Headlines

ಹೊಸನಗರದಲ್ಲಿ ಈಡಿಗ ಸಮುದಾಯದ ಬಹುದಿನಗಳ ಕನಸು ನನಸು: ವಿದ್ಯಾರ್ಥಿ ನಿಲಯ ಕಟ್ಟಡಕ್ಕೆ ಡಿ.26ರಂದು ಶಂಕುಸ್ಥಾಪನೆ

The long-held dream of the Ediga community in Hosanagara is coming true: Foundation stone for the student hostel building to be laid on December 26th

ಹೊಸನಗರದಲ್ಲಿ ಈಡಿಗ ಸಮುದಾಯದ ಬಹುದಿನಗಳ ಕನಸು ನನಸು: ವಿದ್ಯಾರ್ಥಿ ನಿಲಯ ಕಟ್ಟಡಕ್ಕೆ ಡಿ.26ರಂದು ಶಂಕುಸ್ಥಾಪನೆ

The long-held dream of the Ediga community in Hosanagara is coming true: Foundation stone for the student hostel building to be laid on December 26th

ಹೊಸನಗರ: ತಾಲೂಕು ಆರ್ಯ ಈಡಿಗರ ಸಂಘ ಹಾಗೂ ದೀವರ ವಿದ್ಯಾವರ್ಧಕ ಸಂಘ (ರಿ), ಹೊಸನಗರ ಇವರ ಆಶ್ರಯದಲ್ಲಿ ಈಡಿಗ ಸಮುದಾಯದ ಬಹುದಿನಗಳ ಬೇಡಿಕೆಯಾಗಿದ್ದ ವಿದ್ಯಾರ್ಥಿ ನಿಲಯ (ವಿದ್ಯಾರ್ಥಿ ಭವನ) ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮವು ಡಿಸೆಂಬರ್ 26, 2025 (ಶುಕ್ರವಾರ) ರಂದು ಹೊಸನಗರದಲ್ಲಿ ನಡೆಯಲಿದೆ.

ಈ ಮಹತ್ವದ ಕಾರ್ಯಕ್ರಮವನ್ನು ಸಾಗರ–ಹೊಸನಗರ ಕ್ಷೇತ್ರದ ಶಾಸಕರಾದ ಬೇಲೂರು ಗೋಪಾಲಕೃಷ್ಣ ಅವರು ನೆರವೇರಿಸಲಿದ್ದಾರೆ. ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣ ಹಿತದೃಷ್ಟಿಯಿಂದ ಸರ್ಕಾರದಿಂದ ಮೊದಲ ಹಂತವಾಗಿ 40 ಲಕ್ಷ ರೂಪಾಯಿ ಅನುದಾನವನ್ನು ಮಂಜೂರು ಮಾಡಿಸಿ ಕಾಮಗಾರಿಗೆ ಚಾಲನೆ ನೀಡಿರುವುದಕ್ಕೆ ತಾಲ್ಲೂಕು ಆರ್ಯ ಈಡಿಗರ ಸಂಘ ಹಾಗೂ ದೀವರ ವಿದ್ಯಾವರ್ಧಕ ಸಂಘಗಳು ಶಾಸಕರಿಗೆ ಅಭಿನಂದನೆ ಸಲ್ಲಿಸಿವೆ.

ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ಬಂದು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕೊರತೆಯಿದ್ದ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿ ಭವನ ಅತ್ಯಂತ ಉಪಯುಕ್ತವಾಗಲಿದೆ. ಈ ಕುರಿತು ಮಾತನಾಡಿದ ಶಾಸಕರು, “ಈ ಕಟ್ಟಡ ನಿರ್ಮಾಣದಿಂದ ನಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಲಿದೆ. ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು” ಎಂದು ತಿಳಿಸಿದ್ದಾರೆ.

ಈ ವಿದ್ಯಾರ್ಥಿ ಭವನದ ಅಂದಾಜು ಒಟ್ಟು ವೆಚ್ಚ ಸುಮಾರು 2.5 ಕೋಟಿ ರೂಪಾಯಿ ಆಗಿರಲಿದೆ.

ಈಡಿಗ ಸಮುದಾಯದ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ಶಾಸಕರಿಗೆ ತಾಲೂಕಿನಾದ್ಯಂತ ಸಮುದಾಯದವರು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಡಿಸೆಂಬರ್ 26 ರಂದು ನಡೆಯುವ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.