Headlines

ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಗುರುದತ್ತ ಹೆಗಡೆ ವರ್ಗಾವಣೆ – ನೂತನ ಡಿಸಿ ಆಗಿ ಫ್ರಭುಲಿಂಗ ಕವಳಿಕಟ್ಟಿ ನೇಮಕ

The government has appointed IAS officer Prabhulinga Kavalikatti to the post of Shivamogga District Commissioner vacated by the transfer of Dr. Gurudatta Hegde. He is currently serving as the Director of the Directorate of Municipal Administration, Karnataka.

ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಗುರುದತ್ತ ಹೆಗಡೆ ವರ್ಗಾವಣೆ – ನೂತನ ಡಿಸಿ ಆಗಿ ಫ್ರಭುಲಿಂಗ ಕವಳಿಕಟ್ಟಿ ನೇಮಕ

shivamogga-dc-gurudatta-hegde-transfer-prabhuling-kavalikatti

ಶಿವಮೊಗ್ಗ – ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಗುರುದತ್ತ ಹೆಗಡೆ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಡಿಸೆಂಬರ್ 31ರ ಬುಧವಾರ ಅಧಿಕೃತ ಆದೇಶ ಹೊರಡಿಸಿದೆ.

ಡಾ.ಗುರುದತ್ತ ಹೆಗಡೆ ಅವರಿಗೆ ಬಡ್ತಿ ನೀಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಮಿಷನರ್ ಹುದ್ದೆಗೆ ನಿಯೋಜನೆ ಮಾಡಲಾಗಿದೆ. ಅವರು 2024ರ ಫೆಬ್ರವರಿ 1ರಂದು ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಡಾ.ಗುರುದತ್ತ ಹೆಗಡೆ ಅವರ ವರ್ಗಾವಣೆಯಿಂದ ತೆರವಾದ ಶಿವಮೊಗ್ಗ ಜಿಲ್ಲಾಧಿಕಾರಿ ಹುದ್ದೆಗೆ ಐಎಎಸ್ ಅಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ಸರ್ಕಾರ ನೇಮಿಸಿದೆ. ಪ್ರಸ್ತುತ ಅವರು ಕರ್ನಾಟಕದ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಐಎಎಸ್ ಅಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಹಾಗೂ ಬೆಂಗಳೂರಿನಲ್ಲಿ ಉಪವಿಭಾಗಾಧಿಕಾರಿ ಸೇರಿದಂತೆ ಹಲವು ಪ್ರಮುಖ ಆಡಳಿತಾತ್ಮಕ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

Shivamogga DC transfer
Dr Gurudatta Hegde transfer
Shivamogga District Collector
Prabhuling Kavalikatti IAS
Shivamogga news Kannada
Karnataka IAS transfer
Shivamogga latest news
ಶಿವಮೊಗ್ಗ ಜಿಲ್ಲಾಧಿಕಾರಿ ವರ್ಗಾವಣೆ
ಪ್ರಭುಲಿಂಗ ಕವಳಿಕಟ್ಟಿ ಐಎಎಸ್