ಯುವಕನಿಗೆ ಚಾಕು ಇರಿತ ಪ್ರಕರಣ: ಮೂವರು ಆರೋಪಿಗಳ ಬಂಧನ
Syed Barkat (32), who was injured while working at a mobile shop, was stabbed by unknown persons who came on a bike. The SP informed the media that Dadapir had provided the knife used in the stabbing.
ಶಿವಮೊಗ್ಗ: ಬಿಹೆಚ್ ರಸ್ತೆಯಲ್ಲಿರುವ ಎಸ್‌ಎಎಸ್ ಕಲೆಕ್ಷನ್ ಮೊಬೈಲ್ ಶಾಪ್‌ಗೆ ನುಗ್ಗಿ ಯುವಕನಿಗೆ ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮೊಹಮ್ಮದ್ ಶಹಬಾಜ್ (22), ಆಕಾಶ್ (20) ಹಾಗೂ ದಾದಪೀರ್ ಎಂದು ಗುರುತಿಸಲಾಗಿದೆ.
ಮೊಬೈಲ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಗಾಯಗೊಂಡ ಸೈಯದ್ ಬರ್ಕತ್ (32) ಅವರನ್ನು ಬೈಕಿನಲ್ಲಿ ಬಂದ ಪರಿಚಿತ ವ್ಯಕ್ತಿಗಳು ಚಾಕುವಿನಿಂದ ಇರಿದಿದ್ದರು. ಇರಿತಕ್ಕೆ ಬಳಸಿದ ಚಾಕುವನ್ನು ದಾದಪೀರ್ ಒದಗಿಸಿದ್ದಾನೆ ಎಂದು ಎಸ್ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಘಟನೆಗೆ ವೈಯಕ್ತಿಕ ವೈಷಮ್ಯ ಕಾರಣವಾಗಿದ್ದು, ಆರೋಪಿಗಳು ಮತ್ತು ಗಾಯಾಳು ಪರಸ್ಪರ ಪರಿಚಿತರಾಗಿದ್ದಾರೆ. ಈ ಘಟನೆಯಲ್ಲಿ ಸೈಯದ್ ಬರ್ಕತ್ ಅವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಪ್ರಾಣಾಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.