
ಗವಿಸಿದ್ಧೇಶ್ವರ ಕೃಪೆಗಾಗಿ ಹಿಂದೂ-ಮುಸ್ಲಿಂ ಸಮಾನ ಉಪವಾಸ ವ್ರತಾಚರಣೆ | ತಾಂಬಾದಲ್ಲಿ ಜಾತ್ರೆಯ ಸೌಹಾರ್ದ ಸ್ಪಂದನ
ತಾಂಬಾ ಗ್ರಾಮದ ಗವಿಸಿದ್ಧೇಶ್ವರ ದೇವರ ಕೃಪೆಗೆ ಪಾತ್ರರಾಗಲು ಹಿಂದೂ ಮತ್ತು ಮುಸ್ಲಿಂ ಸಮುದಾಯದ ಭಕ್ತರು ಜಾತಿ-ಧರ್ಮ ಬದಿಗೊತ್ತಿ ಒಂದು ತಿಂಗಳು ಉಪವಾಸ ವ್ರತಾಚರಣೆಯನ್ನು ಮುಕ್ತಾಯಗೊಳಿಸಿದರು. ವಿಜಯಪುರ ಜಿಲ್ಲೆಯ ತಾಂಬಾ ಗ್ರಾಮದಲ್ಲಿ ಪ್ರತಿ ವರ್ಷ ದೀಪಾವಳಿ ಅಮಾವಾಸ್ಯೆಯಂದು ತಾಂಬಾ ಗ್ರಾಮದ ಗವಿಸಿದ್ಧೇಶ್ವರ ದೇವರ ಮತ್ತು ಮಹಾಲಕ್ಷ್ಮೀಯ ಜಾತ್ರಾ ಮಹೋತ್ಸವವೂ ನಡೆಯಲಿದ್ದು, ಎರಡೂ ದೇವರ ಜಾತ್ರೆ ಒಟ್ಟಿಗೆ ನಡೆಯುವುದು ವಿಶೇಷ. ಗವಿಸಿದ್ಧೇಶ್ವರ ಮತ್ತು ಮಹಾಲಕ್ಷ್ಮೀಯ ಮೇಲೆ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಭಕ್ತರ ಅಪಾರ ನಂಬಿಕೆ, ಸುತ್ತಮುತ್ತಲಿನ ಗ್ರಾಮಗಳ ಜನರು…


