
ಶರಾವತಿ ಸಂತ್ರಸ್ತರ ತೋಟ ತೆರವು : ರೈತರ ಆಕ್ರೋಶ
ಶರಾವತಿ ಸಂತ್ರಸ್ತರ ತೋಟ ತೆರವು : ರೈತರ ಆಕ್ರೋಶ ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ಥ ರೈತರೊಬ್ಬರು ದಶಕಗಳಿಂದ ಸಾಗುವಳಿ ಮಾಡುತ್ತಿದ್ದ ಭೂಮಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಿರುವ ಘಟನೆ ತಾಲೂಕಿನ ಚಿತ್ರಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಶರಾವತಿ ಮುಳುಗಡೆ ಸಂತ್ರಸ್ಥ ರೈತರಾದ ನಿಡುಗೋಡು ರಾಮಪ್ಪ ಹಾಗೂ ಹಾಡಿಕೇವಿ ಈಶ್ವರ ಎಂಬುವವರು ಸಾಗುವಳಿ ಮಾಡುತ್ತಿದ್ದ ಜಮೀನುಗಳನ್ನು ತೆರವು ಮಾಡಿದ್ದಾರೆ. ರೈತರಾದ ನಿಡುಗೋಡು ರಾಮಪ್ಪ ಎಂಬುವವರ ತಮ್ಮ ಸಾಗುವಳಿ ಭೂಮಿಯಲ್ಲಿ 350 ಅಡಿಕೆ ಗಿಡ,100 ಕಾಫಿ ಗಿಡ,25 ತಾಳೆ ಗಿಡ,50…