Kenchanala | Demand for pedestrians to cross the railway village – Response to the request of the MLA
ಕೆಂಚನಾಲ | ರೈಲ್ವೆ ಹಳ್ಳಿ ದಾಟಲು ಪಾದಚಾರಿಗಳಿಗೆ ಅವಕಾಶಕ್ಕೆ ಅಗ್ರಹ – ಶಾಸಕರ ಮನವಿಗೆ ಸ್ಪಂದನೆ

Since there are Gram Panchayat offices, upon our request to leave a gap of 1 or 2 feet for pedestrians to walk at the place where the barrier is being built, we immediately contacted the Railway Department contractor over the phone and after convincing them of the issue, they responded and provided a solution to the problem.
ರಿಪ್ಪನ್‌ಪೇಟೆ;-ಸಮೀಪದ ತಾಳಗುಪ್ಪಾ-ಬೆಂಗಳೂರು ಸಂಪರ್ಕದ ಕೆಂಚನಾಲ ಬಳಿ ರೈಲ್ವೆ ಇಲಾಖೆಯವರು ಗ್ರಾಮಾಂತರ ಪ್ರದೇಶದ ಸಂಪರ್ಕ ರಸ್ತೆಯನ್ನು ಬಂದ್ ಮಾಡಲು ತಡೆಗೋಡೆ ನಿರ್ಮಿಸುತ್ತಿದ್ದು ಇದರಿಂದ ಶಾಲಾ ಮಕ್ಕಳು ಮತ್ತು ಸಾರ್ವನಿಕರು ಕೊಂಕಣಿ ಸುತ್ತಿ ಬರುಬೇಕಾದ ಅನಿವಾರ್ಯತೆ ಎದುರಾಗುತ್ತದೆಂದು ರೈಲ್ವೆ ಇಲಾಖೆಯವರಿಗೆ ತಡೆಗೋಡೆ ಮಾಡುವ ಮಧ್ಯದಲ್ಲಿ ಸ್ಪಲ್ಪ ಜಾಗ ಪಾದಚಾರಿಗಳಿಗೆ ಓಡಾಡಲು ಬಿಡಿ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದರು.
ಇವರ ಆಗ್ರಹಕ್ಕೆ ಮಣಿಯದೆ ಗುತ್ತಿಗೆದಾರ ಯಾವುದೇ ಕಾರಣಕ್ಕೂ ಜಾಗ ಬಿಡುವುದಿಲ್ಲ ಎಂದು ಹಠ ಹಿಡಿದಿದ್ದು ಆಗ ಖಾಸಗಿ ಕಾರ್ಯಕ್ರಮದ ನಿಮಿತ್ತ ಶಾಸಕ ಗೋಪಾಲಕೃಷ್ಣ ಬೇಳೂರು ಇದೇ ಮಾರ್ಗದಲ್ಲಿ ಬರುತ್ತಿದ್ದಾರೆಂಬ ಮಾಹಿತಿಯನ್ನಾದರಿಸಿ ಗ್ರಾಮಸ್ಥರು ಶಾಸಕರನ್ನು ತಡೆದು ಸ್ಥಳಕ್ಕೆ ಕರೆತಂದು ಇಲ್ಲಿ ಶಾಲೆ ಮತ್ತು ಗ್ರಾಮಪಂಚಾಯಿತಿ ಕಛೇರಿಗಳು ಇರುವುದರಿಂದ ನಮಗೆ ತಡೆಗೋಡೆ ಮಾಡುವ ಸ್ಥಳದಲ್ಲಿ ಪಾದಚಾರಿಗಳು ಓಡಾಡಲು 1 ಆಥವಾ 2 ಅಡಿ ಜಾಗ ಗ್ಯಾಪ್ ಬಿಡುವಂತೆ ಕೋರಿಕೊಂಡ ಮೇರೆಗೆ ತಕ್ಷಣ ರೈಲ್ವೆ ಇಲಾಖೆಯ ಗುತ್ತಿಗೆದಾರನಿಗೆ ದೂರವಾಣಿ ಮೂಲಕ ಸಂಪರ್ಕಿಸಿ ವಿಚಾರ ಮನವರಿಕೆ ಮಾಡಿದ ಮೇರೆಗೆ ಸ್ಪಂದಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕ್ ಪಂಚಾಯಿತ್ ಮಾಜಿ ಅಧ್ಯಕ್ಷ ವೀರೇಶ್ ಅಲವಳ್ಳಿ, ಕೆಂಚನಾಲ ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಉಬೇದುಲ್ಲಾ ಷರೀಫ್,ಇನ್ನಿತರ ನೂರಾರು ಗ್ರಾಮಸ್ಥರು ಹಾಜರಿದ್ದರು.