A life insurance cheque worth Rs 10 lakh was distributed by the Indian Postal Department to the family of Keshava, a youth from Gonikere village who died in an electrical accident.
ವಿದ್ಯುತ್ ಅವಘಡದಲ್ಲಿ ಮೃತ ಯುವಕನ ಕುಟುಂಬಕ್ಕೆ 10 ಲಕ್ಷ ರೂ. ಜೀವ ವಿಮಾ ಚೆಕ್ ವಿತರಣೆ
A life insurance cheque worth Rs 10 lakh was distributed by the Indian Postal Department to the family of Keshava, a youth from Gonikere village who died in an electrical accident.

ರಿಪ್ಪನ್‌ಪೇಟೆ : ಇತ್ತೀಚೆಗೆ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಗೋಣಿಕೆರೆ ಗ್ರಾಮದ ಯುವಕ ಕೇಶವ ಅವರ ಕುಟುಂಬಕ್ಕೆ ಭಾರತೀಯ ಅಂಚೆ ಇಲಾಖೆಯಿಂದ 10 ಲಕ್ಷ ರೂ. ಮೊತ್ತದ ಜೀವ ವಿಮಾ ಚೆಕ್ ವಿತರಿಸಲಾಯಿತು. ಮಂಗಳವಾರ ಪಟ್ಟಣದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವಮೊಗ್ಗ ವಿಭಾಗೀಯ ಅಂಚೆ ಅಧೀಕ್ಷಕ ಕುಮಾರಸ್ವಾಮಿ ಅವರು ಮೃತರ ಕುಟುಂಬಕ್ಕೆ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯುತ್ ಗುತ್ತಿಗೆದಾರನ ಬಳಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಯುವಕ ಆಕಸ್ಮಿಕವಾಗಿ ವಿದ್ಯುತ್ ಪ್ರವಹದಿಂದ ಮೃತಪಟ್ಟಿದ್ದು, ಏಕೈಕ ಮಗನನ್ನು ಕಳೆದುಕೊಂಡ ಕುಟುಂಬ ಸಂಕಷ್ಟಕ್ಕೆ ಒಳಗಾಗಿದೆ ಎಂದರು. ಗುತ್ತಿಗೆದಾರ ದೇವರಾಜ ಅವರು ಕಾರ್ಮಿಕನ ಹೆಸರಿನಲ್ಲಿ ಜೀವ ವಿಮೆ ಮಾಡಿಸಿರುವುದು ಇದೀಗ ಕುಟುಂಬಕ್ಕೆ ನೆರವಾಗಿರುವುದು ಶ್ಲಾಘನೀಯ ಎಂದರು.
ಸಾರ್ವಜನಿಕರ ಒಳಿತಿಗಾಗಿ ಅಂಚೆ ಇಲಾಖೆಯಲ್ಲಿ ಆರೋಗ್ಯ ಹಾಗೂ ಅಪಘಾತ ವಿಮಾ ಸೇರಿದಂತೆ ಹಲವು ಯೋಜನೆಗಳಿದ್ದು, ಸುಲಭ ಕಂತುಗಳಲ್ಲಿ ವಿಮಾ ಸೌಲಭ್ಯ ಲಭ್ಯವಿದೆ. ಜೀವ ಅಮೂಲ್ಯವಾಗಿದ್ದು, ಅನಾಹುತಗಳ ಸಂದರ್ಭದಲ್ಲಿ ವಿಮೆ ಕುಟುಂಬದ ಆರ್ಥಿಕ ಭದ್ರತೆಗೆ ಸಹಕಾರಿಯಾಗುತ್ತದೆ. ಸಮೀಪದ ಅಂಚೆ ಕಚೇರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಉಪ ಅಂಚೆ ಅಧೀಕ್ಷಕ ಧನಂಜಯ, ವ್ಯವಸ್ಥಾಪಕ ಜಿತೇಶ್, ಸತೀಶ್, ಲೋಕೇಶ್, ಅಮಿತ್, ಬಿ.ಪಿ. ರಾಮಚಂದ್ರ, ಮಳವಳ್ಳಿ ದೇವರಾಜ, ನಿರೂಪ್, ಆಸಿಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.