Zonal forest officials have arrested a man in an operation on charges of illegally hunting and butchering wild boars on a farm.
ಕಾಡುಹಂದಿಯ ಅಕ್ರಮ ಬೇಟೆ: 64 ಕೆಜಿ ಮಾಂಸ ವಶ, ಓರ್ವ ವಶಕ್ಕೆ
Zonal forest officials have arrested a man in an operation on charges of illegally hunting and butchering wild boars on a farm.

ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ಬಾಳೆಕೊಪ್ಪದ ಜಮೀನಿನಲ್ಲಿ ಕಾಡುಹಂದಿಯನ್ನು ಅಕ್ರಮವಾಗಿ ಬೇಟೆ ಮಾಡಿ ಮಾಂಸ ಮಾಡುತ್ತಿದ್ದ ಆರೋಪದ ಮೇಲೆ ಆಯನೂರು ವಲಯ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಬಾಳೆಕೊಪ್ಪದ ಕೃಷ್ಣ, ಶಿವು, ಹುಚ್ಚರಾಯ ಹಾಗೂ ರವಿ ಎಂಬವರು ಕಾಡುಹಂದಿ ಬೇಟೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು,其中 ಕೃಷ್ಣನನ್ನು ಅರಣ್ಯ ಇಲಾಖೆ ಬಂಧಿಸಿದೆ. ಬಂಧಿತನಿಂದ ಸುಮಾರು 64 ಕೆಜಿ ಕಾಡುಹಂದಿ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಕೃಷ್ಣನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಡಿಸಿಎಫ್ ಅಜ್ಜಯ್ಯ ಹಾಗೂ ಎಸಿಎಫ್ ವಿಜಯ್ ಗಿರಿತಮ್ಮಣ್ಣ ಅವರ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ವಿನೋದ್ ಅಂಗಡಿ, ಡಿವೈಆರ್‌ಎಫ್‌ಒ ಕಿರಣ್ ಕುಮಾರ್, ಬೀಟ್ ಫಾರೆಸ್ಟ್ ಮಂಜುನಾಥ್ ಹಾಗೂ ಕಚೇರಿ ಡಿವೈಆರ್‌ಎಫ್ ಮಂಜುನಾಥ್ ಅವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.