುಮತಿ ಪಡೆಯಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದರು. ಮಲೆನಾಡಿನ ಸಮಗ್ರ ಸಮಸ್ಯೆ ಬಗೆಹರಿಸಲು ಬಿಎಸ್ ವೈ ನನಗೆ ತಿಳಿಸಿದ್ದಾರೆ. ಬಿಎಸ್ ವೈ ಹೇಳಿದಂತೆ ಮಲೆನಾಡಿನ ಅರಣ್ಯ ರೈತರ ಸಮಸ್ಯೆ ಬಗೆಹರಿಸಲು ನಾನು ಬದ್ಧನಾಗಿದ್ದೇನೆ. ಆದರೆ 60 ವರ್ಷದ ವರೆಗೆ ಸಮಸ್ಯೆ ಬಗೆಹರಿಸಲು ಶ್ರಮಿಸದೆ ಪಾದಯಾತ್ರೆ ಹೊರಟಿರುವುದು ಬೇಸರದ ಸಂಗತಿ ಎಂದರು.

ಮಲೆನಾಡಿನ ಭಾಗದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುತ್ತೇನೆಂದು ಹೇಳಿಕೊಂಡು ಎಲ್ಲಿಯವರೆಗೆ ಲಾಭ ಪಡೆಯುತ್ತಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದರು.

ಅಡಿಕೆ ಬೆಳೆಗಾರರ ಜೊತೆ ಬಿಜೆಪಿ ಸರ್ಕಾರ ಇರಲಿದೆ – ಬಸವರಾಜ್ ಬೊಮ್ಮಾಯಿ


ತೀರ್ಥಹಳ್ಳಿ : ಎಲೆಚುಕ್ಕಿ ರೋಗ ಹಿನ್ನಲೆಯಲ್ಲಿ ಅಡಿಕೆ ತೋಟಗಳ ಸಮಗ್ರ ನಿರ್ವಹಣೆ ಬಗ್ಗೆ ವರದಿಯನ್ನು ಈಗಾಗಲೇ ಕೇಳಿದ್ದೇನೆ. ವರದಿ ಬಂದ ನಂತರದಲ್ಲಿ ಸರ್ಕಾರ ಏನು ಮಾಡಬೇಕು ಎಂದು ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ತಾಲೂಕಿನ ಕೈಮರ ವ್ಯಾಪ್ತಿಗೆ ಭೇಟಿ ನೀಡಿ ಎಲೆಚುಕ್ಕಿ ರೋಗದ ಬಗ್ಗೆ ಪರಿಶೀಲನೆ ನಡೆಸಿದರು. 42 ಸಾವಿರ ಹೆಕ್ಟೇರ್ ಜಮೀನು ಎಲೆಚುಕ್ಕಿ ರೋಗಕ್ಕೆ ಬಾಧೆಯಾಗಿದೆ. ಸಮಗ್ರ ನಿರ್ವಾಹಣೆಯ ನಂತರ ಪರಿಹಾರ ನೀಡಲು ವರದಿ ಬಂದ ಮೇಲೆ ಪರಿಹಾರ ನೀಡಲಾಗುವುದರ ಬಗ್ಗೆ ಚಿಂತನೆ ನಡೆಸಲಾಗಿದೆ. ಎಲೆಚುಕ್ಕಿ ರೋಗಕ್ಕೆ ಲಸಿಕೆ ನೀಡಲಾಗುತ್ತದೆ. ಅರಣ್ಯ ಒತ್ತುವರಿಯ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತದೆ. ಅಡಿಕೆ ಬೆಳೆಗಾರರ ಜೊತೆ ಬಿಜೆಪಿ ಸರ್ಕಾರ ಯಾವಾಗಲೂ ನಿಲ್ಲಲಿದೆ ಎಂದರು.

ಜ್ಞಾನೇಂದ್ರ ಅವರಿಗೆ ಜ್ಞಾನನು ಇದೆ ಇಂದ್ರನ ಶಕ್ತಿಯು ಇದೆ – ಬಸವರಾಜ್ ಬೊಮ್ಮಾಯಿ 


ತೀರ್ಥಹಳ್ಳಿ:  ಗೃಹಸಚಿವರು ಹಾಗೂ ತೀರ್ಥಹಳ್ಳಿ ಕ್ಷೇತ್ರದ ಶಾಸಕರು ಆಗಿರುವ ಆರಗ ಜ್ಞಾನೇಂದ್ರ ಅವರಿಗೆ ಜ್ಞಾನನು ಇದೆ ಇಂದ್ರನ ಶಕ್ತಿಯು ಇದೆ. ಹೀಗಾಗಿ ಅವರು ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಅಭಿವೃದ್ಧಿಗೆ  ಗೃಹ ಸಚಿವರು ಎಂದೂ ಹಿಂದೇಟು ಹಾಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೊಮ್ಮಾಯಿ ಹೇಳಿದರು.

ತೀರ್ಥಹಳ್ಳಿ ಕ್ಷೇತ್ರದಲ್ಲಿ 618 ಕೋಟಿ ರೂ ಮೊತ್ತದ ಶಿಲನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಇಷ್ಟೊಂದು ಸಂಖ್ಯೆಯಲ್ಲಿ ಜನರು ಬಂದು ಆಶೀರ್ವಾದ ಮಾಡಿದ್ದೀರಾ.  ಅಭಿವೃದ್ಧಿಗೆ ಜನಮನ್ನಣೆ ಕೊಡ್ತಾರೆ ಎನ್ನುವುದಕ್ಕೆ ಇದೆ ಸಾಕ್ಷಿ. ಆರಗ ಜ್ಞಾನೇಂದ್ರ ಸಮರ್ಥವಾದ ಆಡಳಿತ ನೀಡಿದ್ದಾರೆ. ಇನ್ನು ಮುಂದೆಯೂ ನೀಡುತ್ತಾರೆ ಎಂದರು.

ನಮ್ಮ ಸರ್ಕಾರ ಮಂಜೂರಾತಿ ಕೊಟ್ಟು ಎಲ್ಲಾ ಕ್ರಮ ಕೈಗೊಂಡು ಈ ಸಮಾರಂಭ ಮಾಡಿದ್ದೇವೆ. ಬರಿ ಕುಡಿಯುವ ನೀರಿಗೆ 400 ಕೋಟಿ ಗೂ ಅಧಿಕ ಮೊತ್ತ ಬಂದಿದೆ. ಮೋದಿಯವರ ಕನಸು ಎಲ್ಲರೂ ಶುದ್ಧ ಕುಡಿಯುವ ನೀರು ಕುಡಿಯಬೇಕು ಎನ್ನುವುದು. ಇಡೀ ತೀರ್ಥಹಳ್ಳಿಯ ತಾಲೂಕಿನ  ಮನೆ ಮನೆಗೆ ಕುಡಿಯುವ ನೀರು ಯೋಜನೆ ನೀಡಲಾಗಿದೆ.  ಬರಿ 1 ವರ್ಷದಲ್ಲಿ 30 ಲಕ್ಷ ಮನೆಗಳಿಗೆ ನೀರು ಕೊಟ್ಟಿದೆ. ಇದು ನಮ್ಮ ಡಬಲ್ ಇಂಜಿನ್ ಸರ್ಕಾರದ ಸಾಧನೆ ಎಂದರು.

ಮಲೆನಾಡಿನ ಕೆಲವು ಸಮಸ್ಯೆ ಬಗೆ ಹರಿಸುವ ಸಲುವಾಗಿ ಹಲವು ಹೋರಾಟ ಈಗಾಗಲೇ ಆಗಿದೆ. ರೈತರ ಪರವಾಗಿ ಬಿ ಎಸ್ ವೈ ನೀರಾವರಿ ಹೋರಾಟ ಮಾಡಿದ್ದಾರೆ. ಬಿಎಸ್ ವೈ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ. ರೈತರಿಗಾಗಿ ಹೋರಾಟ ಮಾಡಿದ ನಾಯಕ ಅಂತ ಇದ್ರೆ ಅದು ಯಡಿಯೂರಪ್ಪ ಮಾತ್ರ.

ಶರಾವತಿ ಸಮಸ್ಯೆ ಹಿಂದಿನ ಸರ್ಕಾರ ಕೆಲವು ತಪ್ಪುಗಳನ್ನು ಮಾಡಿದ್ದ ಪರಿಣಾಮ ಈ ರೀತಿ ಆಗಿದೆ ನಮ್ಮ ಕಾಲದಲ್ಲಿ ಹಕ್ಕು ಪತ್ರ ವಿತರಣೆ ಆಗಬೇಕು ಎಂದಿದ್ದಾರೆ ಅದನ್ನು ಬಗೆ ಹರಿಸುತ್ತೇವೆ. ಶರಾವತಿ ಸಂತ್ರಸ್ತರಿಗೆ  ಹಕ್ಕು ಪತ್ರ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. 60 ವರ್ಷದ ಸಂತ್ರಸ್ತರ ಈ ಸಮಸ್ಯೆಗೆ ಡಿಸೆಂಬರ್ ಒಳಗೆ ಕೇಂದ್ರ ಸರ್ಕಾರದ ಅನುಮತಿ ಪಡೆದು ಸಂತ್ರಸ್ತರಿಗೆ ಪರಿಹಾರ ಮಾಡಿಕೊಡುತ್ತೇವೆ.
ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ರಾಜಕೀಯವಾಗಿ ಬಳಕೆ ಮಾಡಲಾಗುತ್ತಿದೆ.ಇದು ಖಂಡನೀಯ. ಸಂತ್ರಸ್ತರ ಸಮಸ್ಯೆ ಯಾಕೇ ಇಷ್ಟು ವರ್ಷ ಕಾಂಗ್ರೆಸ್ ಬಗೆಹರಿಸಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರ ಬಗ್ಗೆ ಇವರಿಗೆ ಚಿಂತೆ ಇಲ್ಲ.ಅವರ ಮುಳುಗಡೆಯತ್ತ ಕಾಂಗ್ರೆಸ್ ನಾಯಕರಿಗೆ ಚಿಂತೆ . ಅವರ ಮುಳುಗಡೆ ಬಗ್ಗೆ ರಾಜಕೀಯ ಮಾಡ್ತಿದ್ದಾರೆ ಎಂದರು.


ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತನಾಡಿ ನಾನು ಈಗಾಗಲೇ ಹಲವು ಬಾರಿ ತೀರ್ಥಹಳ್ಳಿಗೆ ಬಂದಿದ್ದರು ತೀರ್ಥಹಳ್ಳಿಯಲ್ಲಿ ಇದೆ ಮೊದಲ ಬಾರಿ ಇಷ್ಟೊಂದು ಜನರನ್ನು ನೋಡುತ್ತಿದ್ದೇನೆ. ಕುವೆಂಪು ಜನ್ಮಸ್ಥಳದಲ್ಲಿ ಬಿಜೆಪಿ  ಕಾರ್ಯಕ್ರಮ ನಡೆಯುತ್ತಿದೆ. ಸಿಎಂ ಆಗಲು ಕಾಂಗ್ರೆಸ್ ನವರು ಹಗಲು ಕನಸು ಕಾಣುತ್ತಿದ್ದಾರೆ.
ರಾಜ್ಯದಲ್ಲಿ ಯಾರೇ ಏನೇ ಹೇಳಿದರು ಸರಿ ಬಿಜೆಪಿ ಸರ್ಕಾರ ಬರುವುದು ನಿಶ್ಚಿತ. ಚುನಾವಣೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಸೇರಿದಂತೆ ಹಲವು ಕೇಂದ್ರ ಸಚಿವರು ಕರ್ನಾಟಕದ ಎಲ್ಲಾ ಕಡೆ ಪ್ರಚಾರ ಮಾಡಲು ಬರುತ್ತಾರೆ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭಕ್ಕೆ ನರೇಂದ್ರ ಮೋದಿಯವರು ಆಗಮಿಸಲಿದ್ದಾರೆ. ಇಂದು ಸಮಾವೇಶಕ್ಕೆ ಬಂದಿರುವ ಎಲ್ಲರೂ 10 ಮತವನ್ನು ಹಾಕಿಸಿದ್ದೆ ಆದರೆ ಮುಂದಿನ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ ಅವರು 45 ಸಾವಿರ ಮತದ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದರು

ಆರಗ ಜ್ಞಾನೇಂದ್ರ ಮಾತನಾಡಿ ತಾಲೂಕಿನ ಜನರು ನನ್ನನ್ನು 22 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದೀರಿ. ನಾಲ್ಕನೆ ಬಾರಿಗೆ ಶಾಸನ ಸಭೆಗೆ ಕಳುಹಿಸಿದ್ದೀರಿ. ಈ ಕಾರಣಕ್ಕೆ ಜನರ ಋಣವನ್ನು ತೀರಿಸಲು ಸಾಕಷ್ಟು ಅನುದಾನ ಕ್ಷೇತ್ರಕ್ಕೆ ತಂದಿದ್ದೇನೆ. 564 ಕೋಟಿ ರೂ. ಹಣ ಮಂಜೂರಾಗಿ ತೀರ್ಥಹಳ್ಳಿ ಕ್ಷೇತ್ರಕ್ಕೆ ಬಂದಿದೆ ‌. ಪಟ್ಟಣದ ಕಾಲೇಜು ಆವರಣದಲ್ಲಿ 618 ಕೋಟಿ ರೂ ಗಳ ಶಿಲನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಡವರ ಮಕ್ಕಳಿಗೆ ಶಿಕ್ಷಣ ಸಿಗಲು ಬಾಳೆಬೈಲಿನಲ್ಲಿ ಕಾಲೇಜು ಮಂಜೂರು ಮಾಡಿಸಿದ್ದು 24 ಕೊಠಡಿ 10.5 ಲಕ್ಷ ರೂ.ಗಳಲ್ಲಿ 1800 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಹೊಸ ಕಟ್ಟಡವನ್ನು ಕಟ್ಟಿಸಲಾಗಿದೆ. ಅಡಿಕೆಗೆ ನಮ್ಮ ಸರ್ಕಾರ ರಕ್ಷಣೆ ಕೊಟ್ಟಿದೆ. ಎಲೆಚುಕ್ಕಿ ರೋಗದ ಬಗ್ಗೆ ಇಂದು ಸಿಎಂ ಅಡಿಕೆ ತೋಟವನ್ನು ವೀಕ್ಷಣೆ ಮಾಡಿದ್ದಾರೆ‌. ಎಲೆಚುಕ್ಕಿ ರೋಗಕ್ಕೆ ಕಾಲ್ನಡಿಗೆ ಜಾಥಾ ಒಂದೇ ಔಷಧಿಯಲ್ಲ. ಇಂತಹ ಪೊಳ್ಳು ಹೋರಾಟದಿಂದ ಏನು ಆಗಲ್ಲ. ಎಲೆ ಚುಕ್ಕೆ ರೋಗಕ್ಕೆ 10 ಕೋಟಿ ರೂ. ಬಿಡುಗಡೆಯಾಗಿದೆ. ಯಾರು ಭಯಪಡುವ ಅಗತ್ಯವಿಲ್ಲ ಎಂದರು.

ಅಂಗನವಾಡಿ ಆಶಾ ಕಾರ್ಯಕರ್ತೆಯರು ಬಂದಿದ್ದೀರಿ‌‌‌. ಕೋವಿಡ್ ಸಂಧರ್ಭದಲ್ಲಿ ನಿಮ್ಮ ಕೊಡುಗೆ ಅಪಾರ. ಸಾವಿರಾರು ಸಂಖ್ಯೆಯಲ್ಲಿ ಈ ಸಭೆಗೆ ಆಗಮಿಸಿದ್ದೀರಿ. ನಿಮಗೆ ಅಭಾರಿಯಾಗಿದ್ದೇನೆ‌. ಶರಾವತಿ ಮುಳುಗಡೆ ಸಂತ್ರಸ್ತರಿಗೆ ನಮ್ಮ ಸರ್ಕಾರದ ಬದ್ಧವಾಗಿದೆ‌. 60 ವರ್ಷದ ಸಮಸ್ಯೆಗೆ ಸದ್ಯದಲ್ಲೇ ಪರಿಹಾರ ಸಿಗುತ್ತದೆ. ಎಂದರು.


ಇದಕ್ಕೂ ಮೊದಲು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ 618 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ, ಶಿಲಾನ್ಯಾಸವು ನಗರದ ಸಾರ್ವಜನಿಕ ಕ್ರೀಡಾಂಗಣದಲ್ಲಿ ನೆಡೆಯಿತು. ವಿವಿಧ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದರು. ವಿಶೇಷವಾಗಿ ಹಿಂಗಾರ ಬಿಡಿಸುವುದರ ಮೂಲಕ ಚಾಲನೆ ನೀಡಿದರು.

ಸಮಾರಂಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಗೋವಿಂದ ಕಾರಜೋಳ, ಭೈರತಿ ಬಸವರಾಜ್, ಡಾ.ಕೆ.ಸಿ.ನಾರಾಯಣಗೌಡ, ಸಂಸದ ಬಿ.ವೈ.ರಾಘವೇಂದ್ರ, ಬಿ ವೈ ವಿಜಯೇಂದ್ರ,ಹರತಾಳು ಹಾಲಪ್ಪ ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.



ವರದಿ : ಅಕ್ಷಯ್ ಕುಮಾರ್

Leave a Reply

Your email address will not be published. Required fields are marked *