Headlines

ಶರಾವತಿ ಸಮಸ್ಯೆ ಬಗೆಹರಿಸಲು ಶ್ರಮಿಸದೆ ಪಾದಯಾತ್ರೆ ಹೊರಟಿರುವುದು ಬೇಸರದ ಸಂಗತಿ – ಬಸವರಾಜ್ ಬೊಮ್ಮಾಯಿ|CM

60 ವರ್ಷದ ಶರಾವತಿ ಮುಳುಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ನಾನು ಸಿದ್ದನಿದ್ದೇನೆ. ಆದರೆ ನನಗೆ ಬೇಸರವಾಗುತ್ತಿರುವುದೇನು ಎಂದರೆ ಒಂದೇ ವಿಷಯವನ್ನು ಎಷ್ಟು ವರ್ಷದವರೆಗೆ ಲಾಭ ಪಡೆಯುತ್ತೀರಿ ಎಂದು ಕಾಂಗ್ರೆಸ್ ಪಕ್ಷದ ಹೆಸರು ಉಲ್ಲೇಖಿಸದೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪರೋಕ್ಷ ಟಾಂಗ್ ನೀಡಿದರು. ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನೆ ಮಾಡಿ ಕಚೇರಿಯ ಪಕ್ಕದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಮನವಿ ಸ್ವೀಕರಿಸಿ ಮಾತನಾಡಿ ನನಗೆ ತಿಳಿದಂತೆ 24 ಸಾವಿರ ಎಕರೆ ಭೂಮಿಯಲ್ಲಿ ಈ…

Read More

ರಿಪ್ಪನ್‌ಪೇಟೆ : ಕಲಾ ಕೌಸ್ತುಭ ಕನ್ನಡ ಸಂಘದ ವತಿಯಿಂದ ಸಾವಿರಾರು ಹೆರಿಗೆ ಮಾಡಿಸಿರುವ ಸೂಲಗಿತ್ತಿ ಜಯಮ್ಮ ರವರಿಗೆ ಸನ್ಮಾನ|Ripponpet

ರಿಪ್ಪನ್‌ಪೇಟೆ : ಇಲ್ಲಿನ ಕಲಾ ಕೌಸ್ತುಭ ಕನ್ನಡ ಸಂಘ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಾವಿರಾರು ಹೆರಿಗೆ ಮಾಡಿಸುವ ಮೂಲಕ ಮಲೆನಾಡಿನಲ್ಲಿ ಮನೆಮಾತಾಗಿರುವ ಸೂಲಗಿತ್ತಿ ಜಯಮ್ಮ ರವರಿಗೆಸನ್ಮಾನಿಸಿ ಗೌರವಿಸಲಾಯಿತು. ಶನಿವಾರ ಸಂಜೆ ಪಟ್ಟಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಹಲವಾರು ವರ್ಷಗಳಿಂದ ಸೂಲಗಿತ್ತಿ ಸೇವೆ ಮಾಡಿಕೊಂಡು ಎಲೆಮರೆ ಕಾಯಿಯಂತೆ ಕಾರ್ಯ ನಿರ್ವಹಿಸುತಿದ್ದ ಜಯಮ್ಮ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಜಯಲಕ್ಷ್ಮಿ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಹೊಸನಗರ ರಸ್ತೆಯ ಶ್ರೀರಾಮನಗರದ ನಿವಾಸಿ….

Read More

ರಿಪ್ಪನ್‌ಪೇಟೆಯಲ್ಲಿ ಇಂದು ಆಳ್ವಾಸ್ ನುಡಿಸಿರಿ ಹಬ್ಬ – ಭರದ ಸಿದ್ದತೆ : 15 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ|Ripponpet

ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಇಂದು ಆಳ್ವಾಸ್ ನುಡಿಸಿರಿ ಹಬ್ಬ ಆಯೋಜಿಸಲಾಗಿದೆ.ಈ ಕಾರ್ಯಕ್ರಮಕ್ಕೆ ಅಂದಾಜು 15 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ.ಕಾರ್ಯಕ್ರಮದ ಸಿದ್ದತೆ ಭರದಿಂದ ಸಾಗಿದೆ. ಇಂದು ಸಂಜೆ ಸರಿಯಾಗಿ 5 ಗಂಟೆಗೆ ಪಟ್ಟಣದ ಸಾಗರ ರಸ್ತೆಯ ಚಿನ್ನೆಗೌಡ ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಆಳ್ವಾಸ್ ಸಾಂಸ್ಕೃತಿಕ ಪ್ರದರ್ಶನದಲ್ಲಿ ಆಂಧ್ರದ ಜನಪದ, ಬಂಜಾರ ನೃತ್ಯ, ಮಣಿಪುರಿ ಸ್ಟಿಕ್‌ಡ್ಯಾನ್ಸ್, ಶಾಸ್ತ್ರೀಯ ನೃತ್ಯ, ನವದುರ್ಗೆ, ಮಲ್ಲಕಂಬ ಮತ್ತು ರೋಪ್ ಕಸರತ್ತು, ಗುಜರಾತಿನ ಗಾರ್ಭ ಮತ್ತು ದಾಂಡಿಯಾ, ಮಣಿಪುರಿ ಧೋಲ್…

Read More

ಬಟ್ಟೆಮಲ್ಲಪ್ಪ ಸರ್ಕಲ್ ಗೆ ಬಂಗಾರಪ್ಪ ಸರ್ಕಲ್ ಎಂದು ನಾಮಕರಣ – ರಿಪ್ಪನ್‌ಪೇಟೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಆಟೊಗಳಿಗೆ ಉಚಿತ ಟಾಪ್ ವಿತರಣೆ|AAP

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಗ್ರಾಮದ ಸರ್ಕಲ್ ಗೆ ನೂತನವಾಗಿ ಬಂಗಾರಪ್ಪ ಸರ್ಕಲ್ ಎಂದು ಅಧಿಕೃತವಾಗಿ ನಾಮಕರಣ ಮಾಡಲಾಯಿತು. ಹೊಸನಗರ ತಾಲೂಕ್ ಆಮ್ ಆದ್ಮಿ ಪಕ್ಷ ಘಟಕದ ವತಿಯಿಂದ ನೂತನ ಬಂಗಾರಪ್ಪ ಸರ್ಕಲ್ ಉದ್ಘಾಟಿಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ತಾಲೂಕ್ ಅಧ್ಯಕ್ಷ ಗಣೇಶ್ ಸೂಗೋಡು ಈ ದೇಶ ಕಂಡ ಅತ್ಯುತ್ತಮ ಮುಖ್ಯಮಂತ್ರಿ ಹಾಗೂ ಬಡವರ ಪಾಲಿನ ಆಶಾಕಿರಣವಾಗಿದ್ದ ದಿ|| ಬಂಗಾರಪ್ಪ ರವರ ಹೆಸರನ್ನು ಬಟ್ಟೆಮಲ್ಲಪ್ಪ ಸರ್ಕಲ್ ಗೆ ನಾಮಕರಣ ಮಾಡುವ ಮೂಲಕ…

Read More

ಕನ್ನಡ ಕಟ್ಟುವ ಕೆಲಸ ಎಲ್ಲಾರಿಂದಲೂ ಆಗಬೇಕು : ಹರತಾಳು ಹಾಲಪ್ಪ – ಗಣೇಶೋತ್ಸವದಲ್ಲಿ ಇರುವ ಐಕ್ಯತೆ ಕನ್ನಡ ಹಬ್ಬದಲ್ಲಿ ಯಾಕಿಲ್ಲ – ಕೆ ಎಸ್ ಪ್ರಶಾಂತ್|Ripponpet

ರಿಪ್ಪನ್‌ಪೇಟೆ : ಕನ್ನಡ ನಾಡು ನುಡಿ ಜಲ ಸಂಸ್ಕ್ರತಿಯನ್ನು ನಾಡಿನ ಪ್ರತಿಯೊಬ್ಬರು ಪ್ರೀತಿಸಿ ಬೆಳೆಸಿದಾಗ ಕನ್ನಡ ಭಾಷೆ ವಿಶ್ವ ಮಟ್ಟದಲ್ಲಿ ತೆರೆದುಕೊಳ್ಳುತ್ತದೆ. ಕನ್ನಡ ಕಟ್ಟುವ ಕೆಲಸ ಎಲ್ಲಾರಿಂದಲೂ ಆಗಬೇಕು ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ಇಂದು ಪಟ್ಟಣದ ಭೂಫಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಕಲಾ ಕೌಸ್ತುಭ ಕನ್ನಡ ಸಂಘ ಆಯೋಜಿಸಿದ್ದ 67ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ಕನ್ನಡಿಗರು ನಾಡು…

Read More

ಚಾಲಕನ ನಿಯಂತ್ರಣ ತಪ್ಪಿ ಶರಾವತಿ ಹಿನ್ನೀರಿಗೆ ಇಳಿದ ಬಸ್ – ತಪ್ಪಿದ ಭಾರಿ ಅನಾಹುತ|sigandur

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ  ಹೊಳೆಬಾಗಿಲು ಸಮೀಪ ಶರಾವತಿ  ಹಿನ್ನೀರಿನಲ್ಲಿ ಹಿಂದಕ್ಕೆ ತೆಗೆದುಕೊಳ್ಳುವ ವೇಳೆ ನಿಯಂತ್ರಣ ತಪ್ಪಿದ ಬಸ್ ನೀರಿಗೆ ಜಾರಿದ್ದು, ಸ್ವಲ್ಪದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ಹೊಳಬಾಗಿಲಿನಲ್ಲಿ ಇಂದು ಘಟನೆ ನಡೆದಿದ್ದು, ಗಜಾನನ ಬಸ್ ರಿವರ್ಸ್ ಸಾಗರದಿಂದ ಕಟ್ಟಿನಕಾರುಗೆ ತೆರಳುತ್ತಿತ್ತು. ಲಾಂಚ್ ನಿಲ್ಲಿಸುವ ಸ್ಥಳದಲ್ಲಿ ರಿವರ್ಸ್ ತೆಗೆದುಕೊಳ್ಳುವ ವೇಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ನೀರಿಗೆ ಇಳಿದಿದೆ. ಇದರಿಂದ ಬಸ್’ನಲ್ಲಿದ್ದ ಜನರು ಕೂಗಿಕೊಂಡಿದ್ದರಿಂದ ಎಚ್ಚೆತ್ತ ಚಾಲಕ ಮೇಲಕ್ಕೆ ಚಲಿಸಲು ಯತ್ನಿಸಿದ್ದಾನೆ. ತತಕ್ಷಣವೇ ಎಚ್ಚೆತ್ತ ಸ್ಥಳೀಯರೂ ಸೇತುವೆ ಕಾಮಗಾರಿಗಾಗಿ…

Read More

ಕಾಡುಕೋಣಗಳ ದಾಳಿಗೆ ಕೈಗೆ ಬಂದ ಫಸಲು ಪ್ರಾಣಿಗಳ ಪಾಲು – ರೈತರ ಆಂತಕ|wild corner

ರಿಪ್ಪನ್‌ಪೇಟೆ : ಆರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ದಿಡೀರ್ ಪ್ರತ್ಯಕ್ಷವಾದ ಕಾಡುಕೋಣಗಳಿಂದಾಗಿ ರೈತರ ಭತ್ತದ ಗದ್ದೆ ಮತ್ತು ಅಡಿಕೆ ಬಾಳೆ ಕಾಡುಪ್ರಾಣಿಗಳ ಪಾಲಾಗುವಂತಾಗಿದ್ದು ರೈತರು ಅಂತಕಕ್ಕೆ ಕಾರಣವಾಗಿದೆ. ಮಳೆಗಾಲದಲ್ಲಿ ನಾಟಿ ಮಾಡಲಾದ ಭತ್ತದ ಫಸಲು ಕಟಾವಿಗೆ ಬಂದಿದ್ದು ರಾತ್ರಿ ಹೊತ್ತಿನಲ್ಲಿ ಕಾಡುಕೋಣ ಜಮೀನಿಗೆ ನುಗ್ಗಿ ಕಟಾವು ಮಾಡಲಾದ ಭತ್ತ ಭೂಮಿ ತಾಯಿಯ ಪಾಲಾಗುವಂತಾಗಿದೆ.ಅಲ್ಲದೆ ಆಡಿಕೆ ಗಿಡಗಳನ್ನು ಮುರಿದು ಹಾಕಿ ಬಾಳೆ ಸಹ ಕೈಗೆ ಸೀಗದಂತಾಗಿ ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಇAದು…

Read More

ರೈಲು ಹರಿದು ವ್ಯಕ್ತಿಯ ಕಾಲು ಮುರಿತ – ಗಾಯಾಳು ಮೆಗ್ಗಾನ್ ಗೆ ದಾಖಲು|TRAIN

ಶಿವಮೊಗ್ಗ : ನಗರದ ಉಷಾ ನರ್ಸಿಂಗ್ ಹೋಂ ಬಳಿಯ ಸವಳಂಗ ರಸ್ತೆ ರೈಲ್ವೆಗೇಟ್ ಬಳಿ ವ್ಯಕ್ತಿಯೋರ್ವನ ಮೇಲೆ ರೈಲು ಹರಿದು ಕಾಲು ತುಂಡಾಗಿರುವ ಘಟನೆ ರಾತ್ರಿ ನಡೆದಿದೆ. ರೈಲ್ವೆ ಓವರ್ ಬ್ರಿಡ್ಜ್ ಕಾಮಗಾರಿ ನಡೆಸುತ್ತಿದ್ದ ಸದ್ಪತಿ ಪಂಜಿ ಎಂಬ ಸುಮಾರು 30 ವರ್ಷದ ವ್ಯಕ್ತಿಯ ಮೇಲೆ ತಾಳಗುಪ್ಪ-ಬೆಂಗಳೂರು(1628) ರೈಲು ಹರಿದುಹೋಗಿದೆ. ಸ್ಥಳೀಯರ ಪ್ರಕಾರ ಆತ ಕುಡಿದು ರೈಲ್ವೆ ಟ್ರ್ಯಾಕ್ ಬಳಿ ಮಲಗಿದ್ದ ಕಾರಣ ವ್ಯಕ್ತಿಯ ಕಾಲಿನ ಮೇಲೆ ರೈಲು ಹರಿದಿದೆ ಎಂದು ತಿಳಿಸಿದ್ದಾರೆ. ರೈಲ್ವೆ ಪೊಲೀಸ್ ಮಾಹಿತಿ…

Read More

ಆತ್ಮೀಯ ಎಸ್ ಪಿ ಸರ್…. ನನಗೆ ಮದುವೆಯಾಗಲು ಹುಡುಗಿ ಹುಡುಕಿಕೊಡಿ – ಯುವಕನೊಬ್ಬ ಶಿವಮೊಗ್ಗದ ಎಸ್ ಪಿ ಗೆ ಬರೆದ ಪತ್ರ ವೈರಲ್|SP

ಜೀವನದಲ್ಲಿ ಮದುವೆ ಎನ್ನುವುದು ಒಂದು ಅತ್ಯಮೂಲ್ಯ ಘಟ್ಟ,ಸಾಮಾನ್ಯವಾಗಿ ವಧು ಬೇಕಾದರೆ ಮದುವೆ ಬ್ರೋಕರ್ ಬಳಿಯೋ, ಶಾದಿ ಡಾಟ್ ಕಾಂ  ಅಥವಾ ಮಾಧ್ಯಮಗಳಲ್ಲಿ ಜಾಹೀರಾತು ಕೊಡಬಹುದು,ಇನ್ನೂ ಮುಂದುವರೆದು ವಧೂವರರ ಸಮಾವೇಶಗಳಿಗೆ ಹೋಗಬಹುದು. ಆದರೆ ಇಲ್ಲೊಬ್ಬ ಭೂಪ ಶಿವಮೊಗ್ಗದ ಜಿಲ್ಲಾ ರಕ್ಷಣಾಧಿಕಾರಿ(SP)ಗೆ ಪತ್ರವನ್ನು ಬರೆದು ವಧು ಹುಡುಕಿ ಕೊಡಿ ಎಂದು ಮನವಿ ಮಾಡಿದ್ದಾರೆ. ಅದೂ ಗೊಲ್ಲ ಜಾತಿಯ ಹುಡುಗಿಯೇ ಬೇಕೆಂದು ಕೂಡ ಕಂಡಿಷನ್‌ ಕೂಡ ಹಾಕಿದ್ದಾನೆ. ನ.10 ರಂದು ಭದ್ರಾವತಿ ನಿವಾಸಿ ಪ್ರವೀಣ್ ಎಂಬಾತ ಎಸ್ಪಿ ಕಚೇರಿಯ ಟಪಾಲ್ ಸೆಕ್ಷನ್…

Read More

ರಾಷ್ಟ್ರಮಟ್ಟದ ಕಬ್ಬಡಿ ಪಂದ್ಯಾವಳಿಗೆ ಆಯ್ಕೆಯಾದ ಕು.ಶ್ರೇಯಾ ಮತ್ತು ಕು.ಶ್ರಾವ್ಯ|Kabbadi

ರಿಪ್ಪನ್‌ಪೇಟೆ : ಶ್ರೀ ಶಾರದಾ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿನಿಯರಾದ ಶ್ರೇಯಾ ಬಿ ಆರ್ ನಾಯಕ್ ಮತ್ತು ಶ್ರಾವ್ಯ ಹೆಚ್ ಓ ರವರು ಕಬ್ಬಡಿ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನ 22 ರ ಮಂಗಳವಾರ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ನಡೆದ ರಾಜ್ಯಮಟ್ಟದ 14 ವರ್ಷ ವಯೋಮಿತಿಯೊಳಗಿನ ಬಾಲಕಿಯರ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಮುಂದಿನ ತಿಂಗಳು ಪಂಜಾಬ್ ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕಬ್ಬಡಿ ಪಂದ್ಯಾವಳಿಗೆ ಶ್ರೀ ಶಾರದ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿನಿಯರಾದ ಶ್ರೇಯಾ…

Read More