ಮೊಟ್ಟೆಯಲ್ಲಿ ಕ್ಯಾನ್ಸರ್ ಅಂಶವಿಲ್ಲ, ಅವು ಸೇವನೆಗೆ ಸುರಕ್ಷಿತ: FSSAI ಸ್ಪಷ್ಟನೆ
Eggs do not contain carcinogenic substances, they are safe to consume: FSSAI clarifies
Eggs do not contain carcinogenic substances, they are safe to consume: FSSAI clarifies
Eggs do not contain carcinogenic substances, they are safe to consume: FSSAI clarifies
Eggs do not contain carcinogenic substances, they are safe to consume: FSSAI clarifies



ನವದೆಹಲಿ: ದೇಶದಲ್ಲಿ ಲಭ್ಯವಿರುವ ಮೊಟ್ಟೆಗಳ ಮಾನವ ಬಳಕೆಗೆ ಸುರಕ್ಷಿತವಾಗಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಹೇಳಿದೆ.
ಮೊಟ್ಟೆಗಳು ಕ್ಯಾನ್ಸರ್ ಅಪಾಯನ್ನು ಹೊಂದಿದೆ ಎಂಬ ಇತ್ತೀಚಿನ ಹೇಳಿಕೆಗಳು ತಪ್ಪು ಮಾಹಿತಿಗಳಿಂದ ಕೂಡಿದ್ದು, ಇದಕ್ಕೆ ಯಾವುದೇ ಬೆಂಬಲವಿಲ್ಲ, ಇದು ಅನಗತ್ಯವಾಗಿ ಸಾರ್ವಜನಿಕರಲ್ಲಿ ಭೀತಿ ಮೂಡಿಸುವ ಯತ್ನವಾಗಿದೆ ಎಂದು ಎಫ್ಎಸ್ಎಸ್ಎಐ ಸ್ಪಷ್ಟಪಡಿಸಿದೆ.
ಮೊಟ್ಟೆಗಳಲ್ಲಿ ನೈಟ್ರೋಫ್ಯೂರಾನ್ ಮೆಟಾಬಾಲೈಟ್‌ಗಳು (ಎಒಜೆಡ್)ಗಳಂತಹ ಕ್ಯಾನ್ಸರ್ಕಾರಕ ಪದಾರ್ಥಗಳಿವೆ ಎಂಬ ಮಾಧ್ಯಮ ವರದಿ ಮತ್ತು ಸಾಮಾಜಿನ ಮಾಧ್ಯಮ ಪೋಸ್ಟ್ಗಳನ್ನು ಅಲ್ಲಗಳೆದಿರುವ ಎಫ್ಎಸ್ಎಸ್ಎಐ ಅಧಿಕಾರಿಗಳು, ಆಹಾರ ಸುರಕ್ಷತೆ ಮತ್ತು ಮಾನದಂಡಗಳು (ಮಾಲಿನ್ಯಕಾರಕಗಳು, ವಿಷಗಳು ಮತ್ತು ಉಳಿಕೆಗಳು) ನಿಯಮಗಳು, 2011ರ ಅಡಿ ಕೋಳಿ ಮತ್ತು ಮೊಟ್ಟೆಗಳ ಉತ್ಪಾದನೆಯ ಎಲ್ಲಾ ಹಂತಗಳಲ್ಲಿ ನೈಟ್ರೋಫ್ಯೂರಾನ್‌ಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ನೈಟ್ರೋಫ್ಯೂರಾನ್ ಮೆಟಾಬಾಲೈಟ್‌ಗಳಿಗೆ ನಿಯಂತ್ರಕ ಜಾರಿಗಾಗಿ 1.0 ಯುಜಿ/ಕೆಜಿಯ ಬಾಹ್ಯ ಶೇಷ ಮಿತಿಯನ್ನು (ಇಎಂಆರ್ಎಲ್) ನಿಗದಿಪಡಿಸಲಾಗಿದೆ. ಇದನ್ನು ಕನಿಷ್ಠ ಮಿತಿಯಲ್ಲಿ ಸುಧಾರಿತ ಪ್ರಯೋಗಾಲಯ ವಿಧಾನಗಳಿಂದ ಪತ್ತೆ ಮಾಡಬಹುದಾಗಿದೆ. ಹಾಗೆಂದ ಮಾತ್ರಕ್ಕೆ ಇದರ ಬಳಕೆಗೆ ಅನುಮತಿಸಲಾಗಿದೆ ಎಂಬ ಸೂಚನೆಯಲ್ಲ ಎಂದರು.
ಇಎಂಆರ್ಎಲ್ ಕನಿಷ್ಠ ಪ್ರಮಾಣದ ಅವಶೇಷಗಳ ಪತ್ತೆ ಆಹಾರ ಸುರಕ್ಷತೆಯ ಉಲ್ಲಂಘನೆಯಾಗುವುದಿಲ್ಲ. ಇದು ಯಾವುದೇ ಆರೋಗ್ಯ ಅಪಾಯವನ್ನು ಸೂಚಿಸುವುದಿಲ್ಲ ಎಂದಿದ್ದಾರೆ. ಭಾರತದಲ್ಲಿ ಅಂತಾರಾಷ್ಟ್ರೀಯ ಮಾನದಂಡದೊಂದಿಗೆ ನಿಯಂತ್ರಣಗಳನ್ನು ರೂಪಿಸಲಾಗಿದೆ. ಯುರೋಪಿಯನ್ ದೇಶ ಮತ್ತು ಅಮೆರಿಕ ಈ ನ್ಯೂಟ್ರೋಫ್ಯೂರಾನ್ ಪ್ರಾಣಿಗಳ ಉತ್ಪಾದಕ ವಸ್ತುಗಳ ಬಳಕೆಯನ್ನು ನಿರ್ಬಂಧಿಸಿದೆ
ದೇಶಾದ್ಯಂತ ಸಂಖ್ಯಾತ್ಮಕ ಮಾನದಂಡಗಳಲ್ಲಿನ ವ್ಯತ್ಯಾಸಗಳು ವಿಶ್ಲೇಷಣಾತ್ಮಕ ಮತ್ತು ನಿಯಂತ್ರಕ ವಿಧಾನಗಳಲ್ಲಿನ ವ್ಯತ್ಯಾಸಗಳನ್ನು ಪ್ರತಿಬಿಂಬಿಸುತ್ತವೆ. ಗ್ರಾಹಕ ಸುರಕ್ಷತಾ ಮಾನದಂಡಗಳಲ್ಲಿನ ವ್ಯತ್ಯಾಸಗಳಲ್ಲಿ ಅಲ್ಲ ಎಂದು ಅದು ಸ್ಪಷ್ಟಪಡಿಸಿದೆ.