Headlines

ರಿಪ್ಪನ್‌ಪೇಟೆ – ಲಾಡ್ಜ್ ಪಕ್ಕದಲ್ಲಿ ಪುರುಷನ ಶವ ಪತ್ತೆ

ರಿಪ್ಪನ್‌ಪೇಟೆ – ಲಾಡ್ಜ್ ಪಕ್ಕದಲ್ಲಿ ಪುರುಷನ ಶವ ಪತ್ತೆ ರಿಪ್ಪನ್‌ಪೇಟೆ: ಪಟ್ಟಣದ ಹೊಸನಗರ ರಸ್ತೆಯ ಖಾಸಗಿ ಲಾಡ್ಜ್‌ ಪಕ್ಕದ ಖಾಲಿ ಜಾಗದಲ್ಲಿ ಒಬ್ಬ ಪುರುಷನ ಶವ ಪತ್ತೆಯಾದ ಘಟನೆ ಮಂಗಳವಾರ ನಡೆದಿದೆ. ಮೃತ ವ್ಯಕ್ತಿಯನ್ನು ಗವಟೂರು ಸಮೀಪದ ಮಲ್ಲಾಪುರ ಗ್ರಾಮದ ನಿವಾಸಿ ರಾಜು ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅವರು ತೀವ್ರ ಮದ್ಯ ವ್ಯಸನಿಯಾಗಿದ್ದು, ಸೋಮವಾರ ರಾತ್ರಿ ಮದ್ಯಪಾನ ಮಾಡಿದ ನಂತರ ಹೊಸನಗರ ರಸ್ತೆಯ ಬದಿಯಲ್ಲಿ ಮಲಗಿದ್ದರೆಂದು ತಿಳಿದುಬಂದಿದೆ. ಮದ್ಯದ ಪರಿಣಾಮ ಹಾಗೂ ಲೋ ಬಿಪಿ…

Read More

ಆನೆ ದಾಳಿಯಿಂದ ಹಾನಿಗೊಳಗಾದ ರೈತರಿಗೆ ಸಾಂತ್ವಾನ ಹೇಳಿದ ವೀರೇಶ್ ಆಲವಳ್ಳಿ – ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಅರಣ್ಯ ಕಚೇರಿ ಮುಂಭಾಗ ಧರಣಿ ಎಚ್ಚರಿಕೆ

ಆನೆ ದಾಳಿಯಿಂದ ಹಾನಿಗೊಳಗಾದ ರೈತರಿಗೆ ಸಾಂತ್ವಾನ ಹೇಳಿದ ವೀರೇಶ್ ಆಲವಳ್ಳಿ – ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಅರಣ್ಯ ಕಚೇರಿ ಮುಂಭಾಗ ಧರಣಿ ಎಚ್ಚರಿಕೆ ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿಯ ಬಸವಾಪುರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಆನೆ ದಾಳಿಯಿಂದ ರೈತರ ಬೆಳೆಗಳು ನಾಶವಾಗಿರುವ ಹಿನ್ನೆಲೆಯಲ್ಲಿ, ಹೊಸನಗರ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ಅವರು ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ರೈತರನ್ನು ಭೇಟಿಯಾಗಿ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, “ಅರಣ್ಯ ಇಲಾಖೆ ತಕ್ಷಣ ಬೆಳೆ…

Read More

ರಿಪ್ಪನ್‌ಪೇಟೆ – ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತಿದ್ದ ಯುವಕನ ಬಂಧನ

ರಿಪ್ಪನ್‌ಪೇಟೆ – ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತಿದ್ದ ಯುವಕನ ಬಂಧನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ವಿನಾಯಕ ವೃತ್ತದ ಬಳಿ ಗಾಂಜಾ ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಯಡೆಹಳ್ಳಿ ಸಮೀಪದ ಆಚಾಪುರ ನಿವಾಸಿ ಜೋಸೆಫ್ (23) ಬಂಧಿತ ಆರೋಪಿಯಾಗಿದ್ದಾನೆ. ವೈದ್ಯಕೀಯ ಪರೀಕ್ಷೆಯಿಂದ ಆರೋಪಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವ ಹಿನ್ನಲೆಯಲ್ಲಿ ಮಾದಕ ದ್ರವ್ಯ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಂಜಾ ಸೇವನೆ ಹಾಗೂ ಮಾರಾಟದ ಬಗ್ಗೆ…

Read More

ಪ್ರಜಾಪ್ರಭುತ್ವ ರಕ್ಷಣೆಗಾಗಿ “ವೋಟ್ ಚೋರ್, ಗದ್ದಿ ಚೋಡ್” ಅಭಿಯಾನ — ಶ್ವೇತಾ ಬಂಡಿ

ಪ್ರಜಾಪ್ರಭುತ್ವ ರಕ್ಷಣೆಗಾಗಿ “ವೋಟ್ ಚೋರ್, ಗದ್ದಿ ಚೋಡ್” ಅಭಿಯಾನ — ಶ್ವೇತಾ ಬಂಡಿ ರಿಪ್ಪನ್‌ಪೇಟೆ: ಜನರ ಮತ ಕದ್ದುಕೊಂಡು ಅಧಿಕಾರದ ಕುರ್ಚಿ ಹಿಡಿದವರು ಪ್ರಜಾಪ್ರಭುತ್ವದ ಆತ್ಮವನ್ನೇ ಹತ್ತಿಕ್ಕಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ ತೀವ್ರವಾಗಿ ಆರೋಪಿಸಿದ್ದಾರೆ. ಸೋಮವಾರ ಸಂಜೆ ರಿಪ್ಪನ್‌ಪೇಟೆ ವಿನಾಯಕ ಸರ್ಕಲ್‌ನಲ್ಲಿ ನಡೆದ “ವೋಟ್ ಚೋರ್, ಗದ್ದಿ ಚೋಡ್” ಸಹಿ ಸಂಗ್ರಹ ಅಭಿಯಾನದಲ್ಲಿ ಮಾತನಾಡಿದ ಅವರು, “ಮತ ಕಳವು ಪ್ರಜಾಪ್ರಭುತ್ವದ ವಿರುದ್ಧದ ಗಂಭೀರ ಅಪರಾಧ. ಜನರ ಆಶಯಗಳ ವಿರುದ್ಧ ನಡೆದ ಈ…

Read More

ಕಾಲು ಜಾರಿ ಬಿದ್ದು ಪೊಲೀಸ್ ದಫೇದಾರ್ ದುರ್ಮರಣ

ಕಾಲು ಜಾರಿ ಬಿದ್ದು ಪೊಲೀಸ್ ದಫೇದಾರ್ ದುರ್ಮರಣ ಭದ್ರಾವತಿ – ನಗರದ ಹೊಸಮನೆ ಪ್ರದೇಶದ ನಿವಾಸಿ ಹಾಗೂ ಶಿವಮೊಗ್ಗದ ಕೆಎಸ್‌ಆರ್‌ಪಿ ಬೆಟಾಲಿಯನ್‌ನ ದಫೇದಾರ್ ಚಂದ್ರಶೇಖರ್ (44) ಅವರು ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ ಅವರು ಬಾರಂದೂರು ಬೈಪಾಸ್ ಉಜ್ಜಿನೀಪುರದ ನಗರಸಭೆಯ ಪಂಪ್‌ಹೌಸ್ ಬಳಿ ಇರುವ ಭದ್ರಾ ನದಿ ಸೇತುವೆಯ ಕೆಳಭಾಗಕ್ಕೆ ಬಹಿರ್ದೆಸೆಗೆ ತೆರಳಿದಾಗ, ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಮೃತರಿಗೆ ಪತ್ನಿ, ಒಬ್ಬ ಗಂಡು ಮತ್ತು…

Read More

ಹಾಸ್ಯ ನಟ, ಹಿರಿಯ ರಂಗ ಕಲಾವಿದ ರಾಜು ತಾಳಿಕೋಟೆ ನಿಧನ – ಶೂಟಿಂಗ್ ನಲ್ಲಿದ್ದಾಗಲೇ ನಡೆಯಿತು ದುರಂತ

ಹಾಸ್ಯ ನಟ, ಹಿರಿಯ ರಂಗ ಕಲಾವಿದ ರಾಜು ತಾಳಿಕೋಟೆ ನಿಧನ – ಶೂಟಿಂಗ್ ನಲ್ಲಿದ್ದಾಗಲೇ ನಡೆಯಿತು ದುರಂತ ಹಾಸ್ಯ ಕಲಾವಿದ, ತಮ್ಮ ಕಾಮಿಡಿ ಮೂಲಕವೇ ಉತ್ತರ ಕರ್ನಾಟಕದಲ್ಲಿ ನಗುವಿನ ಹೊನಲು ಹರಿಸಿದ್ದ ರಾಜು ತಾಳಿಕೋಟೆ ನಿಧನರಾಗಿದ್ದಾರೆ. ಉತ್ತರ ಕರ್ನಾಟಕಕ್ಕೆ ನಗುವಿನ ಹುಚ್ಚು ಹಿಡಿಸಿದ್ದ, ಕಲಿಯುಗದ ಕುಡುಕ ಖ್ಯಾತಿಯ ನಟ ರಾಜು ತಾಳಿಕೋಟೆ ಮೃತಪಟ್ಟಿದ್ದಾರೆ. ಉಡುಪಿಯ ಮಣಿಪಾಲ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಟ ಶೈನ್ ಶೆಟ್ಟಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದ ರಾಜು ತಾಳಿಕೋಟೆ, ಸಿನಿಮಾ ಶೂಟಿಂಗ್​ ಗೆ…

Read More

ಯಕ್ಷಗಾನ ಕಲಾವಿದರಿಗೆ ರಾಜಾಶ್ರಯ ಸದಾ ಅವಶ್ಯ: ಹಿರಿಯ ಕಲಾವಿದ ಪುರಂದರ ಹೆಗಡೆ ಅಭಿಮತ.

ಯಕ್ಷಗಾನ ಕಲಾವಿದರಿಗೆ ರಾಜಾಶ್ರಯ ಸದಾ ಅವಶ್ಯ: ಹಿರಿಯ ಕಲಾವಿದ ಪುರಂದರ ಹೆಗಡೆ ಅಭಿಮತ. ಹೊಸನಗರ: ದೇಶದ ಸಾಂಸ್ಕೃತಿಕ ಪರಂಪರೆಯ ಹಿರಿಯ ಕಲಾ ಪ್ರಕಾರಗಳಲ್ಲಿ ಒಂದಾದ ಯಕ್ಷಗಾನ ಕಲೆ ಆರಾಧಕರಾದ ಯಕ್ಷ ಕಲಾವಿದರಿಗೆ ರಾಜಾಶ್ರಯ ಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಸಾಧಕ ಪ್ರತಿಭಾವಂತ ಹಿರಿಯ ಕಲಾವಿದರನ್ನು ಗೌರವಿಸುವ ಕೆಲಸ ಮಾಡಬೇಕಾಗಿದೆ ಎಂದು ಹಿರಿಯ ಕಲಾವಿದ ಪುರಂದರ ಹೆಗಡೆ ಹೇಳಿದರು. ತಾಲ್ಲೂಕಿನ ಕಾರ್ಗಿಲ್ ಸಿದ್ಧಿವಿನಾಯಕ ದೇವಸ್ಥಾನ ಸಭಾಂಗಣದಲ್ಲಿ ನಡೆದ ಹೆರಂಜಾಲು ಷಷ್ಠಬ್ಬಿ ಯಕ್ಷ ಕಾರ್ಯಕ್ರಮದಲ್ಲಿ ಕೂಡ ಮಾಡುವ ಹೆರಂಜಾಲು ಗೌರವ…

Read More

ಆನಂದಪುರದಲ್ಲಿ ಅಕ್ರಮ ಮರಳು ಸಾಗಣೆ ಪತ್ತೆ: ಲಾರಿ ಜಫ್ತಿ

ಆನಂದಪುರದಲ್ಲಿ ಅಕ್ರಮ ಮರಳು ಸಾಗಣೆ ಪತ್ತೆ: ಲಾರಿ ಜಫ್ತಿ ಆನಂದಪುರ: ಖಚಿತ ಮಾಹಿತಿಯ ಆಧಾರದಲ್ಲಿ ಆನಂದಪುರ ಪೊಲೀಸ್ ಠಾಣೆಯ ಪಿಎಸೈ ಪ್ರವೀಣ್ ಎಸ್.ಪಿ. ಅವರ ನೇತೃತ್ವದ ಪೊಲೀಸರು ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮರಳು ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಾಗರ ತಾಲ್ಲೂಕಿನ ಆನಂದಪುರದ ಸುತ್ತಮುತ್ತ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ ಎಂಬ ಗುಪ್ತ ಮಾಹಿತಿ ಐಜಿ ಸ್ಕ್ವಾಡ್‌ನಿಂದ ಸ್ಥಳೀಯ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ತಪಾಸಣೆ ಕೈಗೊಂಡು ರೇಡ್ ನಡೆಸಿದರು. ಬಸವನಹೊಂಡ ಗ್ರಾಮದ ಕೆಂಜಿಗಾಪುರ ಕ್ರಾಸ್ ಬಳಿಯ…

Read More

ರಿಪ್ಪನ್‌ಪೇಟೆ ಹೆಸರಿನ ಮೂಲ – ಲಾರ್ಡ್ ರಿಪ್ಪನ್ ಅವರ ಒಳ್ಳೆತನದ ಸ್ಮರಣೆ

ರಿಪ್ಪನ್‌ಪೇಟೆ ಹೆಸರಿನ ಮೂಲ – ಲಾರ್ಡ್ ರಿಪ್ಪನ್ ಅವರ ಒಳ್ಳೆತನದ ಸ್ಮರಣೆ ಬದಲಾಯಿಸಬೇಕಾಗಿರುವುದು ಊರಿನ ಹೆಸರನ್ನಲ್ಲ .. ಈ ಊರಿನ ವ್ಯವಸ್ಥೆಯನ್ನು..!!! ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಣ್ಯಸೌಂದರ್ಯದಿಂದ ಕಂಗೊಳಿಸುವ ಪಟ್ಟಣಗಳಲ್ಲಿ ಒಂದಾದ ರಿಪ್ಪನ್‌ಪೇಟೆ, ಇತಿಹಾಸ ಮತ್ತು ಸಂಸ್ಕೃತಿಯ ಅದ್ಭುತ ಮಿಶ್ರಣವಾಗಿದೆ. ಈ ಊರಿನ ಹೆಸರಿನ ಹಿಂದಿರುವ ಕಥೆ ಅತ್ಯಂತ ಆಸಕ್ತಿದಾಯಕ. ಜನಪ್ರಚಲಿತವಾದ ನಂಬಿಕೆಯ ಪ್ರಕಾರ, ಈ ಸ್ಥಳಕ್ಕೆ “ರಿಪ್ಪನ್‌ಪೇಟೆ” ಎಂಬ ಹೆಸರು ಬ್ರಿಟಿಷ್ ಕಾಲದ ಲಾರ್ಡ್ ರಿಪ್ಪನ್ ( ಜಾರ್ಜ್ ಫ್ರೆಡೆರಿಕ್ ರಾಬಿನ್ಸನ್ )…

Read More

ಅರಣ್ಯ ಭೂಮಿ ಸಾಗುವಳಿದಾರರಿಗೆ ಗುಡ್ ನ್ಯೂಸ್: ರೈತರಿಗೆ ತೊಂದರೆ ಕೊಟ್ಟು ಒಕ್ಕಲೆಬ್ಬಿಸದಂತೆ ಸಚಿವ ಮಧು ಬಂಗಾರಪ್ಪ ಸೂಚನೆ

ಅರಣ್ಯ ಭೂಮಿ ಸಾಗುವಳಿದಾರರಿಗೆ ಗುಡ್ ನ್ಯೂಸ್: ರೈತರಿಗೆ ತೊಂದರೆ ಕೊಟ್ಟು ಒಕ್ಕಲೆಬ್ಬಿಸದಂತೆ ಸಚಿವ ಮಧು ಬಂಗಾರಪ್ಪ ಸೂಚನೆ ಬಹು ಹಿಂದಿನಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಅರಣ್ಯ ಭಾಗದ ರೈತರಿಗೆ ತೊಂದರೆ ನೀಡಿ ಒಕ್ಕಲೆಬ್ಬಿಸಬಾರದು ಎಂದು ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಡಳಿತ ಕಚೇರಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಕೆಆರ್‌ಐಡಿಎಲ್, ನೀರಾವರಿ ಇಲಾಖೆಗಳ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ…

Read More