Headlines

SHIVAMOGGA | ಪೆಸಿಟ್ ಕಾಲೇಜು ಬಳಿ KSRTC ಬಸ್–ಬೈಕ್ ಅಪಘಾತ

SHIVAMOGGA | KSRTC bus-bike accident near Pesit College

SHIVAMOGGA | ಪೆಸಿಟ್ ಕಾಲೇಜು ಬಳಿ KSRTC ಬಸ್–ಬೈಕ್ ಅಪಘಾತ

SHIVAMOGGA | KSRTC bus-bike accident near Pesit College

ಶಿವಮೊಗ್ಗ: ನಗರದ ಪೆಸಿಟ್ ಕಾಲೇಜು ಸಮೀಪ KSRTC ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸಿರಿಗೆರೆ ಮೂಲದ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಗಳವಾರ ಸಂಜೆ ವರದಿಯಾಗಿದೆ.

ಇಂದು ಮಧ್ಯಾಹ್ನದಿಂದ ಸಂಜೆವರೆಗೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸುಮಾರು 8ರಿಂದ 10 ರಸ್ತೆ ಅಪಘಾತಗಳು ಸಂಭವಿಸಿದ್ದು, ಬಹುತೇಕ ಪ್ರಕರಣಗಳು ನಗರ ಪ್ರದೇಶದಲ್ಲೇ ನಡೆದಿವೆ. ಕೆಲ ಅಪಘಾತಗಳಲ್ಲಿ ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗಿದ್ದರೆ, ಇನ್ನೂ ಕೆಲವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಂಜೆ ಸುಮಾರು 4.30ರ ವೇಳೆಗೆ ಶಿವಮೊಗ್ಗದಿಂದ ಸಾಗರ ರಸ್ತೆಯತ್ತ ಹೊರಟಿದ್ದ KSRTC ಬಸ್‌ಗೆ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಯಿಂದ ಬೈಕ್ ಬಸ್ ಅಡಿ ಸಿಲುಕಿಕೊಂಡಿದ್ದು, ಬಸ್ ಕೂಡ ಡಿವೈಡರ್‌ಗೆ ಡಿಕ್ಕಿ ಹೊಡೆದು ನಿಂತಿದೆ. ಅಪಘಾತದ ಕ್ಷಣದಲ್ಲಿ ಬೈಕ್ ಸವಾರ ಸಮಯಕ್ಕೆ ಸರಿಯಾಗಿ ಬೈಕ್ ಬಿಟ್ಟು ಹಾರಿದ ಪರಿಣಾಮ ಗಂಭೀರ ಗಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.

ಅಪಘಾತ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.