“If you live like the ocean, people will gather like a river” – Malali Sri | Religious fervour for the Gavatur Jatra Mahotsava
“ಸಮುದ್ರದಂತೆ ಬಾಳಿದರೆ ನದಿಯಂತೆ ಜನ ಸೇರುತ್ತಾರೆ” – ಮಳಲಿ ಶ್ರೀಗಳು | ಗವಟೂರು ಜಾತ್ರಾ ಮಹೋತ್ಸವಕ್ಕೆ ಧಾರ್ಮಿಕ ಕಳೆ
“If you live like the ocean, people will gather like a river” – Malali Sri | Religious fervour for the Gavatur Jatra Mahotsava
“If you live like the ocean, people will gather like a river” – Malali Sri | Religious fervour for the Gavatur Jatra Mahotsava



ರಿಪ್ಪನ್ ಪೇಟೆ : “ಬಾಳುವುದಾದರೆ ಸಮುದ್ರದಂತೆ ವಿಶಾಲ ಮನಸ್ಸಿನಿಂದ ಬಾಳಬೇಕು. ಆಗ ಬೇಕಾದವರು ನದಿಯಂತೆ ಹರಿದು ಬಂದು ನಿಮ್ಮನ್ನು ಸೇರುತ್ತಾರೆ” ಎಂದು ಮಳಲಿಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಇತಿಹಾಸ ಪ್ರಸಿದ್ಧ ಗವಟೂರು ಶ್ರೀಹೊಳೆಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಹಾಗೂ ರುದ್ರಾಭಿಷೇಕ ಧರ್ಮ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಜೀವನದ ಮೌಲ್ಯಗಳು ಮತ್ತು ಮಾನವೀಯತೆಯ ಮಹತ್ವದ ಬಗ್ಗೆ ಮನೋಜ್ಞವಾಗಿ ವಿವರಿಸಿದರು. “ನಮ್ಮ ದೃಷ್ಟಿ ಸರಿಯಾದರೆ ಇಡೀ ಜಗತ್ತು ನಮಗೆ ಸುಂದರವಾಗಿ ಕಾಣುತ್ತದೆ. ಆದರೆ ನಮ್ಮ ನಾಲಿಗೆ ಸದುಪಯೋಗದಲ್ಲಿದ್ದರೆ ಇಡೀ ಜಗತ್ತಿಗೆ ನಾವು ಸುಂದರವಾಗಿ ಕಾಣುತ್ತೇವೆ. ಯಥಾ ದೃಷ್ಟಿ ತಥಾ ಸೃಷ್ಟಿ ಎಂಬ ಮಾತಿನ ಜೊತೆಗೆ, ನಾಲಿಗೆ ಒಳ್ಳೆಯದಾದರೆ ನಾಡೇ ಒಳ್ಳೆಯದಾಗುತ್ತದೆ ಎಂಬ ಸತ್ಯವನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಅವರು ಸಲಹೆ ನೀಡಿದರು.
ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯ ದಶಧರ್ಮಸೂತ್ರಗಳಲ್ಲಿ ದಾನದ ಮಹತ್ವವನ್ನು ವಿವರಿಸುವ ಸಂದರ್ಭದಲ್ಲಿ ‘ಸಹಜ ದಾನಂ ಉತ್ಕೃಷ್ಟ ದಾನಂ’ ಎಂದು ಹೇಳಿರುವುದನ್ನು ಉಲ್ಲೇಖಿಸಿದ ಸ್ವಾಮೀಜಿ, ಸತ್ಕಾರ್ಯಗಳು ಹಾಗೂ ಧಾರ್ಮಿಕ ಕಾರ್ಯಗಳಿಗೆ ಮನಃಪೂರ್ವಕವಾಗಿ ದಾನ ನೀಡುವುದು ಅತ್ಯಂತ ಶ್ರೇಷ್ಠ ಕಾರ್ಯವೆಂದು ತಿಳಿಸಿದರು.
ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಉಲ್ಲಾಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ದುಂಡರಾಜಪ್ಪಗೌಡ, ಅರುಣ್, ಕುಬೇರಪ್ಪ ಕೃಷ್ಣಯ್ಯಶೆಟ್ಟಿ, ಜನಾರ್ಧನ್, ಪರಮೇಶ, ರಾಜು, ಜಿ.ಡಿ. ಮಲ್ಲಿಕಾರ್ಜುನ ಹಾಗೂ ನಾಗೇಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.