Headlines

ನೈಜೀರಿಯಾ ಗಿಫ್ಟ್ ಹೆಸರಿನಲ್ಲಿ ವಂಚನೆ – 2.80 ಲಕ್ಷ ರೂ ಕಳೆದುಕೊಂಡ ವ್ಯಕ್ತಿ

Fraud in the name of Nigeria Gift – Man loses Rs 2.80 lakh

ನೈಜೀರಿಯಾ ಗಿಫ್ಟ್ ಹೆಸರಿನಲ್ಲಿ ವಂಚನೆ – 2.80 ಲಕ್ಷ ರೂ ಕಳೆದುಕೊಂಡ ವ್ಯಕ್ತಿ

A person from Shikaripur received a call from an unknown person, who introduced himself as an ‘officer from the Mumbai Customs Department’ and said that he had received a valuable gift from Nigeria. He assured him that he would have to pay service charges and taxes to release it.

ಶಿವಮೊಗ್ಗ: ಗಿಫ್ಟ್ ಬರಲಿದೆ ಎಂಬ ಆಸೆಯನ್ನು ಬಂಡವಾಳ ಮಾಡಿಕೊಂಡು ವಂಚಕರು ಶಿಕಾರಿಪುರದ ವ್ಯಕ್ತಿಯೊಬ್ಬರಿಂದ 2,80,590 ರೂ ಹಣವನ್ನು ಕಳೆಸಿರುವ ಘಟನೆ ಬೆಳಕಿಗೆ ಬಂದಿದೆ.

ಸೆಪ್ಟೆಂಬರ್ 26 ರಂದು ಶಿಕಾರಿಪುರದ ವ್ಯಕ್ತಿಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ಕರೆ ಮಾಡಿದವನು ತಾನು ‘ಮುಂಬೈ ಕಸ್ಟಮ್ಸ್ ಇಲಾಖೆಯ ಅಧಿಕಾರಿ’ ಎಂದು ಪರಿಚಯಿಸಿಕೊಂಡು ನಿಮಗೆ ನೈಜೀರಿಯಾದಿಂದ ಬೆಲೆಬಾಳುವ ಗಿಫ್ಟ್ ಬಂದಿದೆ. ಅದನ್ನು ಬಿಡುಗಡೆಗೊಳಿಸಲು ಸರ್ವೀಸ್ ಚಾರ್ಜ್ ಹಾಗೂ ತೆರಿಗೆ ಪಾವತಿಸಬೇಕೆಂದು ನಂಬಿಸಿದ್ದಾನೆ.

ವಂಚಕನ ಮಾತುಗಳನ್ನು ನಿಜವೆಂದು ನಂಬಿದ ದೂರುದಾರರು, ಮನೆಯವರೊಂದಿಗೆ ಚರ್ಚಿಸಿ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 2 ರವರೆಗೆ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 2,80,590 ರೂ ಹಣವನ್ನು ವರ್ಗಾಯಿಸಿದ್ದಾರೆ.

ಇಷ್ಟಕ್ಕೂ ತೃಪ್ತರಾಗದ ವಂಚಕರು, ನಂತರ ಮತ್ತೆ ಕರೆ ಮಾಡಿ ಸರ್ವೀಸ್ ಚಾರ್ಜ್ ಹೆಸರಿನಲ್ಲಿ ಇನ್ನೂ 2,95,499 ರೂ ಪಾವತಿಸುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ದೂರುದಾರರಿಗೆ ಅನುಮಾನ ಉಂಟಾಗಿ ಅಕ್ಕಪಕ್ಕದವರೊಂದಿಗೆ ವಿಚಾರಿಸಿದಾಗ ತಾವು ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ.


ಈ ಹಿಂದೆ ಶಿವಮೊಗ್ಗದ ಶ್ರೀರಾಮಪುರದ ಮಹಿಳೆಯೊಬ್ಬರಿಗೂ ಇದೇ ರೀತಿಯಲ್ಲಿ ಗಿಫ್ಟ್ ಆಸೆ ತೋರಿಸಿ 2.35 ಲಕ್ಷ ರೂ ವಂಚಿಸಲಾಗಿದ್ದ ಪ್ರಕರಣ ವರದಿಯಾಗಿತ್ತು. ಗಿಫ್ಟ್ ಹೆಸರಿನಲ್ಲಿ ನಡೆಯುತ್ತಿರುವ ಈ ರೀತಿಯ ವಂಚನೆಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಸಲಹೆ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.