
ಬೈಕ್ ಅಪಘಾತ – ಯುವಕ ಸಾವು
ಬೈಕ್ ಅಪಘಾತ – ಯುವಕ ಸಾವು ಬೈಕ್ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಸ್ಪಾಡಿ ಬಳಿ ನಡೆದಿದೆ. ತ್ಯಾಗರ್ತಿಯ ಚಿಕ್ಕಬಿಲಗುಂಜಿ ಗ್ರಾಮದ ಪ್ರಜ್ವಲ್ (20) ಮೃತ ಯುವಕ. ತ್ಯಾಗರ್ತಿ ಮಾರಿಕಾಂಬಾ ಜಾತ್ರೆಗೆ ಮನೆಗೆ ಬಂದಿದ್ದ ಸಂಬಂಧಿಕರನ್ನು ಊರಿಗೆ ಬಿಟ್ಟು ವಾಪಾಸ್ ಆಗುವ ಸಂದರ್ಭದಲ್ಲಿ ಕಾಸ್ಪಾಡಿ ಬಳಿ ಬೈಕ್ ಅಪಘಾತಗೊಂಡ ಘಟನೆ ಬುಧವಾರ ರಾತ್ರಿ 12 ಗಂಟೆ ಸುಮಾರಿಗೆ ನಡೆದಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಕೂಡಲೇ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಸಾಗಿಸುವ…