Headlines

ANANDAPURA | ದೇವಸ್ಥಾನದ ಬೀಗ ಮುರಿದು ಬಂಗಾರದ ತಾಳಿ ಹಾಗೂ ನಗದು ದೋಚಿದ ಕಳ್ಳರು

ANANDAPURA | Thieves break temple lock, steal gold locket and cash

ANANDAPURA | ದೇವಸ್ಥಾನದ ಬೀಗ ಮುರಿದು ಬಂಗಾರದ ತಾಳಿ ಹಾಗೂ ನಗದು ದೋಚಿದ ಕಳ್ಳರು

ANANDAPURA | Thieves break temple lock, steal gold locket and cash

ಶಿವಮೊಗ್ಗ : ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಿರಗುಪ್ಪೆ ಗ್ರಾಮದಲ್ಲಿರುವ ಮಾರಿಕಾಂಬಾ ದೇವಾಲಯದಲ್ಲಿ ಕಳ್ಳತನ ಸಂಭವಿಸಿದೆ. ಡಿಸೆಂಬರ್ 22ರ ರಾತ್ರಿ ಈ ಘಟನೆ ನಡೆದಿದ್ದು, ದೇಗುಲದ ಬೀಗ ಮುರಿದು ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳನ್ನು ದೋಚಿದ್ದಾರೆ.

ಮರುದಿನ ಬೆಳಗ್ಗೆ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಲು ಬಂದ ಗ್ರಾಮದ ನಿವಾಸಿ ನಾರಾಯಣಗೌಡರು, ಮುಖ್ಯದ್ವಾರದ ಬೀಗ ಮುರಿದಿರುವುದನ್ನು ಗಮನಿಸಿದ್ದಾರೆ. ಕೂಡಲೇ ಒಳಗೆ ಪ್ರವೇಶಿಸಿ ಪರಿಶೀಲಿಸಿದಾಗ ಗರ್ಭಗುಡಿಯ ಬೀಗವನ್ನೂ ಒಡೆದು ಹಾಕಿರುವುದು ಬೆಳಕಿಗೆ ಬಂದಿದೆ.

ಕಳ್ಳರು ಗರ್ಭಗುಡಿಯಲ್ಲಿದ್ದ ಮಾರಿಕಾಂಬಾ ದೇವಿಯ ಕುತ್ತಿಗೆಯಲ್ಲಿದ್ದ 12ರಿಂದ 15 ಗ್ರಾಂ ತೂಕದ ಬಂಗಾರದ ತಾಳಿ ಸರದ ಗುಂಡುಗಳನ್ನು ಕಳವು ಮಾಡಿದ್ದಾರೆ. ಜೊತೆಗೆ ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿದ್ದ ಅಂದಾಜು 25 ಸಾವಿರ ರೂ. ನಗದು ಹಣವನ್ನು ಸಹ ದೋಚಿದ್ದಾರೆ. ಒಟ್ಟಾರೆ ಸುಮಾರು 1.35 ಲಕ್ಷ ರೂ. ಮೌಲ್ಯದ ಸ್ವತ್ತು ಕಳ್ಳತನವಾಗಿದೆ ಎಂದು ಅಂದಾಜಿಸಲಾಗಿದೆ.

ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.