The true colors of the fraudsters are revealed when they go to withdraw the money after investing it. They harass the victims by giving various excuses like the money is under SEBI control, tax paid, in RD account or broker charges paid. Finally, when they could not withdraw the money and after inquiring among their acquaintances, the victims realized that they had been cheated.
ಟ್ರೇಡಿಂಗ್ ಹೆಸರಿನಲ್ಲಿ ಶಿವಮೊಗ್ಗದ ವ್ಯಕ್ತಿಗೆ 4.90 ಲಕ್ಷ ರೂ. ವಂಚನೆ
A person from Shivamogga was cheated of Rs 4.90 lakh in the name of trading.
ಶಿವಮೊಗ್ಗ : ಸೈಬರ್ ವಂಚಕರು ಟ್ರೇಡಿಂಗ್ ಹೆಸರಿನಲ್ಲಿ ಹಣ ಹೂಡಿಕೆ ಮಾಡಲು ಹೇಳಿ ಹಣ ಹೂಡಿಕೆ ಮಾಡಿದ ನಂತರ ವಿವಿಧ ಕಾರಣಗಳನ್ನು ನೀಡಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 4.90 ಲಕ್ಷ ರೂಪಾಯಿ ಹಣವನ್ನು ವಂಚಿಸಲಾಗಿದೆ.
ಈ ಹಿನ್ನೆಲೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಂಚಕರು ಮೊದಲು ಹರ್ನಿಶ್ ಮಹೇಶ್ ಶುಕ್ಲಾ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡು, ‘Indiaboltplus’ ಮತ್ತು ‘BR JALAN SECURITIES’ ಕಂಪನಿಯ ಹೆಸರನ್ನು ಬಳಸಿಕೊಂಡು ದೂರುದಾರರನ್ನು ನಂಬಿಸಿದ್ದರು. ಪ್ರತಿದಿನ ಮಧ್ಯಾಹ್ನ ಮತ್ತು ಸಂಜೆ ನಿಗದಿತ ಸಮಯದಲ್ಲಿ ವಾಟ್ಸಾಪ್ ಗ್ರೂಪ್‌ಗಳ ಮೂಲಕ ಟ್ರೇಡಿಂಗ್ ಬಗ್ಗೆ ತರಬೇತಿ ನೀಡುವ ನಾಟಕವಾಡುತ್ತಿದ್ದರು. ಇದನ್ನು ನಿಜವೆಂದು ನಂಬಿದ ಸಂತ್ರಸ್ತರು, ವಂಚಕರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ-ಹಂತವಾಗಿ NEFT ಮತ್ತು RTGS ಮೂಲಕ ಒಟ್ಟು 4,90,000 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದರು.
ಹಣ ಹೂಡಿಕೆ ಮಾಡಿದ ನಂತರ ಅದನ್ನು ಹಿಂಪಡೆಯಲು ಹೋದಾಗ ವಂಚಕರ ಅಸಲಿ ಬಣ್ಣ ಬಯಲಾಗಿದೆ. ಹಣವು ಸೆಬಿಯ ನಿಯಂತ್ರಣದಲ್ಲಿದೆ, ಟ್ಯಾಕ್ಸ್ ಪಾವತಿಸಿ, ಆರ್.ಡಿ ಅಕೌಂಟ್‌ನಲ್ಲಿದೆ ಅಥವಾ ಬ್ರೋಕರ್ ಚಾರ್ಜ್ ಪಾವತಿಸಿ ಎಂದು ಬೇರೆ ಬೇರೆ ನೆಪಗಳನ್ನು ಹೇಳಿ ಹಣ ನೀಡದೆ ಸತಾಯಿಸಿದ್ದಾರೆ. ಕೊನೆಗೆ ಹಣ ವಿತ್‌ಡ್ರಾ ಮಾಡಲು ಸಾಧ್ಯವಾಗದಿದ್ದಾಗ ಮತ್ತು ಪರಿಚಿತರಲ್ಲಿ ವಿಚಾರಿಸಿದಾಗ ತಾವು ಮೋಸ ಹೋಗಿರುವುದು ಸಂತ್ರಸ್ತರಿಗೆ ಅರಿವಾಗಿದೆ.
ಈ ಹಿನ್ನೆಲೆ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.