Headlines

ಶಿವಮೊಗ್ಗ ಜಿಲ್ಲೆಯ ನಾಲ್ವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ :

ಶಿವಮೊಗ್ಗ : ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನ ಘೋಷಿಸಲಾಗಿದ್ದು, ಶಿವಮೊಗ್ಗ ಜಿಲ್ಲೆಗೆ ನಾಲ್ವರಿಗೆ ಈ ಪ್ರಶಸ್ತಿ ಲಭಿಸಿದೆ. ವಿವಿಧ ಕ್ಷೇತ್ರದಲ್ಲಿ ಎಲೆಮರೆಕಾಯಿಂತೆ ಕೆಲಸ ಮಾಡಿರುವ ಕಲಾವಿಧರನ್ನ ಗುರುತಿಸಿ ಅವರಿಗೆ ಪ್ರತಿ ವರ್ಷದಂತೆ ಸರ್ಕಾರ ಪ್ರಶಸ್ತಿ ನೀಡಲಾಗುತ್ತದೆ.  ಅದರಂತೆ ಈ ಬಾರಿಯೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ಸೇವಾ ಸಿಂಧು ಮೂಲಕ ಸಾರ್ವಜನಿಕರು ಮಾಡಿದ ಶಿಫಾರಸುಗಳನ್ನ ಪರಿಶೀಲಿಸಿ ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ರಚಿತವಾಗಿರುವ ಪ್ರಶಸ್ತಿ ಆಯ್ಕೆ ಸಮಿತಿ ಮತ್ತು ಪ್ರಶಸ್ತಿ ಸಲಹಾ ಸಮಿತಿಯ ಮನ್ನಣೆ ನೀಡಿದ ಹೆಸರುಗಳನ್ನ ಆಯ್ಕೆ…

Read More

ಪರಂಪರೆಯ ಜಾಡನ್ನು ವಿಶಿಷ್ಟವಾಗಿ ಶೋಧಿಸುವ ಕೃತಿ ‘ಬೇರು ಬಿಳಲು’ – ಡಾ. ಎ. ಬಿ. ರಾಮಚಂದ್ರಪ್ಪ.

ರಿಪ್ಪನ್ ಪೇಟೆ :ಪುರಾಣ ಇತಿಹಾಸ ಜಾನಪದದ ಬೇರುಗಳು ಕಾಲ ದೇಶಗಳ ಗತಿಯಲ್ಲಿ ಪಡೆದುಕೊಂಡ ರೂಪಾಂತರಗಳನ್ನು ಮತ್ತು ವರ್ತಮಾನದಲ್ಲಿ ಅವುಗಳ ಬಿಳಲುಗಳು ವಿಸ್ತಾರಗೊಂಡ  ವಿಶಿಷ್ಟತೆಯನ್ನು, ಸೂಕ್ಷ್ಮ ಸಂವಾದಕ್ಕೆ ಒಳಪಡಿಸಿರುವ ಕೃತಿ ‘ಬೇರು ಬಿಳಲು’ ಎಂದು ಚಿಂತಕರಾದ ಡಾ. ಎ. ಬಿ. ರಾಮಚಂದ್ರಪ್ಪ ಹರಿಹರ ಅವರು ಹೇಳಿದರು. ಸಾರ ಕೇಂದ್ರ ದೊಂಬೆಕೊಪ್ಪ, ವಂಶಿಪ್ರಕಾಶನ ಬೆಂಗಳೂರು, ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್,ಹೊಸನಗರ.ಸಹಮತ ವೇದಿಕೆ,ತುಮರಿ. ಕಲಾ ಸಿಂಚನ, ಸಾಗರ. ರೇಣುಕಪ್ಪಗೌಡ ಪ್ರತಿಷ್ಠಾನ ಮಸರೂರು ಇವರುಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ; ಡಾ….

Read More

ರಿಪ್ಪನ್ ಪೇಟೆ : ನೂರು ಕೋಟಿ ಜನರಿಗೆ ಲಸಿಕೆ ನೀಡಿದ ವೈದ್ಯಕೀಯ ಸಿಬ್ಬಂದಿಗಳಿಗೆ ಬಿಜೆಪಿ ಪಕ್ಷದ ವತಿಯಿಂದ ಅಭಿನಂದನೆ:

ರಿಪ್ಪನ್‌ಪೇಟೆ: ಜಗತ್ತನೆ ತಲ್ಲಣಗೊಳಿಸಿದ ಮಹಾಮಾರಿ ಕೋರೊನ ರೋಗಕ್ಕೆ ಭಾರತ ದೇಶ ಭಯಭೀತರಾಗದೆ ನೂರು ಕೋಟಿ ಜನರಿಗೆ ಉಚಿತ ಲಸಿಕೆ ನೀಡುವ ಮೂಲಕ ವೈದ್ಯಕೀಯ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಬಿಜೆಪಿ ಪಕ್ಷದ ವತಿಯಿಂದ ಅಭಿನಂದಿಸುವ ಅಭಿಯಾನ ನಡೆಯಿತು. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮವನ್ನು ಬಿ.ಜೆ.ಪಿ ಮುಖಂಡ ದತ್ತಾತ್ರಿ ಉದ್ಘಾಟಿಸಿ, ಕೋವಿಡ್ ಸಂದಂರ್ಭದಲ್ಲಿ ದೇಶದ ಜನರ ಪ್ರಾಣ ರಕ್ಷಣೆಯಲ್ಲಿ ವೈದ್ಯಕೀಯ ಸಿಬ್ಬಂಧಿಗಳು ಹಗಲಿರುಳು ಶ್ರಮಿಸಿರುವುದು ಪ್ರಶಂಸನೀಯ ಎಂದರು. ಈ ಸಂಧರ್ಭದಲ್ಲಿ  ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ಬಿಳಗೋಡು ಗಣಪತಿ,…

Read More

ಸಾಗರ : ಪೊಲೀಸರ ಮಿಂಚಿನ ಕಾರ್ಯಾಚರಣೆ : ಅಕ್ರಮ ಗೋ ಕಳ್ಳರ ಬಂಧನ

ಸಾಗರ: ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಅಕ್ರಮವಾಗಿ ಗೋವು ಕಳ್ಳತನ ಮಾಡುತ್ತಿದ್ದ ಗೋ ಕಳ್ಳರನ್ನು ಸಾಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಐದು ಆರೋಪಿ ಗಳನ್ನು ಹಾಗೂ ದನಕಳ್ಳತನಕ್ಕೆ ಬಳಸುತ್ತಿದ್ದ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರನ್ನು ವಶಕ್ಕೆ ಪಡೆದಿದ್ದಾರೆ. ರಾತ್ರಿ ವೇಳೆ ಗೋವುಗಳನ್ನು ವಾಹನದಲ್ಲಿ ತುಂಬಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋ ಕಳ್ಳತನ ಮಾಡುವ  ಐದು ಜನರ ಗುಂಪನ್ನು ವಾಹನ ಸಮೇತ ಶನಿವಾರ  ಸಾಗರ  ಪೇಟೆ ಮತ್ತು ಗ್ರಾಮಾಂತರ ಠಾಣೆಯ ಪೊಲೀಸರು ಜಂಟಿಯಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ…

Read More

ರಿಪ್ಪನ್ ಪೇಟೆ : ಯುವ ಕ್ರಿಕೆಟರ್ ತಂಡದ ವತಿಯಿಂದ ಭಾವಪೂರ್ಣ ಶ್ರದ್ದಾಂಜಲಿ :

ರಿಪ್ಪನ್ ಪೇಟೆ : ಕನ್ನಡದ ಯುವರತ್ನ  ಪವರ್‌ ಸ್ಟಾರ್‌ ಪುನೀತ್ ರಾಜ್ ಕುಮಾರ್  ರವರ ಅಕಾಲಿಕ ಮರಣದಿಂದ ಇಡೀ ಕರುನಾಡೇ ಇದೀಗ ದುಃಖದಲ್ಲಿ ಮರುಗಿದೆ.ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ ಕನ್ನಡದ ರಾಜಕುಮಾರನಿಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಟೇತಾರಿಗದಲ್ಲಿ ಯುವ ಕ್ರಿಕೆಟರ್ಸ್ ಶೆಟ್ಟಿಬೀಡು ಇವರ ವತಿಯಿಂದ ಬೃಹತ್ ಆಕಾರದ ಕಟೌಟ್ ಗೆ ಹೂವಿನ ಹಾರ ಹಾಕಿ  ಮೌನಾಚರಣೆಯೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿ ಅಗಲಿದ ನಾಯಕನಿಗೆ ಕಂಬನಿ ಮಿಡಿದರು. ಈ ಸಂಧರ್ಭದಲ್ಲಿ ಯುವ ಕ್ರಿಕೆಟರ್ ತಂಡದ ನಾಗರಾಜ್ ಎ,ರಾಜೇಶ್ ಎ,ಅಭಿ…

Read More

ಶಿವಮೊಗ್ಗ : ಶಂಕಿತ ಉಗ್ರ ಸೇರಿ ಇಬ್ಬರು ಆರೋಪಿಗಳು ಪೊಲೀಸ್ ಕಸ್ಟಡಿಗೆ :

ಶಿವಮೊಗ್ಗ : ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣದ ವಿಚಾರಣೆಗೆ ಸಂಬಂಧ ಶಂಕಿತ ಉಗ್ರ ಸೇರಿದಂತೆ ಇಬ್ಬರನ್ನು ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಬೆಂಗಳೂರಿನಿಂದ ಕರೆತರಲಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದ ಶಂಕಿತ ಉಗ್ರ ಸದ್ದಾಂ ಹುಸೇನ್ ಮತ್ತು ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸುತ್ತಿರುವ ನಾಗೇಂದ್ರ ಎಂಬುವವರನ್ನು ಶಿವಮೊಗ್ಗಕ್ಕೆ ಕರೆತರಲಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇಬ್ಬರನ್ನು ನವೆಂಬರ್ 2ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.ಉದ್ಯಮಿಗೆ ಬೆದರಿಕೆ ಪ್ರಕರಣ ಸಂಬಂಧ  ವಿಚಾರಣೆ ನಡೆಯಲಿದೆ. ಶಂಕಿತ ಉಗ್ರ ಸದ್ದಾಂ…

Read More

ಪುನೀತ್ ರಾಜ್‍ಕುಮಾರ್ ಗೆ ಶ್ರದ್ದಾಂಜಲಿ : ರಿಪ್ಪನ್ ಪೇಟೆ ಸಂಪೂರ್ಣ ಬಂದ್

ರಿಪ್ಪನ್​​​​ಪೇಟೆ : ಪುನೀತ್ ರಾಜ್​ಕುಮಾರ್ ಅಗಲಿಕೆಯಿಂದ ಇಡೀ ರಾಜ್ಯ ಶೋಕ ಸಾಗರದಲ್ಲಿ ಮುಳುಗಿದೆ. ಈ ನಡುವೆ ರಿಪ್ಪನ್​​ಪೇಟೆ ನಗರ ಸಂಪೂರ್ಣ ಬಂದ್ ಆಗಿದೆ. ಎಲ್ಲಾ ವ್ಯಾಪಾರಸ್ಥರು ತಮ್ಮ ಅಂಗಡಿ ಬಂದ್ ಮಾಡಿದ್ದು, ಪಟ್ಟಣ ಖಾಲಿ ಖಾಲಿಯಾಗಿದೆ. ಪಟ್ಟಣದ ಸರ್ಕಲ್​​​​​ನಲ್ಲಿ ಪುನೀತ್ ರಾಜ್​​ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಲಾಗಿದೆ. ಪಟ್ಟಣದ ಮೆಡಿಕಲ್ ಶಾಪ್​​​ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಬಂದ್ ಮಾಡಲಾಗಿದ್ದು, ಕೇವಲ ಬೆರಳೆಣಿಕೆಯ ಬಸ್​​ ಸಂಚಾರ ಮಾಡುತ್ತಿವೆ. ಕನ್ನಡ ಚಲನಚಿತ್ರರಂಗದ ಮೇರುನಟ ಪವರ್ ಸ್ಟಾರ್ ಪುನೀತ್…

Read More

ಯಡೇಹಳ್ಳಿ ಗ್ರಾಮ ಪಂಚಾಯತ್ ನಲ್ಲಿ ಕಾನೂನು ಅರಿವು ಕಾರ್ಯಕ್ರಮ ಬಹಿಷ್ಕರಿಸಿ ಹೊರನಡೆದ ಸದಸ್ಯರು ಕಾರಣ ಏನಂತೀರಾ ಒಮ್ಮೆ ಈ ಸ್ಟೋರಿ ನೋಡಿ.!!

ಆನಂದಪುರ : ಸರ್ಕಾರ ಇದೀಗ ಕಾನೂನಿನ ಅರಿವನ್ನು ತಿಳಿಸಲು ಗ್ರಾಮ ಪಂಚಾಯತ್ ಮಟ್ಟದಿಂದ ಕಾನೂನು ಅರಿವು ಕಾರ್ಯಕ್ರಮವನ್ನು  ನಡೆಸುತ್ತಿದೆ.ಮಹಿಳೆಯರಿಗೆ ,ಮಕ್ಕಳಿಗೆ ,ದುರ್ಬಲ ವರ್ಗದವರಿಗೆ ಕಾನೂನಿನ ಸಂಪೂರ್ಣ ಅರಿವಿರಬೇಕು ಎಂಬ ಉದ್ದೇಶದಿಂದ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳನ್ನು ಒಳಗೊಂಡು ವಕೀಲರ ತಂಡದೊಂದಿಗೆ ಆಶಾ ಕಾರ್ಯಕರ್ತರ ಸಮ್ಮುಖದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಸುತ್ತಿದೆ. ಆದರೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಯಡೇಹಳ್ಳಿ ಗ್ರಾಮ ಪಂಚಾಯತ್ ನಲ್ಲಿ ಕಾನೂನು ಅರಿವು ಕಾರ್ಯಕ್ರಮ ದಿಂದ ಕೆಲ ಸದಸ್ಯರು ಅಸಮಾಧಾನವನ್ನು ಹೊರಹಾಕಿ…

Read More

ಲೋಕಾಯುಕ್ತದ ಪವರ್ ತೋರಿಸಿದ್ದ ಎನ್ ವೆಂಕಟಾಚಲ ನಿಧನ :

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನು ಜನಪರವಾಗಿ ಬಳಸಿ, ‘ಲೋಕಾಯುಕ್ತರು ಹೀಗೂ ಕೆಲಸ ಮಾಡಬಹುದು’ ಎಂದು ಸಾಧಿಸಿ ತೋರಿಸಿದ ನ್ಯಾಯಮೂರ್ತಿ ಎನ್.ವೆಂಕಟಾಚಲ (90) ಬುಧವಾರ ಬೆಳಿಗ್ಗೆ 6 ಗಂಟೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ನ್ಯಾಯಮೂರ್ತಿ ವೆಂಕಟಾಚಲ ಅವರು ಲೋಕಾಯುಕ್ತರಾಗಿ ನೇಮಕಗೊಂಡ ನಂತರವೇ ಸರ್ಕಾರಿ ಅಧಿಕಾರಿಗಳಲ್ಲಿ ಲೋಕಾಯುಕ್ತ ಭಯವನ್ನು ಉಂಟು ಮಾಡಿತು. ಲೋಕಾಯುಕ್ತ ಸಂಸ್ಥೆಯಿಂದ ತಮ್ಮ ನೋವುಗಳಿಗೆ ಪರಿಹಾರ ಸಿಗುತ್ತದೆ ಎಂಬ ಭಾವನೆ ಜನರಲ್ಲಿಯೂ ಬಂತು. ‘ಬಳ್ಳಾರಿ ರಸ್ತೆಯ…

Read More

ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣಕ್ಕೆ ಆನಂದಪುರ ಸಂಪೂರ್ಣ ಬಂದ್.!

ಆನಂದಪುರ : ಕನ್ನಡದ ಕುವರ ವರನಟ ಡಾಕ್ಟರ್ ರಾಜ್ ಕುಮಾರ್ ಅವರ ಕಿರಿಯ ಪುತ್ರ ದೊಡ್ಮನೆ ಹುಡುಗ ನಟ ಪುನೀತ್ ರಾಜ್ ಕುಮಾರ್ ರವರ ಅಕಾಲಿಕ ಮರಣ ಇಡೀ ಕರುನಾಡಿಗೆ ಇದೀಗ ನೋವನ್ನುಂಟು ಮಾಡಿದೆ. ಕೋಟ್ಯಂತರ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಪುನೀತ್ ರಾಜ್ ಕುಮಾರ್ ರವರ ಮರಣವನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಗೆ ಇಂದು ಕರುನಾಡು ಬಂದಿದೆ. ಅತಿ ಕಿರಿಯ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ರವರ ಅಕಾಲಿಕ ನಿಧನಕ್ಕೆ ಶಿವಮೊಗ್ಗ ಜಿಲ್ಲೆ…

Read More