
ಯಕ್ಷಗಾನ ಕಲಾವಿದರಿಗೆ ರಾಜಾಶ್ರಯ ಸದಾ ಅವಶ್ಯ: ಹಿರಿಯ ಕಲಾವಿದ ಪುರಂದರ ಹೆಗಡೆ ಅಭಿಮತ.
ಯಕ್ಷಗಾನ ಕಲಾವಿದರಿಗೆ ರಾಜಾಶ್ರಯ ಸದಾ ಅವಶ್ಯ: ಹಿರಿಯ ಕಲಾವಿದ ಪುರಂದರ ಹೆಗಡೆ ಅಭಿಮತ. ಹೊಸನಗರ: ದೇಶದ ಸಾಂಸ್ಕೃತಿಕ ಪರಂಪರೆಯ ಹಿರಿಯ ಕಲಾ ಪ್ರಕಾರಗಳಲ್ಲಿ ಒಂದಾದ ಯಕ್ಷಗಾನ ಕಲೆ ಆರಾಧಕರಾದ ಯಕ್ಷ ಕಲಾವಿದರಿಗೆ ರಾಜಾಶ್ರಯ ಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಸಾಧಕ ಪ್ರತಿಭಾವಂತ ಹಿರಿಯ ಕಲಾವಿದರನ್ನು ಗೌರವಿಸುವ ಕೆಲಸ ಮಾಡಬೇಕಾಗಿದೆ ಎಂದು ಹಿರಿಯ ಕಲಾವಿದ ಪುರಂದರ ಹೆಗಡೆ ಹೇಳಿದರು. ತಾಲ್ಲೂಕಿನ ಕಾರ್ಗಿಲ್ ಸಿದ್ಧಿವಿನಾಯಕ ದೇವಸ್ಥಾನ ಸಭಾಂಗಣದಲ್ಲಿ ನಡೆದ ಹೆರಂಜಾಲು ಷಷ್ಠಬ್ಬಿ ಯಕ್ಷ ಕಾರ್ಯಕ್ರಮದಲ್ಲಿ ಕೂಡ ಮಾಡುವ ಹೆರಂಜಾಲು ಗೌರವ…


