Headlines

ದೃಶ್ಯಂ ಸಿನಿಮಾ ಶೈಲಿಯಲ್ಲಿ ಕೊಲೆ ಪ್ರಕರಣ ; ತಾಯಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಕೆಲಸದವನ ಕಥೆ ಮುಗಿಸಿದ ಮಗ!

A murder case in the style of a Drishyam movie; The son finishes the story of a worker who had an illicit relationship with his mother!

ದೃಶ್ಯಂ ಸಿನಿಮಾ ಶೈಲಿಯಲ್ಲಿ ಕೊಲೆ ಪ್ರಕರಣ ; ತಾಯಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಕೆಲಸದವನ ಕಥೆ ಮುಗಿಸಿದ ಮಗ!

A murder case in the style of a Drishyam movie; The son finishes the story of a worker who had an illicit relationship with his mother!

A murder case in the style of a Drishyam movie; The son finishes the story of a worker who had an illicit relationship with his mother!

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೆನ್ನಟ್ಟಿ ಪಿ.ಎ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದು ‘ದೃಶ್ಯಂ’ ಸಿನಿಮಾ ಶೈಲಿಯಲ್ಲಿ ನಡೆದಿರುವುದು ಆರು ತಿಂಗಳ ಬಳಿಕ ಬಯಲಾಗಿದೆ. ಅನೈತಿಕ ಸಂಬಂಧದ ಶಂಕೆಯಿಂದ ನಡೆದ ಈ ಹತ್ಯೆಯ ರಹಸ್ಯವನ್ನು ಪೊಲೀಸರು ಬ್ರೇನ್ ಮ್ಯಾಪಿಂಗ್ ಹಾಗೂ ಪಾಲಿಗ್ರಾಫ್ ಪರೀಕ್ಷೆಗಳ ಮೂಲಕ ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಜಮೀನು ಯಜಮಾನಿ ಮಲ್ಲಮ್ಮ ಹಾಗೂ ಕೆಲಸದಾಳು ಮಹಾದೇವಪ್ಪ ನಡುವೆ ಅಕ್ರಮ ಸಂಬಂಧವಿದೆ ಎಂಬ ಅನುಮಾನದಿಂದ ಮಲ್ಲಮ್ಮಳ ಮಗ ಅಪ್ಪುಗೌಡ ಮಹಾದೇವಪ್ಪನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಕಳೆದ ಮೇ 31ರಂದು ಮಹಾದೇವಪ್ಪ ಮಲ್ಲಮ್ಮಳ ಜತೆಗೆ ಸಿಕ್ಕಿಬಿದ್ದಿದ್ದ ವೇಳೆ, ಕೋಪೋದ್ರೇಕಗೊಂಡ ಅಪ್ಪುಗೌಡ ಕಟ್ಟಿಗೆಯಿಂದ ತಲೆಗೆ ಹೊಡೆದು ಸ್ಥಳದಲ್ಲೇ ಮಹಾದೇವಪ್ಪನನ್ನು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.

ಕೊಲೆ ಬಳಿಕ ಮಲ್ಲಮ್ಮ ಹಾಗೂ ಆಕೆಯ ಗಂಡ ಸಿದ್ದನಗೌಡನ ಸಹಾಯದಿಂದ ಶವವನ್ನು ಬೇರೆ ಜಮೀನೊಂದರ ಮುಳ್ಳುಕಂಟಿಯಲ್ಲಿ ಎಸೆದು ಪರಾರಿಯಾಗಲು ಯತ್ನಿಸಿದ್ದರು. ನಾಲ್ಕು ದಿನಗಳ ಬಳಿಕ ಮಹಾದೇವಪ್ಪನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆರಂಭದಲ್ಲಿ ಸಹಜ ಸಾವು ಎಂದು ಶಂಕಿಸಲಾಗಿತ್ತು. ಆದರೆ ಶವಪರೀಕ್ಷೆ ವರದಿಯಲ್ಲಿ ಇದು ಹಲ್ಲೆಯಿಂದ ನಡೆದ ಕೊಲೆ ಎಂಬುದು ದೃಢಪಟ್ಟಿತ್ತು.

ಆರೋಪಿಗಳು ಯಾರಿಗೂ ಅನುಮಾನ ಬಾರದಂತೆ ವರ್ತಿಸಲು ಮುಂಚಿತವಾಗಿಯೇ ಯೋಜನೆ ರೂಪಿಸಿದ್ದರು. ಮೊಬೈಲ್ ಬಳಕೆ ಮಾಡಬಾರದು, ಊರು ಬಿಡಬಾರದು ಹಾಗೂ ಕೊಲೆ ವಿಷಯವನ್ನು ದಿನನಿತ್ಯವೂ ಊರಿನವರೊಂದಿಗೆ ಚರ್ಚಿಸುವ ಮೂಲಕ ‘ಅಮಾಯಕ’ ಭಾವನೆ ಮೂಡಿಸಬೇಕು ಎಂದು ಅಪ್ಪುಗೌಡ ಮನೆಯವರಿಗೆ ಸೂಚಿಸಿದ್ದಾನೆ ಎಂಬ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸರ್ವೇಯರ್ ಹುದ್ದೆಯಲ್ಲಿರುವ ಅಪ್ಪುಗೌಡ ಸಾಕ್ಷ್ಯ ನಾಶಪಡಿಸುವಲ್ಲಿ ಚಾಣಾಕ್ಷತನ ತೋರಿದ್ದರಿಂದ ಪ್ರಕರಣ ಜಟಿಲವಾಗಿತ್ತು.

ಪ್ರಕರಣದ ಸುಳಿವು ಸಿಗದ ಹಿನ್ನೆಲೆ, ಎಸ್‌ಪಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ವಿಶೇಷ ತನಿಖೆ ಕೈಗೊಳ್ಳಲಾಗಿತ್ತು. ಕೊಲೆಯಾದ ಮಹಾದೇವಪ್ಪನ ಕುಟುಂಬದ ಸದಸ್ಯರು ಹಾಗೂ ಮಲ್ಲಮ್ಮ, ಆಕೆಯ ಪುತ್ರ ಅಪ್ಪುಗೌಡ ಮತ್ತು ಪತಿ ಸಿದ್ದನಗೌಡರನ್ನು ಬ್ರೇನ್ ಮ್ಯಾಪಿಂಗ್ ಮತ್ತು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ.

ಪರೀಕ್ಷೆಗಳ ಫಲಿತಾಂಶದ ಆಧಾರದಲ್ಲಿ ಅಪ್ಪುಗೌಡ, ಮಲ್ಲಮ್ಮ ಮತ್ತು ಶವ ಸಾಗಾಟಕ್ಕೆ ನೆರವಾದ ಸಿದ್ದನಗೌಡರನ್ನು ಪೊಲೀಸರು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಸಿಕ್ಕಿಬಿದ್ದದ್ದು ಹೇಗೆ?

ಒಂದು ಹಂತದಲ್ಲಿ ಮಹಾದೇವಪ್ಪ ತನ್ನದೆ ಮಗನಿಂದಲೇ ಕೊಲೆಯಾಗಿದ್ದಾನೆ ಎಂದು ಪೊಲೀಸರಿಗೆ ಸಂಶಯ ಮೂಡುವಂತೆಯೂ ಅಪ್ಪುಗೌಡ ವರ್ತಿಸಿದ್ದ. ಹೀಗಾಗಿ ಜಟಿಲವಾಗಿದ್ದ ಕೇಸ್ ತಮ್ಮ ಸುಪರ್ದಿಗೆ ಪಡೆದ ಎಸ್​​ಪಿ ಲಕ್ಷ್ಮಣ ನಿಂಬರಗಿ ಕೊಲೆಯಾದ ಮಹಾದೇವಪ್ಪ ಕುಟುಂಬ ಹಾಗೂ ಮಹಾದೇವಪ್ಪ‌ ಕೆಲಸ‌ ಮಾಡುತ್ತಿದ್ದ ಯಜಮಾನಿ ಮಲ್ಲಮ್ಮ, ಆಕೆ ಪುತ್ರ ಅಪ್ಪುಗೌಡ, ಹಾಗೂ ಆಕೆ ಗಂಡ ಸಿದ್ದನಗೌಡ ಬ್ರೇನ್ ಮ್ಯಾಪಿಂಗ್ ಹಾಗೂ ಪಾಲಿಗ್ರಾಫ್‌ ಟೆಸ್ಟ್ ಮಾಡಿಸುವ ಮೂಲಕ ಪ್ರಕರಣ ಬಯಲಿಗೆ ಎಳೆದಿದ್ದಾರೆ.

ಬ್ರೇನ್ ಮ್ಯಾಪಿಂಗ್ ವೇಳೆ ಅಪ್ಪುಗೌಡ, ಜಮೀನು ಯಜಮಾನಿ ಮಲ್ಲಮ್ಮ, ಆಕೆ ಗಂಡ ಸಿದ್ದನಗೌಡ ಆರೋಪಿಗಳು ಅನ್ನೋದು ಪತ್ತೆಯಾಗಿದೆ. ಕಳೆದ ಮೇ 31 ರಂದು ಮಹಾದೇವಪ್ಪ ಮಲ್ಲಮ್ಮಳ ಜತೆಗೆ ಸಿಕ್ಕಿ ಬಿದ್ದಿದ್ದನು. ಆಗ ಸಿಟ್ಟಿನಲ್ಲಿ ಅಪ್ಪುಗೌಡ ಕಟ್ಟಿಗೆಯಿಂದ ಮಹಾದೇವಪ್ಪ ಮೇಲೆ ತಲೆ ಹಲ್ಲೆ ನಡೆಸಿದಾಗ ಆತ ಸ್ಥಳದಲ್ಲೆ ಪ್ರಾಣ ಬಿಟ್ಟಿದ್ದ‌, ಈ ಕೊಲೆ ಮುಚ್ಚಿ ಹಾಕೋದಕ್ಕೆ ಅಪ್ಪುಗೌಡ ಸಿನಿಮಾ ಸ್ಟೈಲ್ ನಲ್ಲಿ ಸ್ಕೆಚ್ ಹಾಕಿದ್ದ. ಆದರೆ ಇದೀಗ ಕೊನೆಗೂ ಹಂತಕ ಅಪ್ಪುಗೌಡ , ತಾಯಿ ಮಲ್ಲಮ್ಮ ಹಾಗೂ ಶವ ಸಾಗಾಟ ಮಾಡಲು ನೆರವಾಗಿದ್ದ ತಂದೆ ಸಿದ್ದನಗೌಡನನ್ನು ಪೊಲೀಸರು ಬಂಧಿಸಿದ್ದಾರೆ.