Headlines

ಬೊಲೇರೋ ಪಲ್ಟಿ: ಮಹಿಳೆ ಮೃತ್ಯು, 13 ಮಂದಿಗೆ ಗಾಯ

ಬೊಲೇರೋ ಪಲ್ಟಿ: ಮಹಿಳೆ ಮೃತ್ಯು, 13 ಮಂದಿಗೆ ಗಾಯ

It is said that around 14 people were travelling in the Bolero at the time of the accident, and all the people in the vehicle were injured. The injured were immediately admitted to the hospital. The body of the deceased Lakshmamma has been sent to the government hospital. The Bolero vehicle was completely crushed due to the force of the accident.

ಭದ್ರಾವತಿ: ಚಾಲಕನ ನಿಯಂತ್ರಣ ತಪ್ಪಿ ಬೊಲೇರೋ ವಾಹನ ಪಲ್ಟಿಯಾದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಭದ್ರಾವತಿಯ ದೊಡ್ಡೇರಿ ಸಮೀಪದ ನೆಟ್ಟಗಲಟ್ಟಿ ಗ್ರಾಮದ ನಿವಾಸಿ ಲಕ್ಷ್ಮಮ್ಮ (48) ಮೃತರು. ಗಾಜನೂರು ಸಮೀಪದ ನರ್ಸರಿಯಲ್ಲಿ ಕೆಲಸ ಮುಗಿಸಿಕೊಂಡು ಬೊಲೇರೋ ವಾಹನದಲ್ಲಿ ಮನೆಗೆ ಮರಳುವ ವೇಳೆ, ಭದ್ರಾವತಿಯ ಬಿಸಿಲುಮನೆ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಲಕ್ಷ್ಮಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದ ವೇಳೆ ಬೊಲೇರೋದಲ್ಲಿ ಸುಮಾರು 14 ಮಂದಿ ಪ್ರಯಾಣಿಸುತ್ತಿದ್ದರೆಂದು ಹೇಳಲಾಗಿದ್ದು, ವಾಹನದಲ್ಲಿದ್ದ ಎಲ್ಲರೂ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಲಕ್ಷ್ಮಮ್ಮ ಅವರ ಮೃತದೇಹವನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ರಭಸಕ್ಕೆ ಬೊಲೇರೋ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.

ಘಟನೆಯ ಕುರಿತು ಭದ್ರಾವತಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.