Headlines

ನಿಯಂತ್ರಣ ತಪ್ಪಿ ನದಿಗೆ ಉರುಳಿದ ಕಾರು- ಓರ್ವ ಮಹಿಳೆ ಸಾವು..!

ನಿಯಂತ್ರಣ ತಪ್ಪಿ ನದಿಗೆ ಉರುಳಿದ ಕಾರು- ಓರ್ವ ಮಹಿಳೆ ಸಾವು..! ತೆಕ್ಕಟ್ಟೆಯ ಶಂಕರ ದೇವಾಡಿಗ ಅವರು ತಮ್ಮ ಮಾರುತಿ ಸ್ವಿಫ್ಟ್ಕಾರಿನಲ್ಲಿ ಕುಟುಂಬದ ಆರು ಮಂದಿ ಸದಸ್ಯರೊಂದಿಗೆ ಶಿವಮೊಗ್ಗದಲ್ಲಿರುವ ಮಗಳ ಮನೆಗೆ ತೆರಳುತ್ತಿದ್ದರು. ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಂಡಗದ್ದೆ ಬಳಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ರಸ್ತೆಪಕ್ಕದಲ್ಲಿದ್ದ ನದಿಗೆ ಉರುಳಿದೆ. ತೀರ್ಥಹಳ್ಳಿ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ನದಿಗೆ ಉರುಳಿದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಮಂಡಗದ್ದೆ ಬಳಿ ನಡೆದಿದೆ….

Read More

ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಕುಂಸಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳ ಬಂಧನ

ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಕುಂಸಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳ ಬಂಧನ ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಕುಂಸಿ ಗ್ರಾಮದ ಎಕೆ ಕಾಲೋನಿಯಲ್ಲಿ ಶನಿವಾರ ರಾತ್ರಿ ಮಚ್ಚು ಬೀಸಿ ಕೊಲೆ ಮಾಡಿದ್ದ ಆರೋಪಿಗಳನ್ನ‌ ಕುಂಸಿ ಪೊಲೀಸರು ಬಂಧಿಸಿದ್ದಾರೆ. ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ ಪ್ರಕರಣದಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಸಿ ಎಕೆ ಕಾಲೋನಿಯಲ್ಲಿ ಶನಿವಾರ ಜೂ.29 ರಂದು ವಾಸು ಯಾನೆ ವಸಂತನ ಕೊಲೆಯಾಗಿತ್ತು.ಈ ಪ್ರಕರಣದ ಆರೋಪಿಗಳಾ ಹರೀಶ…

Read More

ಕಲಾ ಕೌಸ್ತುಭ ಕನ್ನಡ ಸಂಘದ ಮಾಜಿ ಅಧ್ಯಕ್ಷ ಗ್ಯಾರೇಜ್ ರಾಮು ನಿಧನ

ಕಲಾ ಕೌಸ್ತುಭ ಕನ್ನಡ ಸಂಘದ ಮಾಜಿ ಅಧ್ಯಕ್ಷ ಗ್ಯಾರೇಜ್ ರಾಮು ನಿಧನ ಕನ್ನಡ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ರಾಮಚಂದ್ರ (54) ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು,ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗ್ಯಾರೇಜ್ ರಾಮು ಎಂದೇ ಪ್ರಸಿದ್ದರಾಗಿದ್ದ ಅವರು ಜನಮನ್ನಣೆ ಗಳಿಸಿದ್ದರು. ರಿಪ್ಪನ್ ಪೇಟೆ : ಕಲಾ ಕೌಸ್ತುಭ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಹೊಸನಗರ ರಸ್ತೆಯ ನಿವಾಸಿ ರಾಮಚಂದ್ರ (ಗ್ಯಾರೇಜ್ ರಾಮು) ಅನಾರೋಗ್ಯದ. ಹಿನ್ನಲೆಯಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು ರಾತ್ರಿ ನಿಧನರಾಗಿದ್ದಾರೆ. ಕಳೆದ ಕೆಲವು…

Read More

RIPPONPETE | ಅತಿಯಾದ ಕೆಲಸದ ಒತ್ತಡ,ಕಡಿಮೆ ಸಂಬಳ – ಆಶಾ ಕಾರ್ಯಕರ್ತೆಯರಿಂದ ಸಾಮೂಹಿಕ ರಾಜೀನಾಮೆ

RIPPONPETE | ಅತಿಯಾದ ಕೆಲಸದ ಒತ್ತಡ,ಕಡಿಮೆ ಸಂಬಳ – ಆಶಾ ಕಾರ್ಯಕರ್ತೆಯರಿಂದ ಸಾಮೂಹಿಕ ರಾಜೀನಾಮೆ ರಿಪ್ಪನ್ ಪೇಟೆ : ಅತಿಯಾದ ಕೆಲಸದ ಒತ್ತಡ ಹಾಗೂ ಕಡಿಮೆ ಸಂಬಳದಿಂದ ಬೇಸತ್ತ ಐದು ಜನ ಆಶಾ ಕಾರ್ಯಕರ್ತೆಯರು ಸಾಮೂಹಿಕವಾಗಿ ರಾಜೀನಾಮೆ ನೀಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಆಶಾ ಕಾರ್ಯಕರ್ತೆಯರಾದ ಶರಾವತಿ , ಪದ್ಮಾವತಿ , ನಗೀನಾ , ಸುಶೀಲ ಮತ್ತು ಹಸೀನಾ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ನಾವುಗಳು ಸುಮಾರು 16 ವರ್ಷದಿಂದ…

Read More

ಕಸ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಕಂಬಕ್ಕೆ ಕಟ್ಟಿ ಹಾಕಿ ವೃದ್ಧೆ ಮೇಲೆ ಹಲ್ಲೆ – ಸಾಗರ ತಾಲೂಕಿನ ಗೌತಮಪುರದಲ್ಲೊಂದು ಅಮಾನವೀಯ ಘಟನೆ 

ಕಸ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಕಂಬಕ್ಕೆ ಕಟ್ಟಿ ಹಾಕಿ ವೃದ್ಧೆ ಮೇಲೆ ಹಲ್ಲೆ – ಸಾಗರ ತಾಲೂಕಿನ ಗೌತಮಪುರದಲ್ಲೊಂದು ಅಮಾನವೀಯ ಘಟನೆ  ಶಿವಮೊಗ್ಗ: ಮನೆಯ ಮುಂದೆ ಕಸ ಹಾಕಿದ್ದನ್ನು ಪ್ರಶ್ನಿಸಿದ  ವೃದ್ಧೆಯನ್ನು ಕಂಬಕ್ಕೆ ಕಟ್ಟಿ  ಹಲ್ಲೆ ನಡೆಸಿರುವ  ಘಟನೆ ಆನಂದಪುರ‌ ಸಮೀಪದ ಗೌತಮಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ 67 ವರ್ಷದ ಹುಚ್ಚಮ್ಮ ಎಂಬವವರ ಮನೆಯ ಮುಂದೆ ನೆರೆಮನೆಯವರಾದ ಪ್ರೇಮಾ ಕಸ ತಂದು ಹಾಕಿದ್ದಳು. ಇದನ್ನು  ಪ್ರಶ್ನೆ ಮಾಡಿದಕ್ಕೆ   ಮಂಜುನಾಥ್ , ದರ್ಶನ್ ಹಾಗೂ ಪ್ರೇಮಾ  ಹುಚ್ಚಮ್ಮ ಗೆ ಕೆಟ್ಟದಾಗಿ…

Read More

ಹೊಸನಗರ : ಹಸುವಿನ ಕೆಚ್ಚಲು ಕೊ*ಯ್ದ ಪ್ರಕರಣ – ಆರೋಪಿ ರಾಮಚಂದ್ರ ಅರೆಸ್ಟ್

ಹೊಸನಗರ : ಹಸುವಿನ ಕೆಚ್ಚಲು ಕೊ*ಯ್ದ ಪ್ರಕರಣ – ಆರೋಪಿ ರಾಮಚಂದ್ರ ಅರೆಸ್ಟ್ ಹೊಸನಗರ ; ಮೇಯಲು ಬಿಟ್ಟ ಹಸುವಿನ ಕೆಚ್ಚಲು ಕೊಯ್ದ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೇಲಿನಸಂಪಳ್ಳಿ ಗ್ರಾಮದ ವಿಜಾಪುರ ನಿವಾಸಿ ರಾಮಚಂದ್ರ ಬಿನ್ ಹುಚ್ಚಾನಾಯ್ಕ ಬಂಧಿತ ಆರೋಪಿ. ಈತನ ವಿರುದ್ದ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ – 1960 (prevention of cruelty to animals act) ರ ಅಡಿ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ….

Read More

ಹೊಸನಗರ : ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುಷ್ಕರ್ಮಿಗಳು

ಹೊಸನಗರ : ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುಷ್ಕರ್ಮಿಗಳು ವಿಕೃತವಾಗಿ ಬಿಟ್ಟಯ ಪಾಪಿಗಳು ಮೇಯಲು ಹಸಿವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತೋಟದಕೊಪ್ಪ ಗ್ರಾಮದ ವಿಜಾಪುರ ಎಂಬಲ್ಲಿ ಶನಿವಾರ ನಡೆದಿದೆ. ಹಸುವಿನ ಕೆಚ್ಚಲು ಕೊಯ್ದ ಹೇಯ ಘಟನೆ ತಾಲೂಕಿನ ವಿಜಾಪುರದಲ್ಲಿ ನಡೆದಿದ್ದು.ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡಿದ ನಂತರ ಸ್ಥಳೀಯರ ಸಹಕಾರದಿಂದ ಹಸುವನ್ನು ಮನೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಗ್ರಾಮದ ಕುಮಾರ್ ವಿಜಯ ಎಂಬವರಿಗೆ ಸೇರಿದ್ದ ಹಸು ಶನಿವಾರ ಮೇಯಲು…

Read More

ಆನಂದಪುರ | ಅಕ್ರಮ ಜಾನುವಾರು ಸಾಗಾಟ – ಮೂವರು ವಶಕ್ಕೆ

ಆನಂದಪುರ | ಅಕ್ರಮ ಜಾನುವಾರು ಸಾಗಾಟ – ಮೂವರು ವಶಕ್ಕೆ ಸಾಗರ ತಾಲೂಕಿನ ಆನಂದಪುರ ಸಮೀಪದ ಬಳ್ಳಿಬೈಲು ಬಳಿ ಮೂರು ಜಾನುವಾರುಗಳನ್ನು  ಅಕ್ರಮವಾಗಿ ಸಾಗಿಸುತ್ತಿದ್ದ ಮೂವರನ್ನು ಆನಂದಪುರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ದಿಂಡದಹಳ್ಳಿ ವಾಸಿಗಳಾದ ಬಸವರಾಜ್, ಮರಿಯಪ್ಪ, ಗುಡ್ಡಪ್ಪ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಬಳ್ಳಿ ಬೈಲಿನಿಂದ ಆನಂದಪುರ ಕಡೆ ತೆರಳುತ್ತಿದ್ದ ಅಶೋಕ್ ಲೈಲ್ಯಾಂಡ್ ವಾಹನವನ್ನು ಪಿಎಸ್ಐ ಪ್ರವೀಣ್ ನೇತೃತ್ವದ ತಂಡ ಪರಿಶೀಲಿಸಿದಾಗ, ಅಕ್ರಮವಾಗಿ ಹಿಂಸಾತ್ಮಕವಾಗಿ ಒಂದು ಎಮ್ಮೆ, ಒಂದು ಕೋಣನ ಮರಿ ಹಾಗೂ ಒಂದು ಹೋರಿ ಕರುವನ್ನು…

Read More

ANANDAPURA | ಗಾಂಜಾ ಅಮಲಿನಲ್ಲಿದ್ದ ಲಾರಿ ಚಾಲಕ ವಶಕ್ಕೆ

ANANDAPURA | ಗಾಂಜಾ ಅಮಲಿನಲ್ಲಿದ್ದ ಲಾರಿ ಚಾಲಕ ವಶಕ್ಕೆ ಗಾಂಜಾ ಸೇವಿಸಿ ವಾಹನ ಚಲಾಯಿಸುತಿದ್ದ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ನಡೆದಿದೆ. ಆನಂದಪುರ ಪಿಎಸ್ಐ ಪ್ರವೀಣ್ ನೇತೃತ್ವದ ತಂಡ ಆನಂದಪುರ ಪೊಲೀಸ್ ಠಾಣೆಯ ಮುಂಭಾಗ ವಾಹನಗಳ ತಪಾಸಣೆ ನಡೆಸುತ್ತಿರುವಾಗ ಸಾಗರ ಕಡೆಯಿಂದ ಲಾರಿಯೊಂದು ಅಡ್ಡದಿಡ್ಡಿಯಾಗಿ ಚಾಲನೆ ಮಾಡಿಕೊಂಡು ಬರುತ್ತಿರುವುದನ್ನು ಗಮನಿಸಿದ ಪಿಎಸ್ಐ ಪ್ರವೀಣ್ ಮತ್ತು ತಂಡ ವಾಹನವನ್ನು ನಿಲ್ಲಿಸಿ ವಿಚಾರಿಸಿದಾಗ…

Read More

ವೃದ್ಧೆಯ ಸರ ಅಪಹರಣ ಪ್ರಕರಣ – ಇಬ್ಬರು ಸರಗಳ್ಳರ ಬಂಧನ

ವೃದ್ಧೆಯ ಸರ ಅಪಹರಣ ಪ್ರಕರಣ – ಇಬ್ಬರು ಸರಗಳ್ಳರ ಬಂಧನ ಶಿವಮೊಗ್ಗ: ಜೂನ್ 20ರಂದು ಬೆಳಗಿನ ಜಾವ ವೃದ್ಧೆಯೊಬ್ಬರ ಕೊರಳಿನಿಂದ 38 ಗ್ರಾಂ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಎನ್.ಆರ್.ಪುರ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಚಿಪ್ಸ್ ವ್ಯಾಪಾರಿ ಸಾಗರ್ ಮತ್ತು ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಮಾರಶೆಟ್ಟಿಹಳ್ಳಿ ರಾಕೇಶ್ ಬಂಧಿತ ಆರೋಪಿಗಳು. ಎನ್.ಆರ್.ಪುರ ಪಟ್ಟಣದ ಕುರುಕುಬಳ್ಳಿ ಬಳಿ  64 ವರ್ಷ ವಯಸ್ಸಿನ ಮಹಿಳೆಯೊಬ್ಬರು ವಾಕ್ ಮಾಡುತ್ತಿದ್ದರು .  ಆವೇಳೆ  ಇಬ್ಬರು ಕಳ್ಳರು…

Read More