POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಹೊಂಬುಜದಲ್ಲಿ ರಥಯಾತ್ರಾ ಮಹೋತ್ಸವ: ಸಾಂಪ್ರದಾಯಿಕ ಸಿಂಹವಾಹನೋತ್ಸವ, ಧಾರ್ಮಿಕ ವಿಧಿಗಳು ವೈಭವ

IMG20260309134254

The annual Rathayatra Mahotsava at Atishaya Sri Kshetra Hombuja was celebrated with traditional religious rituals, Abhisheka, Kalikunda Yantraradhane and the grand Simhavahana Utsava in the divine presence of Jagadguru Swastishri Dr. Devendrakirti Bhattaraka Pattacharyavarya Mahaswamiji.

ಹೊಂಬುಜದಲ್ಲಿ ರಥಯಾತ್ರಾ ಮಹೋತ್ಸವ: ಸಾಂಪ್ರದಾಯಿಕ ಸಿಂಹವಾಹನೋತ್ಸವ, ಧಾರ್ಮಿಕ ವಿಧಿಗಳು ವೈಭವ

ಹೊಂಬುಜ (ಮಾ.10): ಪ್ರಾಚೀನ ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ನಡೆಯುತ್ತಿರುವ ವಾರ್ಷಿಕ ರಥಯಾತ್ರಾ ಮಹೋತ್ಸವದ ದ್ವಿತೀಯ ದಿನದ ಅಂಗವಾಗಿ ಜಿನಾಗಮೋಕ್ತ ವಿಧಿ–ವಿಧಾನಗಳು ಸಾಂಪ್ರದಾಯಿಕವಾಗಿ ನೆರವೇರಿದವು.

ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಹಾಗೂ ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಿತ್ಯವಿಧಿಗಳೊಂದಿಗೆ ಅಭಿಷೇಕ ಹಾಗೂ ಕಲಿಕುಂಡ ಯಂತ್ರಾರಾಧನೆ ನೆರವೇರಿತು.

ಶ್ರೀನೇಮಿನಾಥ ಸ್ವಾಮಿ, ಶ್ರೀಆದಿನಾಥ ಸ್ವಾಮಿ, ಶ್ರೀಮಹಾವೀರ ಸ್ವಾಮಿ, ಶ್ರೀಕೂಷ್ಮಾಂಡಿನಿ ದೇವಿ, ಶ್ರೀಸರಸ್ವತಿ ದೇವಿ, ಶ್ರೀಕ್ಷೇತ್ರಪಾಲ ಹಾಗೂ ಶ್ರೀ ನಾಗಸನ್ನಿಧಿಗಳಲ್ಲಿ ವಿಶೇಷ ಅಲಂಕಾರ ಪೂಜೆಗಳು ಜರುಗಿದವು. ಈ ವೇಳೆ ಊರು–ಪರೂರುಗಳಿಂದ ಆಗಮಿಸಿದ ಭಕ್ತರು ಭಕ್ತಿಭಾವದಿಂದ ಭಾಗವಹಿಸಿದರು.


ಪ್ರಾತಃಕಾಲ ಕುಮುದ್ವತಿ ತೀರ್ಥದಿಂದ ಜಲವನ್ನು ರಜತ ಕಲಶದಲ್ಲಿ ಐಶ್ವರ್ಯ ಗಜರಾಣಿ ಮೇಲೆ ಅಲಂಕರಿಸಿ ವಾದ್ಯಗೋಷ್ಠಿಯೊಂದಿಗೆ ಶ್ರೀಕ್ಷೇತ್ರಕ್ಕೆ ತರಲಾಯಿತು.

ಈ ಮೆರವಣಿಗೆಯಲ್ಲಿ ಶ್ರೀ ಕುಂದಕುಂದ ಗುರುಕುಲ ವಿದ್ಯಾರ್ಥಿಗಳು ಹಾಗೂ ಹುಂಚ ಜೈನ ಸಮಾಜದ ಭಕ್ತರು ಭಾಗವಹಿಸಿದರು.

ಸಂಜೆ ವೇಳೆ ಸನ್ನಿಧಿಯಲ್ಲಿ ವಿವಿಧ ಉತ್ಸವಗಳು ನಡೆದಿದ್ದು, ರಾತ್ರಿ ಸಾಂಪ್ರದಾಯಿಕ ಸಿಂಹವಾಹನೋತ್ಸವವು ವೈಭವದಿಂದ ನೆರವೇರಿತು. ಪೂಜಾ ಹಾಗೂ ಭೋಜನ ಸೇವೆಯನ್ನು ತೀನ್‌ಸುಕಿಯಾ (ಅಸ್ಸಾಂ) ಮೂಲದ ಮೀನಾದೇವಿ ರಾರಾ ಹಾಗೂ ಪವನ್‌ಕುಮಾರ್ ರಾರಾ ಸಹೋದರರು ಸಮರ್ಪಿಸಿದರು.

ಪುರೋಹಿತರಾದ ಶ್ರೀ ಪದ್ಮರಾಜ ಇಂದ್ರ ಹಾಗೂ ಸಹಪುರೋಹಿತರು ಪೂಜಾ ವಿಧಿಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ವಿದ್ಯುತ್ ದೀಪಾಲಂಕಾರಗಳಿಂದ ಮೆರೆಯುತ್ತಿದ್ದ ಶ್ರೀಕ್ಷೇತ್ರವು ಭಕ್ತರ ಕಣ್ಮನ ಸೆಳೆಯಿತು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.