ಭದ್ರಾವತಿ ನಗರಸಭೆ ಕಾಂಗ್ರೆಸ್ ತೆಕ್ಕೆಗೆ :

ಭದ್ರಾವತಿ: ನಗರಸಭೆ ನೂತನ ಅಧ್ಯಕ್ಷರಾಗಿ ವಾರ್ಡ್ ನಂ.2 ರ ಸದಸ್ಯೆ ಗೀತಾ ರಾಜ್‌ಕುಮಾರ್ ಹಾಗು ಉಪಾಧ್ಯಕ್ಷರಾಗಿ ಚನ್ನಪ್ಪ ಆಯ್ಕೆಯಾಗಿದ್ದಾರೆ. ಶನಿವಾರ ನಡೆದ ಚುನಾವಣೆಯಲ್ಲಿ ಗೀತಾ ಕೆ.ಜಿ ರಾಜ್‌ಕುಮಾರ್ ಮತ್ತು ಚನ್ನಪ್ಪ ತಲಾ 8 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಗೀತಾ ಕೆ.ಜಿ ರಾಜ್‌ಕುಮಾರ್, ಜೆಡಿಎಸ್ ಪಕ್ಷದಿಂದ ವಾರ್ಡ್ ನಂ.15 ರ ಮಂಜುಳ ಬಿ.ಎಸ್ ಸುಬ್ಬಣ್ಣ ಹಾಗು ಬಿಜೆಪಿ ಪಕ್ಷದಿಂದ ವಾರ್ಡ್ ನಂ.5 ರ ಶಶಿಕಲಾ ಬಿ.ಎಸ್ ನಾರಾಯಣಪ್ಪ ಸ್ಪರ್ಧಿಸಿದ್ದು,…

Read More

ಭದ್ರಾವತಿ : ಕಡಜದ ಹುಳಗಳ ದಾಳಿಗೆ ಮತ್ತೋರ್ವ ರೈತ ಬಲಿ !

ಭದ್ರಾವತಿ: ಕಳೆದ ಕೆಲವು ದಿನಗಳ ಹಿಂದೆ ಕಡಜದ ಹುಳುಗಳ ದಾಳಿಯಿಂದ ಇಬ್ಬರು ಮೃತಪಟ್ಟಿದ್ದರು.ಇದೀಗ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿರುವ ಘಟನೆಸೋಮವಾರ ನಡೆದಿದೆ. ತಾಲೂಕಿನ ಉಕ್ಕುಂದ ಗ್ರಾಮದ ನಿವಾಸಿ ಕುಮಾರ್‌(38) ಮೃತಪಟ್ಟಿದ್ದು, ಇವರು ತಮ್ಮ ತೆಂಗಿನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಭಾನುವಾರ ಬೆಳಿಗ್ಗೆ ಕಡಜದ ಹುಳುಗಳು ದಾಳಿ ನಡೆಸಿವೆ. ತೀವ್ರ ಅಸ್ವಸ್ಥಗೊಂಡಿದ್ದ ಇವರನ್ನು ಶಿವಮೊಗ್ಗದ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Read More

ಭದ್ರಾವತಿ : ಗ್ರಾಮಾಂತರ ಪೊಲೀಸರ ಭರ್ಜರಿ ಕಾರ್ಯಾಚರಣೆ: ಸುಮಾರು 20 ಕೆ ಜಿ ಗಾಂಜಾ ವಶ

ಭದ್ರಾವತಿ : ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೊಂದಿ ಚೆಕ್ ಪೋಸ್ಟ್ ನಲ್ಲಿ  ಭದ್ರಾವತಿ ಕಡೆಯಿಂದ ಬಂದ ಬುಲೆರೋ ಪಿಕಪ್ ವಾಹನ ಸಂಖ್ಯೆKA14C2174 ಗಾಡಿಯಲ್ಲಿ 20ಕೆಜಿ ಗಾಂಜಾವನ್ನು ವಶ ಪಡಿಸಿಕೊಳ್ಳಲಾಗಿದೆ.  ಗೊಂದಿ ಚೆಕ್ ಪೋಸ್ಟ್ ನಲ್ಲಿ ಪೊಲೀಸ್ ಸಿಬ್ಬಂದಿಗಳು ವಾಹನ ತಪಾಸಣೆ ಮಾಡುತ್ತಿರುವಾಗ ಭದ್ರಾವತಿ ಕಡೆಯಿಂದ ಬಂದ ಬೊಲೇರೊ ಪಿಕಪ್ ನಿಲ್ಲಿಸಲು ಸೂಚಿಸಿದರು ನಿಲ್ಲಿಸಿದೆ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆಸಿ ಗಲಾಟೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಆರೋಪಿಗಳನ್ನು ವಿಚಾರಿಸಿದಾಗ ಸದರಿ ವಾಹನದಲ್ಲಿ ಆಂಧ್ರಪ್ರದೇಶದ ತುಣಿ ಎಂಬ ಊರಿನ…

Read More

ಭದ್ರಾವತಿ : ಕಡಜ ಹುಳುಗಳ ದಾಳಿಗೆ ಇಬ್ಬರು ಬಲಿ

ಭದ್ರಾವತಿ :  ತೋಟದಲ್ಲಿ ಅಡಿಕೆ ಗೊನೆ ಕೀಳುವಾಗ ಕಡಜ ಹುಳುಗಳ ದಾಳಿಯಿಂದ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ನಡೆದಿದೆ. ಜಮೀನು ಮಾಲೀಕ ನಂಜಪ್ಪ(50) ಹಾಗೂ ಕಾರ್ಮಿಕ ಸಿದ್ಲಿಪುರದ ಮಲ್ಲಿಕಾರ್ಜುನ್(52) ಮೃತರು. ಭದ್ರಾವತಿಯ ಕಾಗದ ನಗರದ ಆನೆಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತೋಟದಲ್ಲಿ ಅಡಿಕೆ ಗೊನೆ ತೆಗೆಯುವಾಗ ಆಕಸ್ಮಿಕವಾಗಿ ಗೊನೆ ಕೋಲು ಕಡಜದ ಗೂಡಿಗೆ ತಗುಲಿ ಕಡಜ ಹುಳುಗಳು ಮಲ್ಲಿಕಾರ್ಜುನ್ ಹಾಗೂ ನಂಜಪ್ಪನ ಮೇಲೆ ಏಕಾಏಕಿ ದಾಳಿ ನಡೆಸಿದ್ದವು. ತಕ್ಷಣ ಇಬ್ಬರನ್ನು ಭದ್ರಾವತಿಯ ತಾಲೂಕು…

Read More

ಭದ್ರಾವತಿ : ಸಕ್ರೀಯ ರಾಜಕಾರಣಕ್ಕೆ ಶಾರಾದ ಅಪ್ಪಾಜಿ ಗೌಡ ಎಂಟ್ರಿ

ಭದ್ರಾವತಿ : ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಗೌಡರವರ ಪತ್ನಿ ಶಾರದ ಅಪ್ಪಾಜಿ ಗೌಡ ರವರು ಶನಿವಾರ ನಗರದ ತರೀಕೆರೆ ರಸ್ತೆಯಲ್ಲಿರುವ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದರು. ಇತ್ತೀಚಿಗೆ ತಾಲೂಕಿನ ಗೋಣಿಬೀಡಿನಲ್ಲಿ ಹಮ್ಮಿಕೊಳ್ಳಲಾಗಿದ್ದ ದಿವಂಗತ ಎಂ.ಜೆ ಅಪ್ಪಾಜಿ ಗೌಡ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ನಿಂದ ಶಾರದ ಅಪ್ಪಾಜಿ ಗೌಡ ಅವರನ್ನು ಭದ್ರಾವತಿಯ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರು….

Read More

ದಳಪತಿಗಳನ್ನು ಹಾಡಿ ಹೊಗಳಿದ ಸಿ ಎಂ ಇಬ್ರಾಹಿಂ

ಭದ್ರಾವತಿ : ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ  ಕುಮಾರ ಸ್ವಾಮಿಯವರನ್ನು ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಇಂದು ಹಾಡಿಹೊಗಳಿದ್ದಾರೆ.‌ ಅವರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡಿನಲ್ಲಿ ನಡೆದ ಮಾಜಿ ಶಾಸಕ ದಿ. ಅಪ್ಪಾಜಿಗೌಡರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ  ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕಿದೆ ಎಂದರು. ಯಡಿಯೂರಪ್ಪ ಫೇಲಾದ್ರೆ, ಕುಮಾರಸ್ವಾಮಿ ಆಹಾ ರುದ್ರ, ಆಹಾ ದೇವ ಅಂತಾ ಖಡ್ಗ ಹಿಡಿದುಕೊಂಡು ಹೊರಡಬೇಕಾಗುತ್ತದೆ.ಅಂತಹ ಕೆಲಸವನ್ನು ನಾವು ಮಾಡುತ್ತೇವೆ.ಮುಂದಿನ…

Read More

ಭದ್ರಾವತಿ : ಮುಂದಿನ ಜೆಡಿಎಸ್ ಅಭ್ಯರ್ಥಿಯಾಗಿ ಶಾರದ ಅಪ್ಪಾಜಿ ಗೌಡರ ಹೆಸರು ಘೋಷಿಸಿದ ಹೆಚ್.ಡಿ.ಕುಮಾರಸ್ವಾಮಿ

ಭದ್ರಾವತಿ : ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಅಪ್ಪಾಜಿಗೌಡ ಅವರ ಪತ್ನಿ ಶಾರದಾ ಅಪ್ಪಾಜಿ ಅವರನ್ನು ಕಣಕ್ಕಿಳಿಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. ಭದ್ರಾವತಿಯ ಮುಂದಿನವಿಧಾನ ಸಭೆಯ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅಪ್ಪಾಜಿ ಗೌಡರ ಪತ್ನಿ ಶಾರದ ಅಪ್ಪಾಜಿಗೌಡರನ್ನೇ ಕಣಕ್ಕಿಳಿಸುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಅವರು ಭದ್ರಾವತಿ ತಾಲೂಕು ಗೋಣಿಬೀಡುವಿನಲ್ಲಿರುವ ಅಪ್ಪಾಜಿಗೌಡರ ತೋಟದಲ್ಲಿ ಅವರ ಪುಣ್ಯಸ್ಮರಣೆಯ ದಿನದಂದು ಪ್ರತಿಮೆಯನ್ನ ಅನಾವರಣಗೊಳಿಸಿ ಮಾಧ್ಯಮದವರ ಜೊತೆ ಮಾತನಾಡಿದರು. ಭದ್ರಾವತಿಯ ಅಪ್ಪಾಜಿ ಗೌಡರ ಅಭಿಮಾನಿಗಳು ಯಾರನ್ನು ಅಭ್ಯರ್ಥಿಯನ್ನ…

Read More

ಬೀದಿ ನಾಯಿಗಳ ಮಾರಣಹೋಮ:: 150ಕ್ಕೂ ಹೆಚ್ಚು ನಾಯಿಗಳ ಜೀವಂತ ಸಮಾಧಿ

ಶಿವಮೊಗ್ಗ: ಸುಮಾರು 150ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಜೀವಂತವಾಗಿ ಹೂತಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಗ್ರಾಮ ಪಂಚಾಯಿತಿಯ ಕಂಬದಾಳು-ಹೊಸೂರು ವ್ಯಾಪ್ತಿಯ ರಂಗನಾಥಪುರದಲ್ಲಿ ನಡೆದಿದೆ.  ತಮ್ಮಡಿಹಳ್ಳಿ ಎಂಪಿಎಂ‌ ಅರಣ್ಯದ ಎಸ್‌ಎಲ್ ನಂಬರ್ 863, 864, 865, 858ರ ಪ್ರದೇಶದಲ್ಲಿ ನಾಯಿಗಳು ಪತ್ತೆಯಾಗಿದ್ದು, ಐದು ದಿನಗಳ ಹಿಂದೆ ನಾಯಿಗಳನ್ನು ಹೂತಿಡಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.  ಬೀದಿ ನಾಯಿಗಳನ್ನು ಹಿಡಿದು ಜೀವಂತವಾಗಿ ಹೂತಿಡುವ ವೇಳೆ ನಾಯಿಗಳ ಚೀರಾಟ ಕೇಳಿದೆ. ಈ ಸಂದರ್ಭದಲ್ಲಿ ಶಿವಮೊಗ್ಗ ಎನಿಮಲ್ ರೆಸ್ಕ್ಯೂ ಕ್ಲಬ್​ಗೆ ಗ್ರಾಮದ ಯುವಕರು…

Read More

ಭದ್ರಾವತಿ: ಕೆಎಸ್ಆರ್ ಟಿಸಿ ನೌಕರ ಆತ್ಮಹತ್ಯೆಗೆ ಶರಣು

ಭದ್ರಾವತಿ : ಕೆಎಸ್ಆರ್ ಟಿಸಿ ನೌಕರರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಹೊಸ ಸಿದ್ದಾಪುರದಲ್ಲಿ ನಡೆದಿದೆ. ಕೆಎಸ್‌ಆರ್ ಟಿಸಿ ಚಾಲಕ ಗಂಗಾಧರ್ (46) ಎಂಬವರೇ ನೇಣಿಗೆ ಶರಣಾದ ವ್ಯಕ್ತಿ. ಹೊಸ ಸಿದ್ದಾಪುರದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ‌ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನೇಣಿಗೆ ಕೊರಳೊಡ್ಡುವ ಮುನ್ನ ಗಂಗಾಧರ್ ತಾನೇ ಹೂವಿನ ಹಾರ ಹಾಕಿಕೊಂಡಿದ್ದಾರೆ. ಹಾರದ ಜೊತೆಗೆ ಹೊಸ ಶರ್ಟ್ ಧರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಶಿಕ್ಷಕರು ಸಮರ್ಪಕವಾಗಿ ಜವಾಬ್ದಾರಿಯನ್ನು ನಿರ್ವಹಿಸಿದ್ದಲ್ಲಿ ದೇಶದ ಪ್ರಜಾಪ್ರಭುತ್ವ ಉಳಿಸಲು ಸಾಧ್ಯ : ಬಿ ಕೆ ಸಂಗಮೇಶ್

ಭದ್ರಾವತಿ: ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಶಿಕ್ಷಕರು ಸಮರ್ಪಕವಾಗಿ ಜವಾಬ್ದಾರಿಯನ್ನು ನಿರ್ವಹಿಸಿದ್ದಲ್ಲಿ ದೇಶದ ಪ್ರಜಾಪ್ರಭುತ್ವ ಉಳಿಸಲು ಸಾಧ್ಯ. ಅಮೂಲ್ಯ ಸೇವೆಸಲ್ಲಿಸುತ್ತಿರುವ ಶಿಕ್ಷಕರೇ ಸಮಾಜದ ನಿಜವಾದ ಸಂಪತ್ತು ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು. ನ್ಯೂಟೌನ್ ಶ್ರೀ ಸತ್ಯಸಾಯಿಬಾಬಾ ಮಂದಿರದಲ್ಲಿಂದು ಶಿಕ್ಷಕರ ದಿನಾಚರಣೆ ಸಮಿತಿ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಜನ್ಮದಿನಾಚರಣೆ ಹಾಗು ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.   ತಂದೆ-ತಾಯಿ ಮಕ್ಕಳಿಗೆ ಜನ್ಮ ನೀಡಿದರೆ, ಶಿಕ್ಷಕರು ಜ್ಞಾನ ನೀಡುವ ಪ್ರತ್ಯಕ್ಷ…

Read More