POSTMANNEWS

ನೈಜ ಸುದ್ದಿ ನೇರ ಬಿತ್ತರ..

ಮಾಧ್ಯಮ ವರದಿಗೆ ಸ್ಪಂದನೆ – ಅರಸಾಳುವಿನ ವೃದ್ಧ ವೇಲಾಯುಧನ್ ಮನೆಗೆ ತಹಶೀಲ್ದಾರ್ ಭೇಟಿ

ಮಾಧ್ಯಮ ವರದಿಗೆ ಸ್ಪಂದನೆ – ಅರಸಾಳುವಿನ ವೃದ್ಧ ವೇಲಾಯುಧನ್ ಮನೆಗೆ ತಹಶೀಲ್ದಾರ್ ಭೇಟಿ

After a media report revealed that elderly Velayudhan, who has been living in a hut for the past 30 years, has not been provided with any basic amenities including a house, drinking water, and electricity, the Tahsildar went to the spot and directly observed the situation. The officials collected information about the miserable living conditions in the hut, the shortage of water and electricity, and the condition of the elderly suffering from age-related ailments.

ರಿಪ್ಪನ್ ಪೇಟೆ : ಇಲ್ಲಿನ ಅರಸಾಳು ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ಯಾವುದೇ ಮೂಲಭೂತ ಸೌಕರ್ಯವಿಲ್ಲದೇ ಕತ್ತಲಲ್ಲಿ ಜೀವನ ಸಾಗಿಸುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗೆ ತಕ್ಷಣ ಸ್ಪಂದಿಸಿರುವ ತಾಲ್ಲೂಕು ಆಡಳಿತ, ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೃದ್ಧ ವೇಲಾಯುಧನ್ ಅವರ ಮನೆಗೆ ತಹಶೀಲ್ದಾರ್ ಭರತ್ ರಾಜ್ ದಿಢೀರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಕಳೆದ 30 ವರ್ಷಗಳಿಂದ ಗುಡಿಸಿಲಿನಲ್ಲಿ ವಾಸಿಸುತ್ತಿರುವ ವೃದ್ಧ ವೇಲಾಯುಧನ್ ಅವರಿಗೆ ಮನೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳು ಸಿಗದಿರುವುದು ಮಾಧ್ಯಮ ವರದಿಯಲ್ಲಿ ಬಹಿರಂಗವಾದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ನೇರವಾಗಿ ಅವಲೋಕಿಸಿದರು. ಗುಡಿಸಿಲಿನಲ್ಲಿರುವ ದಯನೀಯ ಜೀವನ ಪರಿಸ್ಥಿತಿ, ನೀರು–ವಿದ್ಯುತ್ ಕೊರತೆ, ವಯೋಸಹಜ ಅಸೌಖ್ಯಗಳಿಂದ ಬಳಲುತ್ತಿರುವ ವೃದ್ಧರ ಸ್ಥಿತಿ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದರು.

ಸ್ಥಳ ಪರಿಶೀಲನೆಯ ಬಳಿಕ ತಹಶೀಲ್ದಾರ್ ಅವರು ತಾಲ್ಲೂಕು ಆಡಳಿತದ ವತಿಯಿಂದ ವೃದ್ಧರಿಗೆ ಸಿಗಬೇಕಾದ ಮನೆ, ಕುಡಿಯುವ ನೀರು ಹಾಗೂ ವಿದ್ಯುತ್ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಶೀಘ್ರವಾಗಿ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ತಾಂತ್ರಿಕ ಅಡಚಣೆಗಳು ಮತ್ತು ಬಗರ್ ಹುಕುಂ ಸಮಸ್ಯೆಗಳನ್ನೂ ಪರಿಶೀಲಿಸಿ ಪರಿಹಾರ ಕಂಡುಕೊಳ್ಳುವ ಭರವಸೆಯನ್ನೂ ನೀಡಿದರು.

ಈ ವೇಳೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಸೂಚನೆಯ ಮೇರೆಗೆ ಅವರ ಆಪ್ತ ಕಾರ್ಯದರ್ಶಿ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಣ್ಣಕ್ಕಿ ಮಂಜು ವೃದ್ಧ ವೇಲಾಯುಧನ್ ಅವರಿಗೆ ಆರ್ಥಿಕ ನೆರವು ನೀಡಿ ಮಾನವೀಯ ಸ್ಪಂದನೆ ತೋರಿದರು.

ಮಾಧ್ಯಮದ ವರದಿಯಿಂದ ಆಡಳಿತ ಯಂತ್ರ ಚುರುಕುಗೊಂಡಿರುವುದು ಗ್ರಾಮೀಣ ಭಾಗದ ವಂಚಿತರಿಗೆ ಹೊಸ ಆಶಾಕಿರಣ ಮೂಡಿಸಿದೆ.

ಈ ಬಗ್ಗೆ ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿ

About The Author