
ಆಟೋ ಚಾಲಕನನ್ನು ಕೊಂದು ದೇಹವನ್ನು ಪ್ರಯಾಣಿಕರ ಸೀಟ್‌ನಲ್ಲಿಟ್ಟು ಪರಾರಿಯಾದ ದುಷ್ಕರ್ಮಿಗಳು
ಆಟೋ ಚಾಲಕನನ್ನು ಕೊಂದು ದೇಹವನ್ನು ಪ್ರಯಾಣಿಕರ ಸೀಟ್‌ನಲ್ಲಿಟ್ಟು ಪರಾರಿಯಾದ ದುಷ್ಕರ್ಮಿಗಳು ಆಟೋ ಚಾಲಕನನ್ನು ಬರ್ಬರವಾಗಿ ಕೊಂದು ಆತನ ದೇಹವನ್ನು ಪ್ರಯಾಣಿಕರ ಸೀಟ್‌ನಲ್ಲಿಟ್ಟು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಅಫ್ರೀದ್ (40) ಮೃತ ಆಟೋ ಚಾಲಕ. ಈತ ಮೂಲತಃ ಬಂಗಾರಪೇಟೆಯ ಎಲೆಸಂದ್ರ ಗ್ರಾಮದವರಾಗಿದ್ದು, ಪ್ರಸ್ತುತ ಬೆಂಗಳೂರಿನ ಅಂಜನಾನಗರದಲ್ಲಿ ಪತ್ನಿ-ಮಕ್ಕಳೊಂದಿಗೆ ವಾಸವಾಗಿದ್ದರು. ಮನೆಗೆ ಹೋಗದೆ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಅಫ್ರೀದ್‌ನನ್ನು ಕಳೆದ ರಾತ್ರಿ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಶವವನ್ನು ಹಿಂಬದಿ ಹಾಕಿಕೊಂಡು ಕೋಲಾರದ…


