Headlines

ಹುಂಚಾ ಗ್ರಾಮದಲ್ಲಿ ರಕ್ತದಾನ ಶಿಬಿರ ಯಶಸ್ವಿ – 62 ಯೂನಿಟ್‌ಗಳ ರಕ್ತ ಸಂಗ್ರಹ

ಹುಂಚಾ ಗ್ರಾಮದಲ್ಲಿ ರಕ್ತದಾನ ಶಿಬಿರ ಯಶಸ್ವಿ – 62 ಯೂನಿಟ್‌ಗಳ ರಕ್ತ ಸಂಗ್ರಹ ಹೊಸನಗರ ತಾಲೂಕಿನ ಹುಂಚಾ ಗ್ರಾಮ ಪಂಚಾಯತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹುಂಚಾ ಇವರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 29ರಂದು ನಡೆದ ಸ್ವಯಂ ಪ್ರೇರಿತ ಬಹುತ್ ರಕ್ತದಾನ ಶಿಬಿರ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಒಟ್ಟು 62 ಯೂನಿಟ್‌ಗಳ ರಕ್ತ ಸಂಗ್ರಹಿಸಲಾಯಿತು. ಈ ಶಿಬಿರದಲ್ಲಿ ಸ್ಥಳೀಯ ಯುವಕರು, ಮಹಿಳೆಯರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ಮಾನವೀಯತೆಯ ನಿಜವಾದ ಸಂದೇಶವನ್ನು ಸಾರಿದರು. ರಕ್ತದಾನದ ಮಹತ್ವವನ್ನು ಜನರಿಗೆ ತಲುಪಿಸುವ…

Read More

ಲಾರಿ ಬೈಕ್ ನಡುವೆ ಅಪಘಾತ – ಓರ್ವ ಸಾವು, ಇನ್ನೋರ್ವ ಗಂಭೀರ

ಲಾರಿ ಬೈಕ್ ನಡುವೆ ಅಪಘಾತ – ಓರ್ವ ಸಾವು, ಇನ್ನೋರ್ವ ಗಂಭೀರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಸುಣ್ಣದಕೊಪ್ಪ ಗ್ರಾಮದ ಬಳಿ ಸಂಭವಿಸಿದ ಭೀಕರ ಹಿಟ್ ಆ್ಯಂಡ್ ರನ್ ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಇದೇ ಘಟನೆಯಲ್ಲಿ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ವೇಗವಾಗಿ ಬಂದ ಲಾರಿ ಬೈಕ್‌ಗೆ ಬಲವಾಗಿ ಡಿಕ್ಕಿ ಹೊಡೆದು, ಚಾಲಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ಪರಿಣಾಮ ಬೈಕ್‌ನಲ್ಲಿದ್ದ ಯುವಕರಲ್ಲಿ ಪುನೀತ್ (22) ಎಂಬ ದುರ್ದೈವಿ ಸ್ಥಳದಲ್ಲೇ…

Read More

ಕಪ್ಪು ಆಮೆ ಅಕ್ರಮ ಸಂಗ್ರಹ – ಅರಣ್ಯ ಸಂಚಾರಿ ದಳದಿಂದ ದಿಢೀರ್ ದಾಳಿ, ಓರ್ವನ ಬಂಧನ

ಕಪ್ಪು ಆಮೆ ಅಕ್ರಮ ಸಂಗ್ರಹ – ಅರಣ್ಯ ಸಂಚಾರಿ ದಳದಿಂದ ದಿಢೀರ್ ದಾಳಿ, ಓರ್ವನ ಬಂಧನ ಶಿವಮೊಗ್ಗ : ಅಕ್ರಮವಾಗಿ ಕಪ್ಪು ಆಮೆ ಸಂಗ್ರಹಿಸಿಟ್ಟುಕೊಂಡಿದ್ದಾರೆಂಬ ಖಚಿತ ಮಾಹಿತಿಯ ಆಧಾರದ ಮೇಲೆ ಅರಣ್ಯ ಸಂಚಾರಿ ದಳ ಸಾಗರದ ಪಿಎಸ್‌ಐ ವಿನಾಯಕ ಅವರ ನೇತೃತ್ವದಲ್ಲಿ ಸಿಬ್ಬಂದಿವರ್ಗ ದಿಢೀರ್ ದಾಳಿ ನಡೆಸಿ, ಕಪ್ಪು ಆಮೆಯನ್ನು ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಶಿವಮೊಗ್ಗ ನಗರದ ಬೆಕಲ್ಲು ಸಿದ್ದೇಶ್ವರ ನಗರದಲ್ಲಿನ ಮನೆಯೊಂದರಲ್ಲಿ ಕಪ್ಪು ಆಮೆ ಇಟ್ಟುಕೊಂಡಿದ್ದ ಮಹಮ್ಮದ್ ಸಮೀಯುಲ್ಲಾ ಬಿನ್ ಹಮೀದ್ ಎಂಬುವವರನ್ನು ಬಂಧಿಸಿದ್ದು,…

Read More

ಅಭಿಮಾನಿಗಳ ಹೃದಯದಲ್ಲಿ ಪುನೀತ್ ರಾಜ್‍ಕುಮಾರ್ ಎಂದೆಂದಿಗೂ ಶಾಶ್ವತ – ಜಿ ಆರ್ ಗೋಪಾಲಕೃಷ್ಣ

ಅಭಿಮಾನಿಗಳ ಹೃದಯದಲ್ಲಿ ಪುನೀತ್ ರಾಜ್‍ಕುಮಾರ್ ಎಂದೆಂದಿಗೂ ಶಾಶ್ವತ – ಜಿ ಆರ್ ಗೋಪಾಲಕೃಷ್ಣ ರಿಪ್ಪನ್‌ಪೇಟೆ : “ತಮ್ಮ ಅಭಿನಯ, ಸರಳತೆ ಮತ್ತು ಹೃದಯ ಶ್ರೀಮಂತಿಕೆಯ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇಂದಿಗೂ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ” ಎಂದು ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಜಿ.ಆರ್ ಗೋಪಾಲಕೃಷ್ಣ ಹೇಳಿದರು. ಪಟ್ಟಣದ ವಿನಾಯಕ ಸರ್ಕಲ್‌ನಲ್ಲಿ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ಅಭಿಮಾನಿ ಬಳಗದ ವತಿಯಿಂದ ಮಂಗಳವಾರ ನಡೆದ 3ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅಪ್ಪು ಅವರ…

Read More

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ – ಮೂವರು ಸ್ಥಳದಲ್ಲೇ ಸಾವು

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ – ಮೂವರು ಸ್ಥಳದಲ್ಲೇ ಸಾವು ಶಿವಮೊಗ್ಗ: ನಗರದ ಹೊರವಲಯದ ಗೋಂಧಿ ಚಟ್ನಹಳ್ಳಿ ಗ್ರಾಮದ ಬಳಿ ಇಂದು (ಗುರುವಾರ) ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ದುರ್ಮರಣ ಹೊಂದಿದ್ದಾರೆ. ಶಿವಮೊಗ್ಗದಿಂದ ಹೊನ್ನಾಳಿ ಕಡೆಗೆ ತೆರಳುತ್ತಿದ್ದ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ, ವಾಹನದಲ್ಲಿದ್ದ ನಾಲ್ವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಇಂದು ಬೆಳಿಗ್ಗೆ ಸುಮಾರು 5.30ರ…

Read More

RIPPONPETE | ಬೈಕ್ ಕಳ್ಳತನವೆಸಗಿದ್ದ ಆರೋಪಿಯ ಬಂಧನ

RIPPONPETE | ಬೈಕ್ ಕಳ್ಳತನವೆಸಗಿದ್ದ ಆರೋಪಿಯ ಬಂಧನ ರಿಪ್ಪನ್‌ಪೇಟೆ: ಪಟ್ಟಣದಲ್ಲಿ ನಡೆದ ಬೈಕ್‌ ಕಳ್ಳತನ ಪ್ರಕರಣವನ್ನು ಪೊಲೀಸರು ಕೆಲವೇ ದಿನಗಳಲ್ಲಿ ಭೇದಿಸಿ ಆರೋಪಿಯನ್ನು ವಶಕ್ಕೆ ಪಡೆದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಅಕ್ಟೋಬರ್ 19ರ ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಕಣಬಂದೂರಿನ ವ್ಯಕ್ತಿಯೊಬ್ಬರು ಸತ್ಕಾರ ಲಾಡ್ಜ್‌ ಮುಂಭಾಗ, ರಾಧಾಕೃಷ್ಣ ಜ್ಯೂವೆಲರಿ ಪಕ್ಕದಲ್ಲಿ ಕೆಎ 14 ಇಎ 9708 ನೊಂದಣೆಯ ಹಿರೋ ಹೋಂಡಾ ಬೈಕ್ ನಿಲ್ಲಿಸಿದ್ದರು.ಸ್ವಲ್ಪ ಹೊತ್ತಿನ ನಂತರ ಮರಳಿ ಬಂದು ನೋಡಿದಾಗ ಬೈಕ್ ಕಾಣೆಯಾಗಿದ್ದು, ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗದೆ…

Read More

ಹುಂಚದಲ್ಲಿ ನಾಳೆ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಹುಂಚದಲ್ಲಿ ನಾಳೆ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹುಂಚಾ : ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ, ಪರಮಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳ ಕೃಪಾಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ, ಮೆಗ್ಗಾನ್‌ ಜಿಲ್ಲಾ ಆಸ್ಪತ್ರೆ ಶಿವಮೊಗ್ಗ ಸೇರಿದಂತೆ ವಿವಿಧ ಸಾಮಾಜಿಕ ಸಂಘ‧ಸಂಸ್ಥೆಗಳ ಸಹಯೋಗದಿಂದ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ನಾಳೆ (29-10-2025) ನಡೆಯಲಿದೆ. ಶಿಬಿರವು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ಹುಂಚಾ ಪ್ರಾಥಮಿಕ…

Read More

RIPPONPETE | ವಿನಾಯಕ ವೃತ್ತ ಶೀಘ್ರ ಅಗಲೀಕರಣ – ನೀಲನಕ್ಷೆ ಬಿಡುಗಡೆಗೊಳಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ

RIPPONPETE | ವಿನಾಯಕ ವೃತ್ತ ಶೀಘ್ರ ಅಗಲೀಕರಣ – ನೀಲನಕ್ಷೆ ಬಿಡುಗಡೆಗೊಳಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್‌ಪೇಟೆ : ನಾಲ್ಕು ಜಿಲ್ಲೆಗಳನ್ನು ಸಂಪರ್ಕಿಸುವ ಹೃದಯಭಾಗವಾಗಿರುವ ರಿಪ್ಪನ್‌ಪೇಟೆ ವಿನಾಯಕ ಸರ್ಕಲ್ ಶೀಘ್ರದಲ್ಲೇ ಅಗಲೀಕರಣಗೊಂಡು, ಅತ್ಯಾಧುನಿಕ ಸೌಲಭ್ಯಗಳೊಂದಿಗೆ “ಮಾದರಿ ಸರ್ಕಲ್” ಆಗಿ ರೂಪಾಂತರಗೊಳ್ಳಲಿದೆ. ಈ ಸಂಬಂಧ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಲೋಕೋಪಯೋಗಿ ಮತ್ತು ಮೆಸ್ಕಾಂ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ತಯಾರಾಗಿರುವ ನೀಲನಕ್ಷೆ (ಬ್ಲೂಪ್ರಿಂಟ್) ಅನ್ನು ಬಿಡುಗಡೆಗೊಳಿಸಿದರು. ನಂತರ ಮಾದ್ಯಮದವರೊಂದಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ,“ಸರ್ಕಲ್ ವಿಸ್ತರಣೆ,…

Read More

“ಒಂದು ಕಂತು ಬಾಕಿ – ರೈತನ ಮನೆಗೆ ನುಗ್ಗಿ ಜಾನುವಾರು ಎಳೆದೊಯ್ದ ಫೈನಾನ್ಸ್ ಗೂಂಡಾಗಳು!”

“ಒಂದು ಕಂತು ಬಾಕಿ – ರೈತನ ಮನೆಗೆ ನುಗ್ಗಿ ಜಾನುವಾರು ಎಳೆದೊಯ್ದ ಫೈನಾನ್ಸ್ ಗೂಂಡಾಗಳು!” ಶಿವಮೊಗ್ಗ: ಜಿಲ್ಲೆಯಲ್ಲಿ ಖಾಸಗಿ ಫೈನಾನ್ಸ್ ಕಂಪನಿಗಳ ‘ಗುಂಡಾಗಿರಿ’ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೇವಲ ಒಂದು ತಿಂಗಳ ಕಂತು ಬಾಕಿ ಇಟ್ಟ ಕಾರಣಕ್ಕೆ ರೈತನ ಜೀವಾಳವಾದ ಜಾನುವಾರುಗಳನ್ನು ಬಲಪ್ರಯೋಗದಿಂದ ಎಳೆದೊಯ್ದಿರುವ ಗೃಹಹಲ್ಲೆಯಂತ ಘಟನೆ ಸಿದ್ಲಿಪುರದಲ್ಲಿ ನಡೆದಿದೆ. ಸಿದ್ಲಿಪುರ ಗ್ರಾಮದ ಭರತ್ ಎಂಬ ಕೃಷಿಕರು 2 ಲಕ್ಷ ರೂಪಾಯಿ ಲೋನ್ ಪಡೆದಿದ್ದರು. ನಿಯಮಿತವಾಗಿ ತಿಂಗಳಿಗೆ ₹9,000 ಕಂತು ಪಾವತಿಸುತ್ತಿದ್ದರೂ, ಹಾಲಿಡುವ ಹಸು ಅಕಾಲಿಕವಾಗಿ ಸಾವನ್ನಪ್ಪಿದ…

Read More

SSLC ಅಂಕಪಟ್ಟಿಯಲ್ಲಿ ಶಾಲೆಯ ಹೆಸರು ಗೊಂದಲ – ರಾಮಕೃಷ್ಣ ವಿದ್ಯಾಲಯದಲ್ಲಿ ಪೋಷಕರ ದಿಢೀರ್ ಪ್ರತಿಭಟನೆ

SSLC ಅಂಕಪಟ್ಟಿಯಲ್ಲಿ ಶಾಲೆಯ ಹೆಸರು ಗೊಂದಲ – ರಾಮಕೃಷ್ಣ ವಿದ್ಯಾಲಯದಲ್ಲಿ ಪೋಷಕರ ದಿಢೀರ್ ಪ್ರತಿಭಟನೆ ರಿಪ್ಪನ್‌ಪೇಟೆ : ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ಶಾಲೆಯ ಹೆಸರೇ ಬದಲಾಗಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಗಂಭೀರ ಅನಾಹುತ ಉಂಟು ಮಾಡಲಿದೆ ಎಂಬ ಅಸಮಾಧಾನದಿಂದಾಗಿ, ರಿಪ್ಪನ್‌ಪೇಟೆಯ ಶಾರದಾ ರಾಮಕೃಷ್ಣ ವಿದ್ಯಾಲಯದ ವಿರುದ್ಧ ಪೋಷಕರು ಇಂದು ದಿಢೀರ್ ಪ್ರತಿಭಟನೆ ನಡೆಸಿದರು. ಕಳೆದ 2024-25ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ. ಪರೀಕ್ಷಾ ಫಲಿತಾಂಶದ ಬಳಿಕ ನೀಡಲಾಗುತ್ತಿರುವ ವರ್ಗಾವಣೆ ಪತ್ರದಲ್ಲಿ ಶಾರದಾ ರಾಮಕೃಷ್ಣ ವಿದ್ಯಾಲಯದ ಬದಲು ‘ಸರ್ಕಾರಿ ಪದವಿ ಪೂರ್ವ ಕಾಲೇಜು, ರಿಪ್ಪನ್‌ಪೇಟೆ’…

Read More