Headlines

ವಿಜೃಂಭಣೆಯೊಂದಿಗೆ ಜರುಗಿದ ಶ್ರೀನಾಗೇಂದ್ರಸ್ವಾಮಿಯ ಕೂಳೆ ಪಂಚಮಿ ಜಾತ್ರೋತ್ಸವ

ವಿಜೃಂಭಣೆಯೊಂದಿಗೆ ಜರುಗಿದ ಶ್ರೀನಾಗೇಂದ್ರಸ್ವಾಮಿಯ ಕೂಳೆ ಪಂಚಮಿ ಜಾತ್ರೋತ್ಸವ

The Koole Panchami Jatra festival of the nearby historic Nagarahalli Sri Nagendraswamy temple was celebrated with great pomp and show.

ರಿಪ್ಪನ್‌ಪೇಟೆ : ಸಮೀಪದ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿಯ ಕೂಳೆ ಪಂಚಮಿ ಜಾತ್ರಾ ಮಹೋತ್ಸವವು ಸಂಭ್ರಮ ಸಡಗಡರದೊಂದಿಗೆ ವಿಜೃಂಭಣೆಯೊಂದಿಗೆ ನೆರವೇರಿತು.

ಇಂದು ಬೆಳಗ್ಗೆ ೬ ರಿಂದ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷಿನಾರಾಯಣ ಭಟ್ ಮತ್ತು ಕಿರಣ್‌ಭಟ್ ನೇತೃತ್ವದಲ್ಲಿ ಶ್ರೀ ನಾಗೇಂದ್ರಸ್ವಾಮಿಗೆ ಪಂಚಾಮೃತ ಅಭಿಷೇಕ ಪವಮಾನ ಪೂಜೆ ವಿಶೇಷ ಅಲಂಕಾರ ಪೂಜೆ  ಜರುಗಿತು.

ಶ್ರೀ ನಾಗೇಂದ್ರ ಸ್ವಾಮಿಯ ಕೂಳೆ ಪಂಚಮಿ ಜಾತ್ರಾ ಮಹೋತ್ಸವಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನಾಶೀರ್ವಾದ ಪಡೆದರು.

ದೇವಸ್ಥಾನ ಧರ್ಮದರ್ಶಿಗಳಾದ ಸತೀಶ್ ಮತ್ತು ಹೆಚ್.ಎಂ.ವರ್ತೇಶ್‌ಗೌಡರು ಸೇರಿದಂತೆ ಧರ್ಮದರ್ಶಿ ಸಮಿತಿಯವರು ಶಾಸಕ ಗೋಪಾಲಕೃಷ್ಣ ಬೇಳೂರರವರನ್ನು ಸನ್ಮಾನಿ ಗೌರವಿಸಿ ಸತ್ಕರಿಸಿದರು.ನಂತರ ಭಕ್ತಾಧಿಗಳಿಗೆ ಸಾಮೂಹಿಕ ಅನ್ನ ಸಂತರ್ಪಣೆ ಜರುಗಿತು.