Headlines

ಎಂಗೇಜ್‌ಮೆಂಟ್‌ಗೆ ತೆರಳಿದ್ದ ತಾಯಿ–ಮಗಳು ನಾಪತ್ತೆ | ಮಾಹಿತಿ ನೀಡುವಂತೆ ಪೊಲೀಸರ ಮನವಿ

ಎಂಗೇಜ್‌ಮೆಂಟ್‌ಗೆ ತೆರಳಿದ್ದ ತಾಯಿ–ಮಗಳು ನಾಪತ್ತೆ | ಮಾಹಿತಿ ನೀಡುವಂತೆ ಪೊಲೀಸರ ಮನವಿ

If you have any information about this mother-daughter duo, please contact the Shivamogga Rural Police Station in person or by calling 08182-261400 / 261418 / 9480803332 / 9480803350.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್‌ 03 ರಂದು ಎಂಗೇಜ್‌ಮೆಂಟ್‌ಗೆಂದು ಮನೆಯಿಂದ ಹೊರಟಿದ್ದ ತಾಯಿ ಮತ್ತು ಮಗಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ನಾಪತ್ತೆಯಾದವರ ಕುರಿತು ಮಾಹಿತಿ ದೊರೆತಲ್ಲಿ ತಿಳಿಸುವಂತೆ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಗೆ, ಚಿಲಕಾದ್ರಿ ನಿವಾಸಿ ಅವಿನಾಶ್ ಅವರ ಪತ್ನಿ 32 ವರ್ಷದ ವೀಣಾ ಅವರು ತಮ್ಮ 7 ವರ್ಷದ ಮಗಳು ಚೈತನ್ಯಳನ್ನು ಕರೆದುಕೊಂಡು ಡಿ.03ರಂದು ಎಂಗೇಜ್‌ಮೆಂಟ್‌ಗೆ ತೆರಳಿದ್ದು, ಇದುವರೆಗೂ ಮನೆಗೆ ವಾಪಸ್ ಆಗಿಲ್ಲ.

ವೀಣಾ ಅವರ ಚಹರೆ:

5 ಅಡಿ ಎತ್ತರ, ದುಂಡು ಮುಖ, ಬಿಳಿ ಮೈಬಣ್ಣ, ದೃಢಕಾಯ ಮೈಕಟ್ಟು ಹೊಂದಿದ್ದಾರೆ. ಎಡ ಕಣ್ಣಿನ ಹುಬ್ಬಿನ ಹತ್ತಿರ ಕಪ್ಪು ಮಚ್ಚೆ ಇರುತ್ತದೆ. ಮನೆಯಿಂದ ಹೊರಡುವಾಗ ಆಕಾಶ್ ನೀಲಿ ಬಣ್ಣದ ಡ್ರೆಸ್ ಧರಿಸಿದ್ದರು. ಕನ್ನಡ ಭಾಷೆ ಮಾತನಾಡುತ್ತಾರೆ.

ಚೈತನ್ಯಾಳ ಚಹರೆ:

3.5 ಅಡಿ ಎತ್ತರ, ಕೋಲು ಮುಖ, ಬಿಳಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ನೀಲಿ ಬಣ್ಣದ ಫ್ರಾಕ್ ಧರಿಸಿದ್ದಾಳೆ.

ಈ ತಾಯಿ–ಮಗಳ ಬಗ್ಗೆ ಯಾವುದೇ ಸುಳಿವು ದೊರೆತಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಖುದ್ದಾಗಿ ಅಥವಾ ದೂ.ಸಂ.: 08182-261400 / 261418 / 9480803332 / 9480803350 ಅನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.