Headlines

ಭದ್ರಾವತಿ : ಕಡಜ ಹುಳುಗಳ ದಾಳಿಗೆ ಇಬ್ಬರು ಬಲಿ

ಭದ್ರಾವತಿ :  ತೋಟದಲ್ಲಿ ಅಡಿಕೆ ಗೊನೆ ಕೀಳುವಾಗ ಕಡಜ ಹುಳುಗಳ ದಾಳಿಯಿಂದ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ನಡೆದಿದೆ. ಜಮೀನು ಮಾಲೀಕ ನಂಜಪ್ಪ(50) ಹಾಗೂ ಕಾರ್ಮಿಕ ಸಿದ್ಲಿಪುರದ ಮಲ್ಲಿಕಾರ್ಜುನ್(52) ಮೃತರು.

ಭದ್ರಾವತಿಯ ಕಾಗದ ನಗರದ ಆನೆಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತೋಟದಲ್ಲಿ ಅಡಿಕೆ ಗೊನೆ ತೆಗೆಯುವಾಗ ಆಕಸ್ಮಿಕವಾಗಿ ಗೊನೆ ಕೋಲು ಕಡಜದ ಗೂಡಿಗೆ ತಗುಲಿ ಕಡಜ ಹುಳುಗಳು ಮಲ್ಲಿಕಾರ್ಜುನ್ ಹಾಗೂ ನಂಜಪ್ಪನ ಮೇಲೆ ಏಕಾಏಕಿ ದಾಳಿ ನಡೆಸಿದ್ದವು. ತಕ್ಷಣ ಇಬ್ಬರನ್ನು ಭದ್ರಾವತಿಯ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆ ಹೊತ್ತಿಗಾಗಲೇ ಇಬ್ಬರು ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ.

ಈ ಕುರಿತಂತೆ ಕಾಗದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *