Headlines

BPL ಕಾರ್ಡ್ ಅರ್ಜಿದಾರರಿಗೆ ಗುಡ್ ನ್ಯೂಸ್ | ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಆರಂಭ – ಪಡೆಯುವುದು ಹೇಗೆ?

Good News for BPL Card Applicants | Distribution of BPL Ration Card Starts – How to Get It?

BPL ಕಾರ್ಡ್ ಅರ್ಜಿದಾರರಿಗೆ ಗುಡ್ ನ್ಯೂಸ್ | ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಆರಂಭ – ಪಡೆಯುವುದು ಹೇಗೆ?

Good News for BPL Card Applicants | Distribution of BPL Ration Card Starts – How to Get It?

Good News for BPL Card Applicants | Distribution of BPL Ration Card Starts – How to Get It?

ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್‌ಗಾಗಿ ಸಲ್ಲಿಸಲಾದ ಅರ್ಜಿದಾರರಿಗೆ ದೊಡ್ಡ ಗುಡ್ ನ್ಯೂಸ್ ಲಭಿಸಿದೆ. ಹೊಸದಾಗಿ ಬಂದ 3.96 ಲಕ್ಷ ಅರ್ಜಿಗಳ ಪೈಕಿ 2.95 ಲಕ್ಷ ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ. ಉಳಿದ ಅರ್ಜಿಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.

ಈ ಮೂಲಕ ಕಳೆದ ಎರಡು ವರ್ಷಗಳಿಂದ ಬಿಪಿಎಲ್ ರೇಷನ್ ಕಾರ್ಡ್‌ಗಾಗಿ ಕಾಯುತ್ತಿದ್ದವರಿಗೆ ನಿರೀಕ್ಷಿತ ಸಂತಸ ಸಿಕ್ಕಿದೆ.

ಬಿಪಿಎಲ್ ಕಾರ್ಡ್ ಪಡೆಯುವ ವಿಧಾನ

ಅರ್ಜಿದಾರರು ತಮ್ಮ ತಾಲೂಕು ಕಚೇರಿಯ ಆಹಾರ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕು.ಜಿಲ್ಲಾ ಕೇಂದ್ರ ಅಥವಾ ನಗರ ವ್ಯಾಪ್ತಿಯವರು ಆಹಾರ ಇಲಾಖೆ ಉಪನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅರ್ಜಿ ಅನುಮೋದನೆಯ ಸ್ಥಿತಿಯನ್ನು ಪರಿಶೀಲಿಸಬಹುದು.ಅವಶ್ಯಕ ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಸ್ಥಳದಲ್ಲಿಯೇ ರೇಷನ್ ಕಾರ್ಡ್ ಪಡೆಯುವ ಅವಕಾಶ ಇರುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ತಿಂಗಳಲ್ಲಿ ಸಂಪೂರ್ಣ ಪ್ರಕ್ರಿಯೆ

ಸುವರ್ಣ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು,
ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಪತ್ತೆಹಚ್ಚಿ ಎಪಿಎಲ್‌ಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ಕೂಡ ಮುಂದುವರಿದಿದೆ.
ಅದೇ ವೇಳೆ ಅರ್ಹರಿಗೆ ತ್ವರಿತವಾಗಿ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ ಎಂದರು.

ಹೊಸ ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರದ ತೀರ್ಮಾನ

ಜನಸಂಖ್ಯೆಗೆ ಅನುಗುಣವಾಗಿ ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯುವ ಘೋಷಣೆಯನ್ನು ಸರ್ಕಾರ ಬಜೆಟ್‌ನಲ್ಲಿ ಮಾಡಿದ್ದು ಅದರಂತೆ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
ಈ ತಿಂಗಳ ಅಂತ್ಯದೊಳಗೆ ಸಭೆ ನಡೆಸಿ ಹೊಸ ಅಂಗಡಿಗಳ ಆರಂಭ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಹೊಸ ಒಳ ಮೀಸಲಾತಿ ಅನ್ವಯ 3,517 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ನ್ಯಾಯಬೆಲೆ ಅಂಗಡಿ ಪರವಾನಗಿ ಲಭಿಸಲಿದೆ.ರಾಜ್ಯದ ಯಾವುದೇ ಭಾಗದಲ್ಲೂ ಆಹಾರ ಧಾನ್ಯ ಕೊರತೆ ಉಂಟಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

ಬಿಪಿಎಲ್ ಕಾರ್ಡ್ ಅರ್ಜಿ ಸ್ಥಿತಿ, ದಾಖಲೆಗಳು ಹಾಗೂ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿ ಪಡೆಯಲು ಅರ್ಜಿದಾರರು ತಾಲೂಕು ಆಹಾರ ಕಚೇರಿ, ಜಿಲ್ಲಾ ಆಹಾರ ಇಲಾಖೆ ಅಥವಾ ಸೇವಾ ಕೇಂದ್ರಗಳನ್ನು (ಸೇವಾ ಸಿಂಧು / ಗ್ರಾಮ ಒನ್) ಸಂಪರ್ಕಿಸಬಹುದು.