RIPPONPETE | Ripponpete Police bring joy to those who lost their mobile phones a year ago
RIPPONPETE | ವರ್ಷದ ಹಿಂದೆ ಮೊಬೈಲ್ ಕಳೆದುಕೊಂಡವರ ಮೊಗದಲ್ಲಿ ಸಂತಸ ಮೂಡಿಸಿದ ರಿಪ್ಪನ್‌ಪೇಟೆ ಪೊಲೀಸರು


Based on the complaint filed with the CEIR, the Rippanpet police, who conducted an investigation, successfully located the mobile phone and handed it over to Nagaraj. The mobile phone, which was lost after years, has been returned, bringing immense joy to the owner of the mobile phone.
ರಿಪ್ಪನ್‌ಪೇಟೆ : ಕಳೆದ ಒಂದು ವರ್ಷದ ಹಿಂದೆ ಮೊಬೈಲ್ ಕಳೆದುಕೊಂಡು ನಿರಾಶರಾಗಿದ್ದ ಪಟ್ಟಣದ ವ್ಯಕ್ತಿಯೊಬ್ಬರಿಗೆ, ರಿಪ್ಪನ್‌ಪೇಟೆ ಪೊಲೀಸರ ಕಾರ್ಯಚರಣೆಯಿಂದ ಮತ್ತೆ ತಮ್ಮ ಮೊಬೈಲ್ ಕೈಗೆ ಬಂದಿದ್ದು, ಅವರ ಮೊಗದಲ್ಲಿ ಸಂತಸ ಮೂಡಿಸಿದೆ.
ಪಟ್ಟಣದ ನಾಗರಾಜ್ ಎಂಬವರು 30/08/2024 ರಂದು ತಮ್ಮ ವೀವೋ ಮೊಬೈಲ್ ಕಳೆದುಹೋಗಿರುವ ಬಗ್ಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೊಬೈಲ್ ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಐಆರ್ (CEIR) ಪೋರ್ಟಲ್‌ನಲ್ಲಿ ದೂರು ದಾಖಲಿಸಲಾಗಿದ್ದು, ಬಳಿಕ ಆ ದೂರು ಪಟ್ಟಣದ ಪೊಲೀಸ್ ಠಾಣೆಗೆ ಹಸ್ತಾಂತರಗೊಂಡಿತ್ತು.
ಸಿಇಐಆರ್‌ನಲ್ಲಿ ದಾಖಲಾಗಿದ್ದ ದೂರಿನ ಆಧಾರದಲ್ಲಿ ತನಿಖೆ ಕೈಗೊಂಡ ರಿಪ್ಪನ್‌ಪೇಟೆ ಪೊಲೀಸರು, ಮೊಬೈಲ್ ಅನ್ನು ಯಶಸ್ವಿಯಾಗಿ ಪತ್ತೆ ಹಚ್ಚಿ ನಾಗರಾಜ್ ಅವರಿಗೆ ಪಟ್ಟಣದ ಪಿಎಸೈ ರಾಜು ರೆಡ್ಡಿ ರವರು ಹಸ್ತಾಂತರಿಸಿದ್ದಾರೆ. ವರ್ಷಗಳ ನಂತರ ಕಳೆದುಕೊಂಡ ಮೊಬೈಲ್ ಮರಳಿ ದೊರೆತಿದ್ದು, ಮೊಬೈಲ್ ಮಾಲೀಕರಿಗೆ ಅಪಾರ ಸಂತಸ ತಂದಿದೆ.
ಈ ಸಂದರ್ಭ ಸಾರ್ವಜನಿಕರಿಗೆ ಸಲಹೆ ನೀಡಿದ ಪಿಎಸ್ಐ ರಾಜು ರೆಡ್ಡಿ ಅವರು, “ಮೊಬೈಲ್ ಕಳೆದುಕೊಂಡರೆ ಗಾಬರಿಯಾಗದೆ ತಕ್ಷಣ ಈ-ಲಾಸ್ಟ್ ಅಥವಾ ಸಿಇಐಆರ್ ಪೋರ್ಟಲ್‌ನಲ್ಲಿ ಅಗತ್ಯ ದಾಖಲೆಗಳೊಂದಿಗೆ ದೂರು ದಾಖಲಿಸಬೇಕು. ಇದರಿಂದ ಕಳುವಾದ ಮೊಬೈಲ್‌ಗಳನ್ನು ಟ್ರೇಸ್ ಮಾಡುವ ಸಾಧ್ಯತೆ ಹೆಚ್ಚಾಗುತ್ತದೆ. ಅಲ್ಲದೇ, ಇಂತಹ ಮೊಬೈಲ್‌ಗಳು ದುರುಪಯೋಗವಾಗದಂತೆ ತಡೆಯಲು ಸಹಕಾರಿಯಾಗುತ್ತದೆ. ಶೇ. 90ರಷ್ಟು ಮೊಬೈಲ್‌ಗಳನ್ನು ಪತ್ತೆಹಚ್ಚಲು ಸಾಧ್ಯವಿದೆ” ಎಂದು ತಿಳಿಸಿದ್ದಾರೆ.
ರಿಪ್ಪನ್‌ಪೇಟೆ ಪೊಲೀಸರ ಈ ಕಾರ್ಯಚರಣೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.